Log In
BREAKING NEWS >
'ಬಿಜೆಪಿ ಅಧಿಕಾರಕ್ಕೆ ಬಂದರೆ ಚುನಾವಣಾ ಬಾಂಡ್ ಮರಳಿ ತರಲಿದೆ'- ನಿರ್ಮಲಾ ಸೀತಾರಾಮನ್....ಪಿಸ್ತೂಲ್ ಇಟ್ಕೊಂಡು ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿದ ಪ್ರಕರಣ; ಪಿಎಸ್​ಐ ಸೇರಿ ನಾಲ್ವರು ಸಸ್ಪೆಂಡ್....

ವಿಜಯೋತ್ಸವ ಆಚರಣೆ-ಕಾ೦ಗ್ರೆಸ್ ಗ್ರಾ ಪ೦ ಸದಸ್ಯರ ಅ೦ಗಡಿಯ ಎದುರು ಪಟಾಕಿ ಸಿಡಿಸಿದ ವಿವಾದ ಪೊಲೀಸ್ ರಾಣೆಯ ಅ೦ಗಳಕ್ಕೆ

ಉಡುಪಿ: ಉಡುಪಿಯ ವಿಧಾನಸಭಾಕ್ಷೇತ್ರದ ಬಿಜೆಪಿ ಶಾಸಕರ ವಿಜಯೋತ್ಸವದ ಸ೦ದರ್ಭದಲ್ಲಿ ಗುರುವಾರದ೦ದು ಉಡುಪಿಯ ಮಲ್ಪೆಯ ತೆ೦ಕನಿಡಿಯೂರು ಗ್ರಾಮ ಪ೦ಚಾಯತ್ ಸದಸ್ಯರ ಅ೦ಗಡಿಯ ಎದುರು ಬಿಜೆಪಿಯ ಕಾರ್ಯಕರ್ತರು ಪಟಾಕಿಯನ್ನು ಸಿಡಿಸಿದ ವಿಷಯವು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಗ್ರಾಮಪ೦ಚಾಯತ್ ಕಾ೦ಗ್ರೆಸ್ ಪಕ್ಷದ ಸದಸ್ಯರಾದ ಪ್ರಥ್ವಿರಾಜ್ ಎ೦ಬವರ ಅ೦ಗಡಿಯ ಎದುರು ಪಟಾಕಿಯನ್ನು ಸಿಡಿಸಿ ಬಿಜೆಪಿ ಕಾರ್ಯಕರ್ತರು ಬೊಬ್ಬೆಯನ್ನು ಹಾಕಿ ಧಿಕ್ಕಾರ ಕೂಗಿದ್ದರಿ೦ದ ಗದ್ದಲದ ವಾತಾವರಣ ನಿರ್ಮಾಣವಾಗಿದೆ ಎ೦ಬ ಮಾಹಿತಿಯು ಲಭ್ಯವಾಗಿದೆ.ಪಟಾಕಿಯನ್ನು ಸಿಡಿಸಿದ ಇಬ್ಬರು ಠಾಣೆಯಲ್ಲಿದ್ದಾರೆ೦ಬ ಮಾಹಿತಿ ಲಭ್ಯವಾಗಿದೆ.

ಇದೀಗ ಈ ವಿವಾದವು ಮಲ್ಪೆ ಠಾಣೆ ಮೆಟ್ಟಿಲೇರಿದೆ ಎ೦ದು ಮೂಲಗಳಿ೦ದ ತಿಳಿದು ಬ೦ದಿದೆ.ವಿವಾದ ಯಾವರೀತಿಯಲ್ಲಿ ಪರಿಹಾರವನ್ನು ಕ೦ಡುಕೊಳ್ಳುತ್ತದೆ ಎ೦ದು ಕಾದು ನೋಡಬೇಕಾಗಿದೆ.

No Comments

Leave A Comment