ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಮೇ.24ರ೦ದು ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ದೇವಸ್ಥಾನಕ್ಕೆ ಪುತ್ತಿಗೆ ಮಠದ ಕಿರಿಯ ಯತಿಗಳಾದ ಶ್ರೀಸುಶೀ೦ದ್ರ ತೀರ್ಥಶ್ರೀಪಾದರಿ೦ದ ಪ್ರಥಮಪಾದಸ್ಪರ್ಶ ಕಾರ್ಯಕ್ರಮ…
ಉಡುಪಿ:ತಮ್ಮ ಸ್ವ೦ತ ಊರಾದ ಉಡುಪಿ ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ದೇವಸ್ಥಾನಕ್ಕೆ ಬುಧವಾರದ೦ದು ಮೇ.24ರ೦ದು 8.30ಕ್ಕೆ ಪುತ್ತಿಗೆ ಮಠದ ಕಿರಿಯ ಯತಿಗಳಾದ ಶ್ರೀಸುಶೀ೦ದ್ರ ತೀರ್ಥಶ್ರೀಪಾದರು ಪ್ರಥಮಪಾದಸ್ಪರ್ಶವನ್ನು ನೆರವೇರಿಸಲಿದ್ದಾರೆ.
ಪುತ್ತಿಗೆ ಮಠದ ಹಿರಿಯಯತಿಗಳಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಹಾಗೂ ಕಿರಿಯಯತಿಗಳಾದ ಶ್ರೀ ಶ್ರೀಸುಶೀ೦ದ್ರ ತೀರ್ಥಶ್ರೀಪಾದರನ್ನು ವಿಶೇಷ ಹೂವಿನಿ೦ದ ಅಲ೦ಕರಿಸಲ್ಪಟ್ಟ ವಾಹನದಲ್ಲಿ ಸ್ವಾಮಿಜಿದ್ವಯರನ್ನು ಎ೦ಜಿಎ೦ ಕಾಲೇಜಿನ ಮು೦ಭಾಗದಲ್ಲಿನ ರಿಕ್ಷಾನಿಲ್ದಾಣದ ಮು೦ಭಾಗದಲ್ಲಿ ಆದರದಿ೦ದ ಸ್ವಾಗತಿಸಿ ನ೦ತರ ದೇವಳಕ್ಕೆ ಮೆರವಣುಗೆಯಲ್ಲಿ ಕರೆತರಲಾಗುವುದು.
ದಾರಿಯುದಕ್ಕೂ ಸ್ವಾಮಿಯವರಿಗೆ ಹೂವಿನ ಹಾರವನ್ನು ಸಮರ್ಪಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
ಮೆರವಣಿಗೆಯಲ್ಲಿ ನಾಸಿಕ್ ಬ್ಯಾ೦ಡ್,ಬಿರುದಾವಳಿ,ವ್ಯಾದ,ಭಜನಾ ತ೦ಡಗಳು,ಕಲಶವನ್ನು ಹಿಡಿದ ಮಹಿಳೆಯರು ಹಾಗೂ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರು,ಪ್ರಧಾನಕಾರ್ಯದರ್ಶಿ, ಕಾರ್ಯದರ್ಶಿಗಳು ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಊರಿನ ಸಮಸ್ತಭಕ್ತರು ಭಾಗವಹಿಸಲಿದ್ದಾರೆ.
ನ೦ತರ ದೇವಸ್ಥಾನದ ಧ್ವಜಸ್ತ೦ಭದ ಮು೦ಭಾಗದಲ್ಲಿ ಪಾದಗಳಿಗೆ ನೀರನ್ನೇರೆದು ಹರಳನ್ನು ಹಾಕುವುದರೊ೦ದಿಗೆ ದೇವಸ್ಥಾನದ ಒಳಗೆ ಆದ್ದೂರಿಯಾಗಿ ಬರಮಾಡಿಕೊಳ್ಳಲಾಗುವುದು ನ೦ತರ ಶ್ರೀಗಳಿಬ್ಬರು ಶ್ರೀದೇವರಿಗೆ ನಮಸ್ಕರಿಸಿ ಗರ್ಭಗುಡಿಯನ್ನು ಪ್ರವೇಶಿಸಿ ದೇವರಿಗೆ ಆರತಿಯನ್ನು ಬೆಳಗಿಸಲಿದ್ದಾರೆ.
ನ೦ತರ ಇಬ್ಬರು ಪಾದಪೂಜೆ-ಫಲವಸ್ತು ಹಾರವನ್ನು ಸಮರ್ಪಿಸಿ ಆರತಿಯನ್ನು ಬೆಳಗಿಸಲಾಗುವುದು.ನ೦ತರ ಇಬ್ಬರು ನೆರೆದ ಭಕ್ತರನ್ನು ಉದ್ದೇಶಿಸಿ ಆಶೀರ್ವಚನವನ್ನು ಮಾಡಲಿದ್ದಾರೆ.ಆ ಬಳಿಕ ನೆರೆದ ಭಕ್ತರಿ ಮ೦ತ್ರಾಕ್ಷತೆಯನ್ನು ವಿತರಿಸಲಿದ್ದಾರೆ.