Log In
BREAKING NEWS >
...........ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ,ಅಭಿಮಾನಿಗಳಿಗೆ "ಶ್ರೀರಾಮನವಮಿ"ಯ ಶುಭಾಶಯಗಳು.......

ಮಂಗಳೂರು: ಗಣೇಶ್ ಕುಲಾಲ್ ಮಾಣಿಲರಿಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ

ಮಂಗಳೂರು, ಮೇ 29: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಪಿ ಎಸ್ ದಿನೇಶ್ ಕುಮಾರ್ ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಡೊಜ ಡಾಕ್ಟರ್ ಮಹೇಶ್ ಜೋಶಿ ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕ ಟಿಎಸ್ ನಾಗಭರಣ ಸೇರಿದಂತೆ ಗಣ್ಯರು ಸಮಾಜಸೇವಾ ವಿಭಾಗದಲ್ಲಿ ಸಾಧನೆಗೈದ ಗಣೇಶ್ ಮಾಣಿಲ ಅವರಿಗೆ ಆರ್ಯಭಟ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಗಣೇಶ್ ಕುಲಾಲ್ ಮಾಣಿಲ ಬಹರೇನ್ ದೇಶದಲ್ಲಿ ನೆಲೆಸಿದ್ದು ಗಲ್ಫ್ ದೇಶಗಳಲ್ಲಿ ಕೆಲಸ ಅರಸಿ ಬರುವ ಹಲವಾರು ಯುವಕರಿಗೆ ಉದ್ಯೋಗವನ್ನು ದೊರಕಿಸಿ ಕೊಟ್ಟಿದ್ದಾರೆ. ಸಂಕಷ್ಟದಲ್ಲಿರುವಂತ ಹಲವಾರು ಮಂದಿಗೆ ಸಹಾಯ ಹಸ್ತವನ್ನು ನೀಡಿದ್ದಾರೆ. ಕೊರೋನಾ ಸಂದರ್ಭದಲ್ಲಿ ಕೊರೋನಾ ಗೆಲ್ಲೋಣ ಕಾರ್ಯಕ್ರಮದ ಮೂಲಕ ಜನಜಾಗೃತಿಯನ್ನು ಮೂಡಿಸಿದ್ದಾರೆ.

ಇನ್ನು ವಿದೇಶದಲ್ಲಿ ಕನ್ನಡ ತುಳು ಜಾಗ್ರತಿಯ ಪರವಾಗಿ, ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಲ್ಲಿ ಸಂಯೋಜಕರಾಗಿ ಹಾಗೂ ಕುಲಾಲ ಸಮುದಾಯಕ್ಕೆ ಶಕ್ತಿಯಾದ ಗಣೇಶ್ ಕುಲಾಲ್ ಮಾಣಿಲ, ಬಹರೈನ್ ಕುಲಾಲ ಸಂಘದ ಅಧ್ಯಕ್ಷರಾಗಿ ಜನಪರ ಸೇವೆಗೈದವರು, ತುಳುನಾಡು ವಾರ್ತೆ ಪತ್ರಿಕೆಯ ಅಂತರ್ ರಾಷ್ಟ್ರೀಯ ಸಂಪಾದಕರಾಗಿದ್ದಾರೆ . ಅವರ ನಿರಂತರ ಸಮಾಜ ಸೇವೆಯನ್ನು ಗುರುತಿಸಿ ಅಂತರಾಷ್ಟ್ರೀಯ ಆರ್ಯಭಟ ಸಂಸ್ಥೆಯು 2023 ನೇ ಸಾಲಿನ ಆರ್ಯಭಟ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಆರ್ಯಭಟ ಪ್ರಶಸ್ತಿ ಕರ್ನಾಟಕದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು ಕಳೆದ 48ಕ್ಕೂ ಹೆಚ್ಚು ವರ್ಷಗಳಲ್ಲಿ ನೂರಾರು ಸಾಧಕರ ಸಾಧನೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.

No Comments

Leave A Comment