ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.

MiG-21 ಯುದ್ಧ ವಿಮಾನಗಳ ಹಾರಾಟ ನಿಷೇಧ: ಭಾರತೀಯ ವಾಯುಪಡೆಯ ಮಹತ್ವದ ನಿರ್ಧಾರ

ನವದೆಹಲಿ: ಸತತ ಅಪಘಾತಗಳ ಹಿನ್ನಲೆಯಲ್ಲಿ ಭಾರತೀಯ ವಾಯುಪಡೆಗೆ ಸೇರಿದ ಮಿಗ್‌-21 ಯುದ್ಧ ವಿಮಾನಗಳನ್ನು ಮುಂದಿನ ಆದೇಶದ ವರೆಗೆ ಹಾರಾಟ ನಡೆಸದೇ ಇರಲು ತೀರ್ಮಾನಿಸಿದೆ.

ಮೇ 8ರಂದು ರಾಜಸ್ಥಾನದಲ್ಲಿ ನಡೆದಿದ್ದ ಯುದ್ಧ ವಿಮಾನ ಪತನದಲ್ಲಿ ಮೂವರು ಅಸುನೀಗಿದ್ದರು. ಯಾವ ಕಾರಣದಿಂದಾಗಿ ಈ ಅಪಘಾತ ಉಂಟಾಗಿದೆ ಎಂದು ತಿಳಿಯುವ ವರೆಗೆ ಮಿಗ್‌-21 ಯುದ್ಧ ವಿಮಾನಗಳ ಪೂರ್ಣ ಸ್ವಾಡ್ರನ್‌ ಅನ್ನು ಬಳಕೆ ಮಾಡದೇ ಇರಲು ಭಾರತೀಯ ವಾಯುಪಡೆ ಶನಿವಾರ ನಿರ್ಧರಿಸಿದ್ದಾರೆ.

1960ರಲ್ಲಿ ಮಿಗ್‌-21 ಸ್ಕ್ವಾಡ್ರನ್‌ಗಳು ಭಾರತೀಯ ವಾಯುಪಡೆಗೆ ಸೇರ್ಪಡೆಯಾದವು. 2025ರ ವೇಳೆಗೆ ಎಲ್ಲಾ ಮಿಗ್‌-21 ವಿಮಾನಗಳಿಗೆ ನಿವೃತ್ತಿ ನೀಡಲು ಭಾರತೀಯ ವಾಯುಸೇನೆ ಯೋಜಿಸಿದೆ.

No Comments

Leave A Comment