Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಬಿಜೆಪಿಯ ಮಾಜಿ ಸಚಿವರುಗಳಿಗೆ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿಯ ಬಗ್ಗೆ ಯೋಚನೆ ಏಕೆ? ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ: ನಮ್ಮ ಕಾಂಗ್ರೆಸ್ ಪಕ್ಷದ ನಾಯಕರುಗಳು ನೀಡಿದಂತಹ ಗ್ಯಾರೆಂಟಿ ಕಾರ್ಡ್ ನ ಬಗ್ಗೆ ಅನಗತ್ಯವಾಗಿ ರಾಜ್ಯದ ಜನರಲ್ಲಿ ಗೊಂದಲ ಮೂಡಿಸುವಂತಹ ಹೇಳಿಕೆಗಳನ್ನು ಮಾಜಿ ಸಚಿವರುಗಳಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇನ್ನಿತರ ಮಾಜಿ ಸಚಿವರು ಹಾಗೂ ರಾಜ್ಯದ ಬಿಜೆಪಿ ನಾಯಕರುಗಳು ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ನಮ್ಮ ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ.

ಬಿಜೆಪಿ ನಾಯಕರು ಗಳೇ ಮಾಜಿ ಸಚಿವರೇ ನಿಮಗೆ ನಿಮ್ಮ ನಾಯಕರಾದಂತಹ ನಮ್ಮ ಈಗಿನ ಪ್ರಧಾನ ಮಂತ್ರಿ 9 ವರ್ಷದ ಹಿಂದೆ ಜನಸಾಮಾನ್ಯರಿಗೆ ನೀಡಿದ ಭರವಸೆಯನ್ನು ನೀವು ಈಡೇರಿಸಿದ್ದೀರಾ ಅಥವಾ ಜನಸಾಮಾನ್ಯರಿಗೆ ಯಾವುದಾದರೂ ಒಂದು ಲಾಭವನ್ನು ನೀವು ನೀಡಿದ್ದೀರಾ ಎಂದು ಯೋಚಿಸಿ ನಂತರ ನಮ್ಮ ಗ್ಯಾರೆಂಟಿಯ ಬಗ್ಗೆ ಮಾತನಾಡಿ ಅದಕ್ಕಿಂತ ಮೊದಲು ನೀವು ನಿಮ್ಮ ಪ್ರಧಾನಿಯನ್ನು ಭೇಟಿ ಮಾಡಿ ಅವರು ಹೇಳಿದಂತಹ ಜನಸಾಮಾನ್ಯರಿಗೆ ನೀಡಿದಂತಹ ಭರವಸೆಯನ್ನು ಮೊದಲು ಈಡೇರಿಸುವಂತೆ ನೀವು ನೋಡಿಕೊಳ್ಳಿ ಅಥವಾ ನಿಮ್ಮ ನಾಯಕ ನರೇಂದ್ರ ಮೋದಿಯವರು ಹೇಳುವುದೆಲ್ಲ ಸುಳ್ಳು ಎಂಬುದನ್ನು ನೀವು ಒಪ್ಪಿಕೊಳ್ಳಿ ನಿಮ್ಮ ಸರಕಾರದ ಲಂಚಾವತಾರದಿಂದ ನಮ್ಮರಾಜ್ಯದ ಜನರು ರೋಸಿ ಹೋಗಿದ್ದಾರೆ ಎಂಬುದಂತೂ ನಿಮಗೆ ನೆನಪಿರಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

No Comments

Leave A Comment