Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಪಲಿಮಾರುಶ್ರೀಗಳಿಗೆ ಮಾತೃ ವಿಯೋಗ

ಕಟೀಲು: ಖ್ಯಾತ ವೈದಿಕರಾಗಿದ್ದ ದಿ. ಶಿಬರೂರು ಹಯಗ್ರೀವ ತಂತ್ರಿಯವರ ಪತ್ನಿ, ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಮಾತೃಶ್ರೀ ಕಸ್ತೂರಿಯಮ್ಮ ಮಂಗಳವಾರ ಬೆಳಿಗ್ಗೆ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಕಟೀಲು ಸೇರಿದಂತೆ ವಿವಿಧ ದೇಗುಲಗಳ ತಂತ್ರಿಗಳಾಗಿರುವ ನಿವೃತ್ತ ಉಪನ್ಯಾಸಕ ವೇದವ್ಯಾಸ ತಂತ್ರಿ ಹಾಗೂ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.

ಶಿಬರೂರು ಮಠ ಹಯಗ್ರೀವ ತಂತ್ರಿ ತನ್ನ ಮನೆಯಲ್ಲೇ ನೂರಾರು ಮಂದಿ ವೈದಿಕರಿಗೆ ಗುರುಗಳಾಗಿ ಪಾಠ ಮಾಡಿದ್ದರು. ಕಸ್ತೂರಿಯಮ್ಮ ತಂತ್ರಿಗಳ ಶಿಷ್ಯರನ್ನು ಊಟ ಉಪಾಹಾರವಿತ್ತು ಸಲಹಿದ್ದರು.

No Comments

Leave A Comment