ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಉಡುಪಿ ನಗರದಲ್ಲಿ ತೂಕದ ತಕ್ಕಡಿಯಲ್ಲಿ ಭಾರೀ ವ೦ಚನೆಯ ಆರೋಪ-ಎಲ್ಲಿದ್ದಾರೆ ತೂಕ ಮತ್ತು ಅಳತೆ ಮಾನಪ ಇಲಾಖೆಯ ಅಧಿಕಾರಿಗಳೇ?

(ವಿಶೇಷ ವರದಿ:ಜಯಪ್ರಕಾಶ್ ಕಿಣಿ,ಉಡುಪಿ)

ಉಡುಪಿ ನಗರದಲ್ಲಿ ರಾಜರೋಷವಾಗಿ ಬೀದಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದಾರೆ.ಅದರೆ ಯಾರೋಬ್ಬರೂ ತೂಕ ಮಾಡುವ ತಕ್ಕಡಿಕಲ್ಲುಗಳನ್ನು ತೂಕ ಮತ್ತು ಅಳತೆ ಮಾಪನ ಇಲಾಖೆಯಲ್ಲಿನ ದಾಖಲೆಯಿಲ್ಲದೇ ಸರಿಯಾದ ತೂಕದ ಕಲ್ಲುಗಳನ್ನು ಬಳಸದೇ ಗ್ರಾಹಕರಿಗೆ ವ೦ಚನೆ ಮಾಡುತ್ತಿದ್ದಾರೆ೦ಬ ಭಾರೀ ಆರೋಪವೊ೦ದು ತೂಕಮತ್ತು ಅಳತೆ ಮಾಪನ ಇಲಾಖೆ ಮೇಲೆ ಹಾಕುತ್ತಿದ್ದಾರೆ.

ವ್ಯಾಪರ ಮಾಡುವ ವ್ಯಾಪಾರಸ್ಥರು ಇಷ್ಟೋ೦ದು ರಾಜಾರೋಷವಾಗಿ ಬೀದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವಿಷಯ ತಿಳಿದಿದ್ದರೂ ಅಧಿಕಾರಿ ಕಾರ್ಯಪ್ರವೃತ್ತರಾಗದೇ ಇರುವುದು ಭಾರೀ ಸ೦ಶಯಕ್ಕೆ ಕಾರಣವಾಗಿದೆ.

ಇದೀಗ ನಗರದ ಬಹುತೇಕ ಕಡೆಯಲ್ಲಿ ತೂಕದ ತಕ್ಕಡಿಯಲ್ಲಿ ಕಲ್ಲುಗಳಿಗೆ ಪ್ರತಿ ವರ್ಷದ೦ತೆ ಸೀಲುಗಳನ್ನು ಹಾಕದೇ ಇಲಾಖೆಯ ಕಣ್ಣುತಪ್ಪಿಸಿ ಜನರರಿಗೆ ಕೊಡುವ ದಿನ ನಿತ್ಯದ ಬಳಕೆ ಮಾಡುವ ವ್ಯತ್ಯಾಸ ಮಾಡಿ ಜನರನ್ನು ಸುಲಿಗೆ ಮಾಡಿ ವ್ಯಾಪಾರಸ್ಥರು ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ೦ಬ ಆರೋಪ ಕೇಳಿಬರುತ್ತಿದೆ.

ಇಷ್ಟಾದರೂ ತೂಕ ಮತ್ತು ಅಳತೆ ಮಾಪನದ ಇಲಾಖೆಯ ಅಧಿಕಾರಿ ಸುಮ್ಮನಿರುವುದು ಭಾರೀ ಕುತೂಹಲ ಮತ್ತು ಇವರು ಸಹ ಲ೦ಚವನ್ನು ಸ್ವೀಕರಿಸುತ್ತಿರುವುದರಿ೦ದಾಗಿ ಈ ರೀತಿ ವ್ಯಾಪಾರಿಗಳು ಭಯವಿಲ್ಲದೇ ವ್ಯಾಪರಮಾಡುತ್ತಿದ್ದಾರೆನ್ನ ಬೇಕಾಗುತ್ತದೆ. ತಕ್ಷಣವೇ ಬೀದಿ ವ್ಯಾಪಾರಿಗಳ ತೂಕದ ತಕ್ಕಡಿಯನ್ನು ಪರಿಶೀಲಿಸಿ ಶಿಸ್ತುಕ್ರಮ ಕೈಕೊಳ್ಳುವ೦ತೆ ನಗರದ ಜನತೆ ಇಲಾಖೆಯನ್ನು ಹಾಗೂ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಈ ವರದಿಯನ್ನು ಪ್ರಕಟಿಸಿರುವುದು ಯಾವ ವ್ಯಾಪರಿಯ ಮೇಲಿನ ಸಿಟ್ಟಿನಿ೦ದಲ್ಲ ಇಲಾಖೆಯ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಲಿ ಎ೦ದು. 

kiniudupi@rediffmail.com

No Comments

Leave A Comment