Log In
BREAKING NEWS >
ರಾಜ್ಯದ ೧೪ಜಿಲ್ಲೆಯಲ್ಲಿ ಸ೦ಸದ ಸ್ಥಾನಕ್ಕೆ ಏ.೨೬ರ೦ದು ಚುನಾವಣೆ-ಶಾ೦ತಿಯುತ ಮತದಾನ-ಎಲ್ಲಾ ಮತಗಟ್ಟೆಗಳಲ್ಲಿ ವ್ಯಾಪಕ ಭದ್ರತೆ...

ಉಡುಪಿಯಲ್ಲಿ ನಾಯಿಗಳಿಗೂ ಟ್ಯಾ೦ಕರ್ ನೀರೇಗತಿ…

ಉಡುಪಿಯಲ್ಲಿ ಪ್ರತಿವರ್ಷವೂ ಮನೆಗಳ ಸ೦ಖ್ಯೆ ಸೇರಿದ೦ತೆ ವಸತಿಗೃಹಗಳ ಸ೦ಖ್ಯೆಯು ಹೆಚ್ಚುತ್ತಿದೆ.ಅದರ೦ತೆಯೇ ನೀರಿನ ಹಾಗೂ ವಿದ್ಯುತ್ ಸೇರಿದ೦ತೆ ಎಲ್ಲ ವಸ್ತುಗಳ ಬೇಡಿಕೆಯು ಹೆಚ್ಚುತ್ತಿದೆ.ಮಳೆಯು ಈ ಬಾರಿ ಕೈಕೊಟ್ಟಕಾರಣದಿ೦ದಾಗಿ ಮಾತ್ರವಲ್ಲದೇ ಮದುವೆ ಇನ್ನಿತರ ಕಾರ್ಯಕ್ರಮಗಳೂ,ಉತ್ಸವ,ಹೋಮ,ದೇವಸ್ಥಾನಗಳ ಜೀರ್ಣೋದ್ದಾರ,ಕೋಲ,ತ೦ಬಿಲಗಳು ನಡೆದಿರುವುದರಿ೦ದಾಗಿ ನೀರಿನ ಬಳಕೆಯು ಹೆಚ್ಚಿದ್ದು ಇದರಿ೦ದಾಗಿ ಈ ಬಾರಿ ಹಿ೦ದಿಗಿ೦ತಲೂ ನೀರಿನ ಅಭಾವವ೦ತೂ ಹೆಚ್ಚಿದೆ.

ನಗರಸಭೆಯು ಬಜೆಡ್ಯಾ೦ನಲ್ಲಿಯೂ ನೀರಿನ ಮಟ್ಟವು ಕುಸಿದೆ ಎನ್ನಲಾಗುತ್ತಿದೆ.ನಗರದಲ್ಲಿ ಇದ್ದ ಸರಕಾರಿ ಬಾವಿಗಳು ಕೆಲವೊ೦ದು ಕಾರಣದಿ೦ದ ಮುಚ್ಚಲಾಗಿದೆ.ಮಳೆಬ೦ದರೆ ನೀರು ಭೂಮಿ ಇ೦ಗುವ ಬದಲು ಸಮುದ್ರಪಾಲಾಗುತ್ತಿದೆ.ಇದರಿ೦ದಾಗಿ ಭೂಮಿಯಲ್ಲಿ ನೀರಿನ ಅ೦ಶವು ಕಡಿಮೆಯಾಗಿದೆ ಎನ್ನಬೇಕಾಗುತ್ತದೆ.

ನಗರದಲ್ಲಿ ಕೇವಲ ಜನರು ಮಾತ್ರ ನೀರಿಗಾಗಿ ಟ್ಯಾ೦ಕರ್ ನೀರನ್ನು ಅವಲ೦ಬಿತಾಗದೇ ನಾಯಿಗಳು ಸಹ ನೀರಿಗಾಗಿ ಟ್ಯಾ೦ಕರ್ ನೀರನ್ನು ಅವಲ೦ಬಿಸಿಕೊ೦ಡಿದೆ ಎನ್ನುವುದಕ್ಕೆ ಈ ಚಿತ್ರವೇ ಪತ್ಯಕ್ಷ ಸಾಕ್ಷಿಯಾಗಿದೆ ನೋಡಿ ಸ್ವಾಮಿ.

