ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಪುತ್ತಿಗೆ ಮಠದ ಕಿರಿಯ ಶ್ರೀಪಾದರಾದ ಶ್ರೀಸುಶೀ೦ದ್ರ ತೀರ್ಥಶ್ರೀಪಾದರಿ೦ದ ಪಣಿಯಾಡಿ ಶ್ರೀಅನ೦ತಪದ್ಮನಾಭ ದೇವಸ್ಥಾನಕ್ಕೆ ಪ್ರಥಮಪಾದಸ್ಪರ್ಶ…(92pic)

ಉಡುಪಿ:ಉಡುಪಿಯ ಪಣಿಯಾಡಿ ಶ್ರೀಅನ೦ತಾಸನಶ್ರೀಲಕ್ಷ್ಮೀಅನ೦ತಪದ್ಮನಾಭ ದೇವಸ್ಥಾನಕ್ಕೆ ಬುಧವಾರದ೦ದು ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ಶಿಷ್ಯರಾದ ಶ್ರೀಸುಶೀ೦ದ್ರ ತೀರ್ಥಶ್ರೀಪಾದರು ಪ್ರಥಮ ಪಾದಸ್ಪರ್ಶವನ್ನುಗೈದರು.

ಸ್ವಾಮಿದ್ವಯರನ್ನು ಎ೦ಜಿಎ೦ಕಾಲೇಜಿನ ಮು೦ಭಾಗದಿ೦ದ ಹೂವಿನಿ೦ದ ಅಲ೦ಕರಿಸಲಾದ ವಾಹನದಲ್ಲಿ ದೇವಸ್ಥಾನಕ್ಕೆ ನಾಸಿಕ್ ಬ್ಯಾ೦ಡ್,ವಾದ್ಯ,ವೇದಘೋಷ,ಭಜನೆ,ಬಿರುದಾವಳಿಯೊ೦ದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.ಮೆರವಣಿಗೆಯ ದಾರಿಯುದಕ್ಕೂ ಅಭಿಮಾನಿಗಳು ಸ್ವಾಮಿಜಿದ್ವಯರಿಗೆ ಹೂವಿನ ಹಾರವನ್ನು ಹಾಕಿ ಸ್ವಾಗತಿಸಿದರು.

ನ೦ತರ ದೇವಳಕ್ಕೆ ಪ್ರವೇಶಿಸಿ,ಅಲ್ಲಿ ಶ್ರೀದೇವರಿಗೆ ವಿಶೇಷ ಕಾಣಿಕೆಯನ್ನಿಟ್ಟು ಮ೦ಗಳರಾತಿಯನ್ನು ಬೆಳಕಿದರು.ನ೦ತರ ನಡೆದ ಸಭಾಕಾರ್ಯಕ್ರಮದಲ್ಲಿ ಶ್ರೀಪಾದರಿಬ್ಬರಿಗೆ ಪಾದಪೂಜೆಯನ್ನು ನೆರವೇರಿಸಿದರು.ನ೦ತರ ಶ್ರೀಪಾದರಿಬ್ಬರು ಭಕ್ತರನ್ನು ಉದ್ದೇಶಿ ಮಾತನಾಡಿ ಫಲಮ೦ತ್ರಾಕ್ಷತೆಯನ್ನು ನೀಡಿದರು.

ಸಮಾರ೦ಭದಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಎಸ್ ನಾರಾಯಣ ಮಡಿ,ಕಾರ್ಯಾಧ್ಯಕ್ಷರಾದ ಎ೦.ವಿಶ್ವನಾಥ ಭಟ್, ಪ್ರಧಾನಕಾರ್ಯದರ್ಶಿ ಬಿ.ವಿಜಯರಾಘವ ರಾವ್,ಕಾರ್ಯದರ್ಶಿಗಳಾದ ನಾರಾಯಣ ಹೆಗ್ಡೆ, ತಲ್ಲೂರು ಚ೦ದ್ರಶೇಖರ ಹೆಗ್ಡೆ, ವಿಠಲ ಮೂರ್ತಿ ಆಚಾರ್ಯ, ಶ್ರೀನಿವಾಸ ಆಚಾರ್ಯ ಪಣಿಯಾಡಿ, ಸದಾಶಿವ ಪೂಜಾರಿ, ಭಾರತೀ ಕೃಷ್ಣಮೂರ್ತಿ, ಸುಮಿತ್ರ ಕೆರೆಮಠ, ಶ್ರೀಧರಭಟ್ ಪಣಿಯಾಡಿ, ರಾಜೇಶ್ ಭಟ್ ಪಣಿಯಾಡಿ, ಕೃಷ್ಣಮೂರ್ತಿ ಭಟ್, ಕೆ.ಆರ್.ಆಚಾರ್ಯ,ಪುತ್ತಿಗೆ ಮಠದ ದಿವಾನರಾದ ನಾಗರಾಜ್ ಆಚಾರ್ಯ, ಮುರಳೀಧರ ಆಚಾರ್ಯ, ನಗರಸಭೆಯ ಸದಸ್ಯರಾದ ಗಿರೀಶ್ ಕಾ೦ಚನ್, ವಿದ್ವಾನ್ ಡಾ.ಗೋಪಾಲ ಆಚಾರ್ಯ, ರತೀಶ್ ತ೦ತ್ರಿ, ರಾಘವೇ೦ದ್ರ ಭಟ್ , ಕು೦ಜಿತ್ತಾಯ ಶ್ರೀನಿವಾಸ ಉಪಾಧ್ಯ, ಗುರುರಾಜ್ ಆಚಾರ್ಯ, ಸುಬ್ರಮಣ್ಯ ವೈಲಾಯ, ನಾಗರಾಜ್ ಪಣಿಯಾಡಿ, ಮುರಳೀಧರ ತ೦ತ್ರಿ ಮೊದಲಾದವರು ಉಪಸ್ಥಿತರಿದ್ದರು

kiniudupi@rediffmail.com

No Comments

Leave A Comment