Log In
BREAKING NEWS >
ಮಾ.28ರ೦ದು ಸ೦ಜೆ 6.30ಕ್ಕೆ ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಪದ್ಮನಾಭ ದೇವಸ್ಥಾನದ ವಠಾರದಲ್ಲಿ ಶ್ರೀಏಕದ೦ತ ಸೇವಾ ಸಮಿತಿ ಪಣಿಯಾಡಿ ಉದ್ಘಾಟನಾ ಸಮಾರ೦ಭ ಜರಗಲಿದೆ....

ವಿದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ₹2,000 ನೋಟುಗಳ ಬದಲಾವಣೆ ಸಂಕಷ್ಟ!

ದುಬೈ:ಮೇ 30. 2,000 ರೂ.ನೋಟುಗಳ ಚಲಾವಣೆಯ ಸ್ಥಗಿತಗೊಳಿಸಲು ಇನ್ನೂ ಕೆಲವೇ ತಿಂಗಳುಗಳಿವೆ. ಅದರಲ್ಲಿಯೂ 2000 ರೂ. ನೋಟು ಚಲಾವಣೆ ಸ್ಥಗಿತಗೊಳಿಸಿ, ವಾಪಸ್ ಪಡೆಯಲು ಬ್ಯಾಂಕ್‌ಗಳಿಗೆ ಆರ್‌ಬಿಐ ಆದೇಶ ನೀಡಿದ್ದು, ಇದರಿಂದ ವಿದೇಶದಲ್ಲಿ ನೆಲೆಸಿರುವ ಭಾರತೀಯರು ಪರದಾಡಿದ್ದಾರೆ.

2,000ರೂ. ನೋಟುಗಳ ಚಲಾವಣೆಯ ಸ್ಥಗಿತದಿಂದ ಭಾರತ ಬಿಟ್ಟು ಬೇರೆ ದೇಶಕ್ಕೆ ಉದ್ಯೋಗಕ್ಕಾಗಿ ಹೋದವರು ಹಾಗೂ ಪ್ರವಾಸಕ್ಕೆ ಹೋದವರು ಪರದಾಡಿದ್ದಾರೆ. ಇದೀಗ ಭಾರತದಿಂದ ಸಾಕಷ್ಟು ಜನ ವಿವಿಧ ಕಾರಣಗಳಿಗೆ ಬೇರೆ ಬೇರೆ ರಾಷ್ಟ್ರಗಳಿಗೆ ತೆರಳುತ್ತಾರೆ. ಆದರೆ ಹೀಗೆ ತೆರಳಿದ ಭಾರತೀಯರಿಗೆ 2,000ರೂ. ನೋಟುಗಳನ್ನ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಭಾರತ ಸರ್ಕಾರವು 2,000ರೂ. ನೋಟುಗಳ ಬದಲಾವಣೆಗೆ ಅನುಸರಿಸುತ್ತಿರುವ ನಿಯಮದ ಬಗ್ಗೆ ಗಲ್ಫ್ ರಾಷ್ಟ್ರಗಳ ಬ್ಯಾಂಕ್‌ಗಳಿಗೆ ಯಾವುದೇ ಮಾಹಿತಿ ಇಲ್ಲ. ಯಾವುದೇ ದೇಶ ಬಿಟ್ಟು ಬೇರೆ ದೇಶಕ್ಕೆ ಹೋದವರು ತಮ್ಮ ಬಳಿ ಇರುವ 2,000ರೂ. ನೋಟನ್ನ ವಿನಿಮಯ ಮಾಡಿಕೊಳ್ಳಲು ಆಗುತ್ತಿಲ್ಲ ಎಂದು ಪರದಾಡುತ್ತಿದ್ದಾರೆ

ಮೇ 19 ರಂದು ಭಾರತೀಯ ರಿಸರ್ವ್ ಬ್ಯಾಂಕ್ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವುದಾಗಿ ತಿಳಿಸಿದ್ದು. ಈ ನೋಟುಗಳನ್ನು ಸೆಪ್ಟೆಂಬರ್ 30ರೊಳಗೆ ಬ್ಯಾಂಕ್‌ಗಳಿಗೆ ಜಮೆ ಅಥವಾ ವಿನಿಮಯ ಮಾಡಿಕೊಳ್ಳಬೇಕು. ಜೊತೆಗೆ, ಈ ನೋಟುಗಳನ್ನು ಗ್ರಾಹಕರಿಗೆ ನೀಡಬಾರದು ಎಂದು ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ.

ಈ ‘ಸೌದಿ ಅರೇಬಿಯಾದ ನೋಟು ವಿನಿಮಯ ಕೇಂದ್ರದಲ್ಲಿ ಭಾರತದ ಎರಡು ಸಾವಿರ ಮುಖಬೆಲೆಯ ನೋಟು ಸ್ವೀಕರಿಸುವುದನ್ನು ಸ್ಥಗಿತಗೊಳಿಸಲಾಗಿದೆ’ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ನಾವು ಈಗ ರಜಾ ಅವಧಿಯ ಮಧ್ಯದಲ್ಲಿದ್ದೇವೆ. ಇಲ್ಲಿಗೆ ಭೇಟಿ ನೀಡಿರುವ ಹಲವರ ಬಳಿ ಎರಡು ಸಾವಿರ ರೂಪಾಯಿ ನೋಟಿನ ಕಂತೆಗಳಿದ್ದರೂ ಉಪಯೋಗಕ್ಕೆ ಬಾರ ಹಣ’ ಎಂದು ಎನ್‌ಆರ್‌ಐ ಉದ್ಯಮಿ ಚಂದ್ರಶೇಖರ್‌ ಭಾಟಿಯ ಹೇಳಿದರು.

No Comments

Leave A Comment