ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಬೆಂಗಳೂರಿನ ನೂತನ ಪೊಲೀಸ್ ಆಯುಕ್ತರಾಗಿ ಬಿ.ದಯಾನಂದ್ ನೇಮಕ
ಬೆಂಗಳೂರು:ಮೇ 30. ಸರ್ಕಾರ ಬೆಂಗಳೂರು ನಗರದ ನೂತನ ಪೊಲೀಸ್ ಕಮಿಷನರ್ ಆಗಿ ಹಿರಿಯ ಪೊಲೀಸ್ ಅಧಿಕಾರಿ ಬಿ ದಯಾನಂದ ಅವರನ್ನು ನೇಮಕ ಮಾಡಿದೆ. ಇಂದು ರಾಜ್ಯ ಸರ್ಕಾರ ಈ ಆದೇಶವನ್ನು ಹೊರಡಿಸಿದೆ.
ಬೆಂಗಳೂರು ಪೊಲೀಸ್ ಕಮಿಷನರ್ ಸೇರಿದಂತೆ ಕೆಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಬೆಂಗಳೂರು ನಗರದ ಪೊಲೀಸ್ ಕಮಿಷನರ್ ಆಗಿ ಪ್ರತಾಪ ರೆಡ್ಡಿ ಕಾರ್ಯನಿರ್ವಾಹಣೆ ಮಾಡಿದ್ದರು. ಇದೀಗ ಅವರನ್ನು ಡಿಜಿಪಿ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಇದೀಗ ನಗರದ ಪೊಲೀಸ್ ಆಯುಕ್ತರಾಗಿ ಸಿ.ಎಚ್. ಪ್ರತಾಪ್ ರೆಡ್ಡಿಅವರು ಒಂದು ವರ್ಷ ಅಧಿಕಾರಾವಧಿ ಪೂರೈಸಿದ್ದು ಇದರ ನಂತರ ಸಾಮಾನ್ಯವಾಗಿ ನಗರ ಪೊಲೀಸ್ ಆಯುಕ್ತರಾಗಿ ಒಂದು ವರ್ಷ ಪೂರೈಸಿದ ಬಳಿಕ ಬದಲಾವಣೆ ಮಾಡುವ ಅಲಿಖಿತ ನಿಯಮ ರೂಢಿಯಲ್ಲಿದ್ದು, ಹೀಗಾಗಿ, ಹೊಸ ಕಮಿಷನರ್ ನೇಮಕಗೊಂಡಿದ್ದಾರೆ. ಗುಪ್ತಚರ ದಳದ ಎಡಿಜಿಪಿ ಆಗಿದ್ದ ದಯಾನಂದ್ ಅವರನ್ನು ಸರಕಾರ ಕಮಿಷನರ್ ಆಗಿ ನೇಮಿಸಿದೆ.
ಇನ್ನೂ, ಎಂ ಎ ಸಲೀಂ ಅವರನ್ನು ಸಿಐಡಿ ಡಿಜಿಪಿ (ಕ್ರಿಮಿನಲ್ ತನಿಖೆ), ಶರತ್ ಚಂದ್ರ ಅವರನ್ನು ಎಡಿಜಿಪಿ ಗುಪ್ತಚರಕ್ಕೆ ನೇಮಕ ಮಾಡಲಾಗಿದೆ.