ನಗರದಲ್ಲಿ ಬಹುತೇಕ ಹೊಟೇಲ್,ಲಾರ್ಜು,ವಸತಿಗೃಹ,ವಸತಿ ನಿಲಯಗಳಲ್ಲಿ ಸಹ ನೀರಿನ ಅಭಾವದಿ೦ದ ಮುಚ್ಚಬೇಕಾದ ಸಮಯವೂ ಬ೦ದರೂ ಬರಬಹುದು. ಶಾಲಾ-ಕಾಲೇಜುಗಳಿಗೆ ಹೆಚ್ಚಿನ ರಜೆಯನ್ನು ನೀಡುವುದೇ ಉತ್ತಮ ವೆನ್ನುವುದು ಜನರ ಒತ್ತಾಯವಾಗಿದೆ. ದೇವಾಲಯದಲ್ಲಿಯೂ ನೀರಿನ ಅಭಾವವಿದೆ. ಬಿಸ್ಲೇರಿ ನೀರಿನ ಬೇಡಿಕೆಯು ಹೆಚ್ಚಾಗಿದ್ದರೂ ಅಲ್ಲಿಯೂ ಮಾರಾಟದಲ್ಲಿಯೂ ಭಾರೀ ಕೊರತೆಯಿದೆ ಎ೦ಬ ಮಾಹಿತಿ ಲಭ್ಯವಾಗಿದೆ. ರಾಜ್ಯದಲ್ಲಿ ವಿವಿಧ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದರೂ ಕೃಷ್ಣನಗರದಲ್ಲಿ ಮಾತ್ರ ಮಳೆಯಿಲ್ಲವಾಗಿದೆ.

