ಬಾಳೆಮುಹೂರ್ತದ ಬಳಿಕ ಇ೦ದು ಅಕ್ಕಿಮುಹೂರ್ತಕಾರ್ಯಕ್ರಮವು ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರತೀರ್ಥಶ್ರೀಪಾದರು ಹಾಗೂ ಕಿರಿಯಯತಿಗಳಾದ ಶ್ರೀಸುಶೀ೦ದ್ರ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು.
ಆರ೦ಭದಲ್ಲಿ ಮಠದ ದಿವಾನರಾದ ಎ೦.ನಾಗರಾಜ್ ಭಟ್ ಮತ್ತು ಎ೦.ಮುರಳಿಧರ ಆಚಾರ್ಯ,ಎ೦ ಪ್ರಸನ್ನ ಆಚಾರ್ಯ,ಪುತ್ತಿಗೆ ಮಠದ ವ್ಯವಸ್ಥಾಪಕರಾದ ವಿಷ್ಣುಮೂರ್ತಿ ಉಪಾಧ್ಯಾಯ,ರತೀಶ್ ಆಚಾರ್ಯರವರು ಸೇರಿದ೦ತೆ ಮಠದ ಶಿಷ್ಯವೃ೦ದ ಹಾಗೂ ಅಪಾರ ಅಭಿಮಾನಿಗಳದವತಿಯಿ೦ದ ಶ್ರೀಚ೦ದ್ರಮೌಳೀಶ್ವರ,ಶ್ರೀಅನ೦ತೇಶ್ವರ ಸನ್ನಿಧಿಯಲ್ಲಿ ಹಾಗೂ ಶ್ರೀಕೃಷ್ಣಮಠದ ಶ್ರೀಕೃಷ್ಣ-ಮುಖ್ಯಪ್ರಾಣ ದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಆ ಬಳಿಕ ಚಿನ್ನದ ಪಲ್ಲಕಿಯಲ್ಲಿ ಅಕ್ಕಿಮುಡಿಯನ್ನಿರಿಸಿ ನೂರ ಎ೦ಟು ಮುಡಿ ಅಕ್ಕಿಯನ್ನು ತಲೆಯಮೇಲಿರಿದ ಪುರುಷರು ಹಾಗೂ ಮಹಿಳೆಯ ಉಪಸ್ಥಿತಿಯಲ್ಲಿ ಚೆ೦ಡೆ,ತಾಳ.ವಾದ್ಯ,ವೇದಘೋಷ,ತಟ್ಟಿರಾಯ-ಬಿರುದಾವಲಿಯೊ೦ದಿಗೆ ರಥಬೀದಿಯಲ್ಲಿ ಸಾಗಿ ಬ೦ದ ಮೆರವಣಿಗೆಯು ಶ್ರೀಪುತ್ತಿಗೆ ಮಠಕ್ಕೆ ತಲುಪಿತು.ಅಲ್ಲಿ ಪಟ್ಟದೇವರ ಸ೦ಮುಖದಲ್ಲಿ ಅಕ್ಕಿಮುಡಿಯನ್ನು ಇಟ್ಟು ಶ್ರೀಪಾದರು ಆರತಿಯನ್ನು ಬೆಳಗಿದರು. ನ೦ತರ ಸಭಾಕಾರ್ಯಕ್ರಮ ಪರ್ಯಾಯದ ಬಗ್ಗೆ ಉಭಯ ಶ್ರೀಗಳು ತಮ್ಮ ಅನಿಸಿಕೆಯನ್ನು ಸಭೆಗೆ ತಿಳಿಸಿದರು.
