ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು....ಮಹಾ ಚುನಾವಣೆ: ಮತದಾರರು ಬೂತ್‌ಗಳಿಗೆ ತೆರಳಲು QR ಕೋಡ್‌ ಪರಿಚಯ...ನವೆಂಬರ್ 25ರಿಂದ ಸಂಸತ್ ಚಳಿಗಾಲದ ಅಧಿವೇಶನ: ಭಾನುವಾರ ಸರ್ವಪಕ್ಷ ಸಭೆ...

‘ಬಿಪೊರ್ ಜೋಯ್’ ಅಬ್ಬರ: ಗುಜರಾತ್ ನ ಭಾವನಗರ ಜಿಲ್ಲೆಯಲ್ಲಿ ತಂದೆ-ಮಗ ಸಾವು, ಧರೆಗುರುಳಿದ ವಿದ್ಯುತ್ ಕಂಬಗಳು, ಮರಗಳು

ಗಾಂಧಿನಗರ/ಅಹಮದಾಬಾದ್: ನಿನ್ನೆ ಗುರುವಾರ ಸಂಜೆ ಗುಜರಾತಿನ ಜಖೌ ಬಂದರಿನ ಬಳಿ ಬಿಪೊರ್‌ಜೋಯ್ ಚಂಡಮಾರುತ ತೀವ್ರ ಪ್ರಮಾಣದಲ್ಲಿ ಬೀಸಿ ಭೂಕುಸಿತವನ್ನು ಉಂಟುಮಾಡಿತು, ಗಂಟೆಗೆ 115-125 ಕಿಲೋಮೀಟರ್ ವೇಗದಲ್ಲಿ 140 ಕಿಲೋ ಮೀಟರ್ ಪ್ರದೇಶದವರೆಗೆ ಗಾಳಿ ಬೀಸಿದ್ದು ಭಾರಿ ಮಳೆಯಾಗಿದೆ.

ಗುಜರಾತ್ ನ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆ ಸುರಿದಿದೆ. ವಿದ್ಯುತ್ ಕಂಬಗಳು ಮತ್ತು ಹೋರ್ಡಿಂಗ್‌ಗಳು ನೆಲಕ್ಕುರುಳಿದ್ದು ವಿದ್ಯುತ್ ಸಂಪರ್ಕ ಕಡಿತವಾಗಿ ಪ್ರದೇಶಗಳು ಕತ್ತಲೆಯಲ್ಲಿ ಮುಳುಗಿದವು.

ಚಂಡಮಾರುತ ಪೀಡಿತ ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಹಲವು ತಂಡಗಳೊಂದಿಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಯಾವುದೇ ತುರ್ತು ಪರಿಸ್ಥಿತಿಗಾಗಿ ಸಶಸ್ತ್ರ ಪಡೆಗಳು ಸನ್ನದ್ಧವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಂದೆ-ಮಗ ಸಾವು: ಭಾವನಗರ ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿದ ತಮ್ಮ ಮೇಕೆಗಳನ್ನು ರಕ್ಷಿಸುವ ಪ್ರಯತ್ನದಲ್ಲಿ ತಂದೆ-ಮಗ ಮೃತಪಟ್ಟಿದ್ದಾರೆ. ಚಂಡಮಾರುತದಿಂದ ಗುಜರಾತ್ ನ ಭಾವನಗರ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಸಾಕಷ್ಟು ಮಳೆಯಾಗಿದೆ.

