ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.
ಮುಂದಿನ ನಾಲ್ಕು ವಾರ ಮುಂಗಾರು ದುರ್ಬಲ: ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಕಳವಳ
ಬೆಂಗಳೂರು: ಭಾರತದಲ್ಲಿ ಮುಂದಿನ 4 ವಾರ ಮುಂಗಾರು ಮಾರುತಗಳು ದುರ್ಬಲವಾಗಿರಲಿದೆ ಎಂದು ಹವಾಮಾನದ ಬಗ್ಗೆ ಮುನ್ಸೂಚನೆ ನೀಡುವ ಖಾಸಗಿ ಸಂಸ್ಥೆ ‘ಸ್ಕೈಮೆಟ್ ವೆದರ್’ ಸೋಮವಾರ ತಿಳಿಸಿದೆ.
ದುರ್ಬಲ ಮುಂಗಾರು ಮಾರುತಗಳು ಕೃಷಿಯ ಮೇಲಿನ ಪರಿಣಾಮಗಳ ಬಗ್ಗೆಯೂ ಸ್ಕೈಮೆಟ್ ಕಳವಳ ವ್ಯಕ್ತಪಡಿಸಿದ್ದು, ‘ಎಕ್ಸ್‌ಟೆಂಡೆಡ್ ರೇಂಜ್ ಪ್ರಿಡಿಕ್ಷನ್ ಸಿಸ್ಟಮ್ (ದೀರ್ಘ ಕಾಲದ ಹವಾಮಾನ ಮುನ್ಸೂಚನೆ ನೀಡುವ ವ್ಯವಸ್ಥೆ)–ಇಆರ್‌ಪಿಎಸ್’ ಜುಲೈ 6 ರವರೆಗೆ ಅಥವಾ ಮುಂದಿನ ನಾಲ್ಕು ವಾರಗಳವರೆಗೆ ನಿರಾಶಾದಾಯಕ ಸೂಚನೆಗಳನ್ನು ನೀಡಿದೆ.
ಇದು ಬಿತ್ತನೆಯ ನಿರ್ಣಾಯಕ ಸಮಯವಾಗಿದ್ದು, ಮಳೆ ನಿರೀಕ್ಷೆಯೊಂದಿಗೆ ರೈತರು ಭೂಮಿ ಹದಗೊಳಿಸುವ ಹೊತ್ತಾದಗಿದೆ. ಮಧ್ಯ ಭಾರತ ಮತ್ತು ಪಶ್ಚಿಮ ಭಾಗಗಳು ಋತುವಿನ ಆರಂಭದಲ್ಲಿ ಅಸಮರ್ಪಕ ಮಳೆಯಿಂದಾಗಿ ಒಣಹವೆ ಎದುರಿಸಲಿವೆ’ ಎಂದು ಅದು ಹೇಳಿದೆ.
ಬಿಪೋರ್ಜೋಯ್ ಚಂಡಮಾರುತದ ಅಡ್ಡಪರಿಣಾಮ
ಇನ್ನು ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಬಿಪೊರ್ಜೊಯ್ ಚಂಡಮಾರುತವು ಮೊದಲು ಮುಂಗಾರು ಪ್ರವೇಶವನ್ನು ವಿಳಂಬಗೊಳಿಸಿತ್ತು. ಇದೇ ಚಂಡಮಾರುತ ಈಗ ಮುಂಗಾರು ಮಾರುತಗಳ ವ್ಯವಸ್ಥೆಯ ಪ್ರಗತಿಗೆ ಅಡ್ಡಿಯಾಗುತ್ತಿದೆ. ಜತೆಗೆ ಮಾರುತಗಳು ಒಳನಾಡು ಪ್ರವೇಶವನ್ನೂ ತಡೆಯುತ್ತಿದೆ. ಮುಂಗಾರು ಮಾರುತಗಳು ಸಾಮಾನ್ಯವಾಗಿ ಮಹಾರಾಷ್ಟ್ರ, ಒಡಿಶಾ, ತೆಲಂಗಾಣದ ಅರ್ಧಭಾಗ, ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಬಿಹಾರವನ್ನು ಜೂನ್ 15ರ ವೇಳೆಗೆ ಆವರಿಸುತ್ತದೆ. ಈ ಬಾರಿ ಪಶ್ಚಿಮಘಟ್ಟ ದಾಟಿ ಒಳನಾಡು ಪ್ರವೇಶಿಸಲು ಹೆಣಗಾಡುತ್ತಿದೆ ಎಂದು ಸ್ಕೈಮೆಟ್ ಹೇಳಿದೆ.
ಸದ್ಯ, ಮಾನ್ಸೂನ್ ಮಾರುತ ಈಶಾನ್ಯ ಮತ್ತು ಪಶ್ಚಿಮ ಕರಾವಳಿಗೆ ಮಾತ್ರವೇ ಸೀಮಿತವಾಗಿದೆ. ದುರದೃಷ್ಟವಶಾತ್, ಮುಂಗಾರು ಮಾರುತಗಳಿಗೆ ಪೂರಕವಾಗಿ ಬಂಗಾಳ ಕೊಲ್ಲಿಯಲ್ಲಿ ಹವಾಮಾನ ವ್ಯವಸ್ಥೆಗಳು ಅಭಿವೃದ್ಧಿಯಾಗುವ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ. ನೈಋತ್ಯ ಮುಂಗಾರು ಮಾರುತಗಳು ಈ ಬಾರಿ ಜೂನ್ 1ರ ಬದಲಿಗೆ, ಒಂದು ವಾರ ವಿಳಂಬವಾಗಿ ಕೇರಳ ಪ್ರವೇಶಿಸಿವೆ ಎಂದು ಸ್ಕೈಮೆಟ್ ಹೇಳಿದೆ.
ಪ್ರಸ್ತುತ, ಮಾನ್ಸೂನ್ ಉಲ್ಬಣವು ಈಶಾನ್ಯ ಮತ್ತು ಪಶ್ಚಿಮ ಕರಾವಳಿಗೆ ಸೀಮಿತವಾಗಿದೆ. ದುರದೃಷ್ಟವಶಾತ್, ಮುಂದಿನ ದಿನಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಹವಾಮಾನ ವ್ಯವಸ್ಥೆಗಳು ಹೊರಹೊಮ್ಮುವ ಯಾವುದೇ ಲಕ್ಷಣಗಳಿಲ್ಲ, ಅವು ಮಾನ್ಸೂನ್‌ನ ನಿರ್ಣಾಯಕ ಚಾಲಕಗಳಾಗಿವೆ ಎಂದು ಸ್ಕೈಮೇಟ್ ಅಭಿಪ್ರಾಯಪಟ್ಟಿದೆ.