ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಶಕ್ತಿ ಯೋಜನೆ: 2ನೇ ದಿನ 41. 34 ಲಕ್ಷ ಮಹಿಳೆಯರು ಉಚಿತ ಪ್ರಯಾಣ, ಇವರ ಟಿಕೆಟ್ ವೆಚ್ಚ 8.83 ಕೋಟಿ!

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಸಾರಿಗೆ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ ರಾಜ್ಯ  ಸರ್ಕಾರ ಭಾನುವಾರ ಚಾಲನೆ ನೀಡಿದ್ದು, ಎರಡನೇ ದಿನವಾದ ಸೋಮವಾರ ಬರೋಬ್ಬರಿ 41. 34 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ.

ಶಕ್ತಿ ಯೋಜನೆಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಮೊದಲ ದಿನವಾದ ಭಾನುವಾರ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 12ರವರೆಗೆ ಒಟ್ಟು 5.71 ಲಕ್ಷ ಮಹಿಳೆಯರು ಪ್ರಯಾಣಿಸಿದ್ದರು. ಎರಡನೇ ದಿನವಾದ ಸೋಮವಾರ ಒಟ್ಟು 41,34,726 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಬಿಎಂಟಿಸಿ ಬಸ್​ನಲ್ಲಿ ಒಟ್ಟು 17,57,887, ಕೆಎಸ್ಆರ್ ಟಿಸಿಯಲ್ಲಿ 11,40,057 ಮಹಿಳೆಯರು,  ವಾಯವ್ಯ ಸಾರಿಗೆ ಬಸ್​ನಲ್ಲಿ 8,31,840, ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 4,04,942 ಮಹಿಳೆಯರು ಪ್ರಯಾಣಿಸಿದ್ದು, ಇವರ ಪ್ರಯಾಣದ ಟಿಕೆಟ್​​ ವೆಚ್ಚ 8,83,53,434 ರೂ. ಆಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಭಾನುವಾರ ಶಕ್ತಿ ಯೋಜನೆಗೆ ಚಾಲನೆ ಸಿಕ್ಕಿದ್ದರೂ ವಾರಾಂತ್ಯವಾದ ಕಾರಣ ಕಚೇರಿಗಳಿಗೆ ರಜೆ ಇತ್ತು. ಆದರೆ ಸೋಮವಾರ ಕೆಲಸದ ದಿನವಾಗಿದ್ದರಿಂದ ಹೆಚ್ಚಿನ‌ ಸಂಖ್ಯೆಯಲ್ಲಿ ಮಹಿಳೆಯರು ಸಂಚರಿಸಿದ್ದಾರೆ.

No Comments

Leave A Comment