Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಮೋದಿಯ ಬೆಲೆ ಏರಿಕೆ ನೀತಿಗೆ ತಿರುಗಿಬಿದ್ದ ಕರ್ನಾಟಕದ ಜನತೆ:ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ:ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಪ್ರಚಾರಕ್ಕಾಗಿ ನಮ್ಮ ರಾಜ್ಯಕ್ಕೆ 18 ಬಾರಿ 18 ಜಿಲ್ಲೆಗಳಿಗೆ ಆಗಮಿಸಿದ್ದು 17 ಜಿಲ್ಲೆಯ ಮತದಾರರು ಮೋದಿಯವರ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಸಂಪೂರ್ಣವಾಗಿ ಬಿಜೆಪಿಯನ್ನು ಸೋಲಿಸಿರುತ್ತಾರೆ.
ಈ ಹಿಂದೆ ನಮ್ಮ ನಾಯಕ ಸನ್ಮಾನ್ಯ ರಾಹುಲ್ ಗಾಂಧಿಯವರನ್ನು ಹೋದಲ್ಲೆಲ್ಲ ಕಾಂಗ್ರೆಸ್ ಪಕ್ಷದ ಸೋಲುತ್ತಿದೆ ಎಂದು ಅಣಕಿಸುತ್ತಿದ್ದ ಈ ಬಿಜೆಪಿಯವರಿಗೆ ನಮ್ಮ ರಾಜ್ಯದ ಜನರು ತಿರುಗೇಟುನೀಡಿದ್ದು ಮೋದಿ ಹೋದಲ್ಲೆಲ್ಲ ಸೋಲು ಖಚಿತ ಎಂದು ಬಿಜೆಪಿಯವರ ಸೋಲಿನ ಬಾಗಿಲನ್ನು ತೆರೆದಿರುತ್ತಾರೆ ಮುಂದಿನ ದಿನಗಳಲ್ಲಿ ದೇಶದಾದ್ಯಂತ ಮೋದಿ ಹಾಗೂ ಅಮಿತ್ ಶಾ ಹೋದಲೆಲ್ಲ ಬಿಜೆಪಿಗೆ ಸೋಲು ಖಚಿತ ಎಂಬ ಮುನ್ನುಡಿಯನ್ನು ನಮ್ಮ ರಾಜ್ಯದ ಜನತೆ ತೋರಿಸಿದೆ.

ಈ ಬಿಜೆಪಿಯವರ ಬೆಲೆ ಏರಿಕೆ ನೀತಿ ಹಾಗೂ ಲಂಚಾವತಾರದಿಂದ ರಾಜ್ಯದ ಜನ ಬೇಸತ್ತಿದ್ದು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣವಾಗಿ ಬಹುಮತವನ್ನು ನೀಡಿರುತ್ತಾರೆ ನಮ್ಮ ರಾಜ್ಯದ ಕಾಂಗ್ರೆಸ್ ಪಕ್ಷದ ಗೆಲುವೇ ನಮ್ಮ ಇಡೀ ಭಾರತ ದೇಶದ ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ ಎಂದು ಉಡುಪಿ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ತಿಳಿಸಿರುತ್ತಾರೆ.

No Comments

Leave A Comment