ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ರಾಜ್ಯ ಬಿಜೆಪಿಗೆ ಅಶ್ವತ್ಥ ನಾರಾಯಣ ಸಾರಥಿ? ಯತ್ನಾಳ್ ವಿಧಾನಸಭೆ ವಿರೋಧ ಪಕ್ಷದ ನಾಯಕ; ಒಕ್ಕಲಿಗ-ಲಿಂಗಾಯತ ಸಮೀಕರಣ!

ಬೆಂಗಳೂರು: ವಿಧಾನಸಭೆ ಚುನಾವಣೆ ಫಲಿತಾಂಶ ಬಂದು ಒಂದು ತಿಂಗಳು ಕಳೆದರೂ 66 ಶಾಸಕರಿರುವ ಬಿಜೆಪಿ ಇನ್ನೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ.

ಜುಲೈನಲ್ಲಿ ವಿಧಾನಮಂಡಲದ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ, ಬಿಜೆಪಿ ಈ ವಾರದ ಅಂತ್ಯದ ವೇಳೆಗೆ ವಿರೋಧ ಪಕ್ಷದ ನಾಯಕ ಮತ್ತು ಪಕ್ಷದ ರಾಜ್ಯಾಧ್ಯಕ್ಷರ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ. ಉನ್ನತ ಹುದ್ದೆಗಳಿಗೆ ಲಿಂಗಾಯತ-ಒಕ್ಕಲಿಗ ಸಂಯೋಜನೆಗೆ ಹೈಕಮಾಂಡ್ ಒಲವು ತೋರಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇನ್ನೆರಡು ದಿನಗಳಲ್ಲಿ ಪಕ್ಷದ ವರಿಷ್ಠರು ಹೆಸರು ಪ್ರಕಟಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ. ಹೈಕಮಾಂಡ್ ತಡ ಮಾಡದೆ ಹೆಸರುಗಳನ್ನು ಪ್ರಕಟಿಸಬೇಕು, ಉನ್ನತ ನಾಯಕರ ಮನಸ್ಸಿನಲ್ಲಿ ಕೆಲವು ಹೆಸರುಗಳಿವೆ ಹೀಗಾಗಿ ಅವರು, ಪಕ್ಷದ ಶಾಸಕರು, ಎಂಎಲ್‌ಸಿಗಳು, ಜಿಲ್ಲಾಧ್ಯಕ್ಷರು ಮತ್ತು ಇತರ ನಾಯಕರಿಂದ ಪ್ರತಿಕ್ರಿಯೆ ಪಡೆದಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅವಧಿ ಆಗಸ್ಟ್ 2022 ರಲ್ಲಿ ಕೊನೆಗೊಂಡಿತು. ವಿಧಾನಸಭಾ ಚುನಾವಣೆಯ ಕಾರಣ, ಅವರ ಅವಧಿಯನ್ನು ವಿಸ್ತರಿಸಲಾಯಿತು. “ನಾಲ್ಕು ವರ್ಷಗಳ ನಂತರ, ಬಿಜೆಪಿಗೆ ಹೊಸ ಪಕ್ಷದ ಅಧ್ಯಕ್ಷರು ಸಿಗಲಿದ್ದಾರೆ. ಮಾಜಿ ಸಚಿವರಾದ ಸುನೀಲ್ ಕುಮಾರ್ ಮತ್ತು ಡಾ ಸಿಎನ್ ಅಶ್ವಥ್ ನಾರಾಯಣ ಅವರ ಹೆಸರುಗಳು ಕೇಳಿ ಬರುತ್ತಿವೆ, ಇರಲ್ಲದೆ ಮತ್ತಷ್ಟು ನಾಯಕರುಗಳ ಹೆಸರುಗಳು ಸುತ್ತುತ್ತಿವೆ.

ಲಿಂಗಾಯತ ಸಮುದಾಯದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಹೈಕಮಾಂಡ್ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬಿಜೆಪಿಯ ಮತ್ತೊಬ್ಬ ಲಿಂಗಾಯತ ಶಾಸಕ ಅರವಿಂದ್ ಬೆಲ್ಲದ್ ಕೂಡ ಸ್ಪರ್ಧೆಯಲ್ಲಿದ್ದಾರೆ.

ಈ ಸಮುದಾಯದ ಮತದಾರರನ್ನು ಸಂತೋಷವಾಗಿಡುವುದು ಅವರಿಗೆ ಮುಖ್ಯವಾದ ಕಾರಣ ಪಕ್ಷದ ಹೈಕಮಾಂಡ್ ಲಿಂಗಾಯತ-ಒಕ್ಕಲಿಗ ಸಂಯೋಜನೆಯನ್ನು ಬಯಸುತ್ತದೆ ಎಂದು ಮೂಲಗಳು ತಿಳಿಸಿವೆ.

ಒಕ್ಕಲಿಗ ಮತಗಳು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿದ್ದು, ಲಿಂಗಾಯತ ಮತದಾರರು ಬಿಜೆಪಿಯಿಂದ ದೂರ ಸರಿದಿದ್ದಾರೆ ಎಂದು ವಿಧಾನಸಭಾ ಸಮೀಕ್ಷೆಗಳು ತೋರಿಸಿವೆ. ಅಲ್ಲದೆ, ಮಲ್ಲೇಶ್ವರಂನಿಂದ ಅಶ್ವಥ್ ನಾರಾಯಣ ಮತ್ತು ಉತ್ತರ ಕರ್ನಾಟಕದ ವಿಜಯಪುರದಿಂದ ಯತ್ನಾಳ್ ಅವರನ್ನು ಆಯ್ಕೆ ಮಾಡುವ ಮೂಲಕ ಪಕ್ಷವು ಪ್ರದೇಶವಾರು ಭದ್ರಕೋಟೆಯನ್ನು ಹೊಂದುವ ಲೆಕ್ಕಾಚಾರದಲ್ಲಿದೆ ಎಂದು ಮೂಲಗಳು ತಿಳಿಸಿವೆ.

No Comments

Leave A Comment