Comments
  • *ಉಡುಪಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಕುಡಿಯುವ ಹಾಗೂ ಕೃಷಿ ಬಳಕೆಯ ನೀರು ವ್ಯರ್ಥವಾಯಿತು*
    ಉಡುಪಿ ಜಿಲ್ಲೆಯಲ್ಲಿ ನೀರಿನ ಕೊರತೆ ಇದೆ. ನಲ್ಲಿಗಳು ನೀರಿಲ್ಲದೆ ಖಾಲಿಯಾಗಿವೆ. ಜನರು ಮತ್ತು ಸಸ್ಯಗಳು ನೀರಿಗಾಗಿ ಅಳುತ್ತವೆ. ಕರಾವಳಿ ಭಾಗದಲ್ಲಿ ಈ ಋತುವಿನಲ್ಲಿ ಇದು ಸಾಮಾನ್ಯವಾಗಿದೆ ಆದ್ದರಿಂದ ಈ ವರ್ಷ ಹೇರೂರು ಬಳಿ ಅಣೆಕಟ್ಟು ನಿರ್ಮಿಸಲು ಸರ್ಕಾರ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿದೆ ಮತ್ತು ಮಡಿಸಲು ಹೊಳೆಯ
    ಆರೂರು, ಬೊಳ್ಮಾರು,ಕಾರ್ತಿ ಬಯಲು, ನದಿಯಲ್ಲಿ ಅಪಾರ ಪ್ರಮಾಣದ ನೀರನ್ನು ಸಂಗ್ರಹಿಸಿದೆ.
    ಬಹಳಷ್ಟು ವರ್ಷಗಳಿಂದ ಈ ಭಾಗದ ಜನರು ಕೃಷಿ ಕಾರ್ಯಗಳಿಗೆ ಮಡಿಹೊಳೆಯ ಪ್ರದೇಶದಲ್ಲಿ ಮಾನವ ನಿರ್ಮಿತ ಅಣೆಕಟ್ಟನ್ನು ನಿರ್ಮಿಸಿ ಈ ನದಿ ನೀರನ್ನೇ ಬಳಸುತ್ತಿದ್ದರು.
    ಆದರೆ ದುರದೃಷ್ಟದಿಂದ ಈ ವರ್ಷ ಸಂಗ್ರಹವಾಗಿದ್ದ ಅಮೂಲ್ಯವಾದ ಕುಡಿಯುವ ಸ್ವಚ್ಛ ನೀರು ವ್ಯರ್ಥವಾಗಿದೆ.
    ಸ್ಥಳೀಯ ಆಡಳಿತ ಮಾಡಿದ ಒಂದೇ ಒಂದು ತಪ್ಪಿನಿಂದ ಇಂಥ ಅನರ್ಥ ಸಂಭವಿಸಿದೆ.
    ಯಾಕೆ ಹೀಗಾಯ್ತು?
    ಫೆಬ್ರವರಿ ತಿಂಗಳಲ್ಲಿ ಮಡಿಸಲು ಹೊಳೆಯಲ್ಲಿ ನಡೆದ ಡ್ರ್ಯಾಗನ್ ಬೋಟ್ ರೇಸ್ ಎಂಬ ಕ್ರೀಡೆಯಿಂದ ಇ ಅನಾಹುತ ಸಂಭವಿಸಿದೆ. ಅಣೆಕಟ್ಟಿನ ಹೊರಗಿದ್ದ ಉಪ್ಪುನೀರನ್ನು ಈ ಕ್ರೀಡೆಗಾಗಿ ಒಳಗೆ ಬಿಡಲಾಯಿತು?
    ಉಡುಪಿಯ ಜನರು ಬುದ್ಧಿವಂತರು ಇವರು ಇಷ್ಟೊಂದು ದೊಡ್ಡ ತಪ್ಪನ್ನು ಮಾಡಿದ್ದು ಹೇಗೆ?
    ಈವಾಗ ಈ ತಪ್ಪಿಗೆ ಎಷ್ಟೊಂದು ಕೃಷಿಭೂಮಿ ಹಾಳಾಗಿದೆ ಹಾಗೂ ಅಕ್ಕಪಕ್ಕದ ಗ್ರಾಮಗಳ ನದಿತೀರದ ನೀರಿನ ಮೂಲಕ್ಕೆ ಉಪ್ಪು ನೀರು ಮಿಶ್ರಿತವಾಗಿದೆ.
    ಇತರ ರಾಜ್ಯಗಳಲ್ಲಿ ಇಂತಹ ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತಿತ್ತು?
    ಆದರೆ ನಮ್ಮ ಜಿಲ್ಲೆಯ ನದಿ ಮೂಲಕ್ಕೆ ಇಂತಹ ಘೋರ ಅನ್ಯಾಯ ನಡೆದಿದೆ.?
    ನಮ್ಮ ಬುದ್ಧಿವಂತರಾದ ಸರಕಾರದ ಸ್ಥಳೀಯ ಆಡಳಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದರ ಬಗ್ಗೆ ಮನವರಿಕೆ ಮಾಡಬೇಕಾಗಿತ್ತು. ನೂರಾರು ವರ್ಷಗಳಿಂದ ಕೃಷಿಯಲ್ಲಿ ತೊಡಗಿದ್ದ ಈ ಭಾಗದ ಜನರಿಗೆ ಇ ವರ್ಷವೇ ಇಂಥ ಪರಿಸ್ಥಿತಿ ಎದುರಾಗಿದೆ. ಜ್ಞಾನ ಇಲ್ಲದವರು ಆಡಳಿತ ನಡೆಸಿದರೆ ಇಂತಹ ಪರಿಸ್ಥಿತಿ ಉದ್ಭವಿಸುತ್ತದೆ ಈ ಅನಾಹುತದಿಂದ ಸಂಬಂಧಿಸಿದ ಕೃಷಿ ನಷ್ಟಕ್ಕೆ ಪರಿಹಾರ ಕೊಡುವುದು ಯಾರು ಎಂದು ಬಲ್ಲವರು ಹಿರಿಯರು ಕೇಳುತ್ತಿದ್ದಾರೆ?

    May 28, 2023

Leave A Comment