ಸಿಹೋರ್ ಪಟ್ಟಣದ ಬಳಿಯ ಭಂಡಾರ್ ಗ್ರಾಮದ ಮೂಲಕ ಹಾದುಹೋಗುವ ಕಮರಿಯಲ್ಲಿ ನೀರು ಹರಿಯಲು ಪ್ರಾರಂಭಿಸಿತು. ಹಠಾತ್ ನೀರಿನ ಒಳಹರಿವಿನಿಂದಾಗಿ, ಮೇಕೆಗಳ ಹಿಂಡು ಕಂದರದಲ್ಲಿ ಸಿಲುಕಿಕೊಂಡಿತು. ಪ್ರಾಣಿಗಳನ್ನು ರಕ್ಷಿಸಲು, 55 ವರ್ಷದ ರಾಮ್ಜಿ ಪರ್ಮಾರ್ ಮತ್ತು ಅವರ ಮಗ ರಾಕೇಶ್ ಪರ್ಮಾರ್ (22) ಕಂದರವನ್ನು ಪ್ರವೇಶಿಸಿದರು. ಆದರೆ ನೀರಿನ ರಭಸಕ್ಕೆ ಕೊಚ್ಚಿಹೋದರು. 22 ಮೇಕೆಗಳು ಮತ್ತು ಒಂದು ಕುರಿ ಕೂಡ ನಿನ್ನೆ ಚಂಡಮಾರುತಕ್ಕೆ ಸಿಲುಕಿ ಮೃತಪಟ್ಟಿವೆ.

ಚಂಡಮಾರುತಕ್ಕೆ ಸಂಬಂಧಿಸಿದ ಯಾವುದೇ ಘಟನೆಯಿಂದಾಗಿ ಕಚ್‌ನಲ್ಲಿ ಇದುವರೆಗೆ ಯಾರೂ ಮೃತಪಟ್ಟಿಲ್ಲ. ಗಂಟೆಗೆ ಸುಮಾರು 80 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿರುವ ಗಾಳಿಯಿಂದಾಗಿ ಕೆಲವು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಸಮವಾಗಿವೆ ಎಂದು ಹೇಳಿದರು.

ವಿದ್ಯುತ್ ಕಡಿತದಿಂದ ರಾಜ್ಯದ ಹಲವಾರು ಪ್ರದೇಶಗಳು ಕತ್ತಲೆಯಲ್ಲಿ ಮುಳುಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಗಾಂಧಿನಗರದಲ್ಲಿರುವ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದಲ್ಲಿ ಪರಿಸ್ಥಿತಿ ಮತ್ತು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಪರಿಶೀಲಿಸಿದರು.

ಅತಿ ತೀವ್ರ ಚಂಡಮಾರುತದ’ ಭೂಕುಸಿತ ಪ್ರಕ್ರಿಯೆಯು ಸೌರಾಷ್ಟ್ರ-ಕಚ್ ತೀರದಲ್ಲಿ ಸಂಜೆ 6:30 ರ ಸುಮಾರಿಗೆ ಪ್ರಾರಂಭವಾಯಿತು. ಮಧ್ಯರಾತ್ರಿಯ ವೇಳೆಗೆ ಭೂಮಿಯಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

10 ದಿನಗಳಿಗೂ ಹೆಚ್ಚು ಕಾಲ ಅರಬ್ಬಿ ಸಮುದ್ರದಾದ್ಯಂತ ಚಂಡಮಾರುತ ಜಖೌ ಬಂದರಿನ ನೈಋತ್ಯಕ್ಕೆ 20 ಕಿಮೀ, ದೇವಭೂಮಿ ದ್ವಾರಕಾದಿಂದ 120 ಕಿಮೀ ವಾಯುವ್ಯ ಮತ್ತು ನಲಿಯಾದಿಂದ 50 ಕಿಮೀ ಪಶ್ಚಿಮ ನೈಋತ್ಯದಲ್ಲಿ ನೆಲೆಗೊಂಡಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಂಡಮಾರುತದ ಭೂಕುಸಿತವು ಮಧ್ಯರಾತ್ರಿಯವರೆಗೆ ಮುಂದುವರಿಯುತ್ತದೆ. ಇಂದು ಬೆಳಿಗ್ಗೆ ಅದು ‘ಸೈಕ್ಲೋನಿಕ್ ಚಂಡಮಾರುತ’ವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ ಎಂದು IMD ಅಹಮದಾಬಾದ್ ನಿರ್ದೇಶಕಿ ಮನೋರಮಾ ಮೊಹಂತಿ ಹೇಳಿದ್ದಾರೆ.

No Comments

Leave A Comment