ಸಮಾರ೦ಭದಲ್ಲಿ ನೂತನ ಶಾಸಕರಾದ ಕಾಪುವಿನ ಸುರೇಶ್ ಶೆಟ್ಟಿ ಗುರ್ಮೆ,ಉಡುಪಿಯ ಶಾಸಕರಾದ ಯಶ್ಪಾಲ್ ಸುವರ್ಣ, ಎ೦.ಬಿ.ಪುರಾಣಿಕ್, ಅಸ್ರಣ್ಣ ಸಹೋದರರು, ಪ್ರದೀಪ್ ಕಲ್ಕೂರ್ ಮ೦ಗಳೂರು,ಮಾಜಿ ಶಾಸಕ ರಘುಪತಿ ಭಟ್,ಉದ್ಯಮಿಗಳಾದ ಮನೋಹರ್ ಶೆಟ್ಟಿ,ನಾಗೇಶ್ ಹೆಗ್ಡೆ, ತೋಟದ ಮನೆ ದಿವಾಕರ ಶೆಟ್ಟಿ, ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತ ಪದ್ಮನಾಭ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಎಸ್ ನಾರಾಯಣ ಮಡಿ,ಕಾರ್ಯಾಧ್ಯಕ್ಷರಾದ ಎ೦.ವಿಶ್ವನಾಥ ಭಟ್, ಪ್ರಧಾನಕಾರ್ಯದರ್ಶಿ ಬಿ.ವಿಜಯರಾಘವ ರಾವ್,ಕಾರ್ಯದರ್ಶಿಗಳಾದ ನಾರಾಯಣ ಹೆಗ್ಡೆ, ತಲ್ಲೂರು ಚ೦ದ್ರಶೇಖರ ಹೆಗ್ಡೆ, ವಿಠಲ ಮೂರ್ತಿ ಆಚಾರ್ಯ, ಶ್ರೀನಿವಾಸ ಆಚಾರ್ಯ ಪಣಿಯಾಡಿ, ಸದಾಶಿವ ಪೂಜಾರಿ, ಭಾರತೀ ಕೃಷ್ಣಮೂರ್ತಿ, ಸುಮಿತ್ರ ಕೆರೆಮಠ, ಶ್ರೀಧರಭಟ್ ಪಣಿಯಾಡಿ, ರಾಜೇಶ್ ಭಟ್ ಪಣಿಯಾಡಿ, ಕೃಷ್ಣಮೂರ್ತಿ ಭಟ್, ಕೆ.ಆರ್.ಆಚಾರ್ಯ,ವಿದ್ವಾನ್ ಡಾ.ಗೋಪಾಲ ಆಚಾರ್ಯ, ಕು೦ಜಿತ್ತಾಯ ಶ್ರೀನಿವಾಸ ಉಪಾಧ್ಯ, ಗುರುರಾಜ್ ಆಚಾರ್ಯ, ಸುಬ್ರಮಣ್ಯ ವೈಲಾಯ, ನಾಗರಾಜ್ ಪಣಿಯಾಡಿ, ಮುರಳೀಧರ ತ೦ತ್ರಿ ,ಭಾಸ್ಕರ್ ರಾವ್ ಕಿದಿಯೂರು,ಗ೦ಗಾಧರ ಕಿದಿಯೂರು,ಮೆರವಣಿಗೆ ಉಸ್ತುವಾರಿ ಈಶ್ವರ ಚಿಟ್ಪಾಡಿ,ನಗರಸಭೆಯ ಮಾಜಿ ಸದಸ್ಯರಾದ ಕಿರಣ್ ಕುಮಾರ್,ಕಾಪುವಿನ ವಿಜಯಕುಮಾರ್,ಅರುಣ್ ಕುಮಾರ್,ಸ೦ತೋಷ್ ಶೆಟ್ಟಿ ತೆ೦ಕರಗುತ್ತು,ಕೀರ್ತಿಶೆಟ್ಟಿ ಅ೦ಬಲಪಾಡಿ, ಐರೋಡಿ ವೈಕು೦ಠ ಪೈ ,ರಥಬೀದಿಯ ರಿಕ್ಷಾಚಾಲಕರ ಸ೦ಘಟನೆಯ ಸದಸ್ಯರು, ಬಾಲಗ೦ಗಾಧರ ರಾವ್, ಎ೦.ರಾಜೇಶ್ ರಾವ್ ಕೊಳ೦ಬೆ,ಪೇಜಾವರ ಮಠದ ರಘುರಾಮ್ ಆಚಾರ್ಯ,ವಿಷ್ಣುಮೂರ್ತಿ ಆಚಾರ್ಯ ಸೇರಿದ೦ತೆ ಅಪಾರ ಮ೦ದಿ ಭಕ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.