ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.

ಒಡಿಶಾ: ಅಪಘಾತದ 51 ಗಂಟೆಗಳ ನಂತರ ಬಾಲಸೋರ್ ನಲ್ಲಿ ರೈಲು ಸಂಚಾರ ಆರಂಭ; ಕೈ ಮುಗಿದ ಸಚಿವ ಅಶ್ವಿನ್ ವೈಷ್ಣವ್

ಭುವನೇಶ್ವರ: ಕಳೆದ ಶುಕ್ರವಾರ ಮೂರು ರೈಲುಗಳ ಭೀಕರ ಅಪಘಾತದಿಂದಾಗಿ ಹಾನಿಗೊಳಗಾದ ಒಡಿಶಾದ ಬಾಲಸೋರ್‌ನ ಬಹನಾಗ ಗ್ರಾಮದ ಹಳಿಗಳ ಮೇಲೆ ಭಾರತೀಯ ರೈಲ್ವೆ ಇಲಾಖೆಯಿಂದ ಪ್ರಯಾಣಿಕರ ರೈಲು ಇಂದು ಸೋಮವಾರ 51 ಗಂಟೆಗಳ ಬಳಿಕ ಸಂಚಾರ ಪುನಾರಂಭವಾಗಿದೆ.

ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ರೈಲುಗಳ ಅಪಘಾತದಲ್ಲಿ 275 ಜನರು ಮೃತಪಟ್ಟಿದ್ದರು. 1,000 ಕ್ಕೂ ಹೆಚ್ಚು ಜನರು ಗಾಯಗೊಂಡರು, ಭಾರತೀಯ ರೈಲ್ವೆ ಸೋಮವಾರ ಅಪಘಾತ ಪೀಡಿತ ಮಾರ್ಗದ ಹಳಿಗಳ ಮೇಲೆ ಪ್ರಯಾಣಿಕ ರೈಲುಗಳ ಓಡಾಟವನ್ನು ಪುನರಾರಂಭಿಸಿದೆ.

ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ನಿನ್ನೆ ಗೂಡ್ಸ್ ರೈಲಿನ ಸಿಬ್ಬಂದಿಗೆ ಕೈ ಬೀಸಿ ಸುರಕ್ಷಿತ ಪ್ರಯಾಣಕ್ಕಾಗಿ ಪ್ರಾರ್ಥಿಸಿದರು. ಎರಡೂ ಹಳಿಗಳ ಸೇವೆಗಳನ್ನು ಪುನಃಸ್ಥಾಪಿಸಲಾಗಿದೆ. ಅಪಘಾತದ 51 ಗಂಟೆಗಳ ನಂತರ ಎರಡೂ ಮಾರ್ಗಗಳಲ್ಲಿ ಸಾಮಾನ್ಯ ರೈಲು ಸೇವೆಗಳನ್ನು ಈಗ ಪುನಾರಂಭ ಮಾಡಲಾಗಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಅಶ್ವಿನ್ ವೈಷ್ಣವ್, ವಿದ್ಯುನ್ಮಾನ ಇಂಟರ್ ಲಾಕಿಂಗ್ ಬದಲಾವಣೆಯಿಂದ ಅಪಘಾತ ಸಂಭವಿಸಿದೆ ಎಂದು ಹೇಳಿದರು.

ಇಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಎನ್ನುವುದು ಸಿಗ್ನಲ್ ಉಪಕರಣದ ಒಂದು ವ್ಯವಸ್ಥೆಯಾಗಿದ್ದು ಅದು ಹಳಿಗಳ ಜೋಡಣೆಯ ಮೂಲಕ ರೈಲುಗಳ ನಡುವೆ ಸಂಘರ್ಷದ ಚಲನೆಯನ್ನು ತಡೆಯುತ್ತದೆ. ಅಸಮರ್ಪಕ ಅನುಕ್ರಮದಲ್ಲಿ ಸಂಕೇತಗಳನ್ನು ಬದಲಾಯಿಸುವುದನ್ನು ತಡೆಯಲು ಇದು ಮೂಲಭೂತವಾಗಿ ಸುರಕ್ಷತಾ ಕ್ರಮವಾಗಿದೆ. ಮಾರ್ಗವು ಸುರಕ್ಷಿತವೆಂದು ಸಾಬೀತುಪಡಿಸದ ಹೊರತು ಯಾವುದೇ ರೈಲು ಮುಂದುವರಿಯಲು ಸಂಕೇತವನ್ನು ಪಡೆಯುವುದಿಲ್ಲ ಎಂಬುದು ಈ ವ್ಯವಸ್ಥೆಯಾಗಿದೆ.

ಇನ್ನು 275 ಜನರ ಸಾವಿಗೆ ಕಾರಣವಾದ ಮತ್ತು 1000 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ರೈಲು ಅಪಘಾತದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (CBI) ವಹಿಸಲಾಗಿದೆ.

ಈ ಅಪಘಾತ ಸಂಭವಿಸಿದ ರೀತಿ, ಪರಿಸ್ಥಿತಿಗಳನ್ನು ನೋಡುವುದು ಮತ್ತು ಆಡಳಿತಾತ್ಮಕ ಮಾಹಿತಿಯ ಪ್ರಕಾರ. ರೈಲ್ವೆ ಮಂಡಳಿಯು ಸಿಬಿಐಗೆ ತನಿಖೆಯನ್ನು ಶಿಫಾರಸು ಮಾಡುತ್ತಿದೆ ಎಂದು ಅಶ್ವಿನ್ ವೈಷ್ಣವ್ ಹೇಳಿದ್ದಾರೆ.

ಮೊನ್ನೆ ಜೂನ್ 2ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ದಕ್ಷಿಣ ಕೋಲ್ಕತ್ತಾದಿಂದ ಸುಮಾರು 250 ಕಿಲೋ ಮೀಟರ್ ದೂರದಲ್ಲಿ ಮತ್ತು ಭುವನೇಶ್ವರಿಂದ 170 ಕಿಲೋ ಮೀಟರ್ ದೂರದಲ್ಲಿರುವ ಬಾಲಸೋರೆ ಜಿಲ್ಲೆಯ ಬಹನಗ ಬಜಾರ್ ನಿಲ್ದಾಣದಲ್ಲಿ ಈ ದುರ್ಘಟನೆ ನಡೆದಿದೆ. ಬೆಂಗಳೂರು-ಹೌರಾ ಎಕ್ಸ್ ಪ್ರೆಸ್ ಮತ್ತು ಶಾಲಿಮಾರ್-ಚೆನ್ನೈ ಕೊರೊಮಂಡಲ್ ಎಕ್ಸ್ ಪ್ರೆಸ್ ಮತ್ತು ಗೂಡ್ಸ್ ರೈಲಿನ ನಡುವೆ ಅಪಘಾತ ಸಂಭವಿಸಿತು.

No Comments

Leave A Comment