ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಉಡುಪಿಯ ಹಿರಿಯ ಛಲವಾದಿ ಕಾ೦ಗ್ರೆಸ್ ನಾಯಕ, ಮಾಜಿ ಶಾಸಕರಾದ ಯು.ಆರ್.ಸಭಾಪತಿ ನಿಧನ
ಉಡುಪಿಯ ಹಿರಿಯ ಛಲವಾದಿ ಕಾ೦ಗ್ರೆಸ್ ಪಕ್ಷದ ನಾಯಕ, ಮಾಜಿ ಶಾಸಕರಾದ ಯು.ಆರ್ ಸಭಾಪತಿಯವರು ಭಾನುವಾರದ೦ದು ಅಲ್ಪಕಾಲ ಅಸೌಖ್ಯದಿ೦ದಾಗಿ ತಮ್ಮ ಬಡಗುಪೇಟೆಯ ಮನೆಯಲ್ಲಿ ನಿಧನಹೊ೦ದಿದ್ದಾರೆ.ಅವರಿಗೆ 71ವರ್ಷ ಪ್ರಾಯವಾಗಿದ್ದು ಪತ್ನಿ ಹಾಗೂ ಇಬ್ಬರು ಗ೦ಡುಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗುವನ್ನು ಹಾಗೂ ಕುಟು೦ಬವರ್ಗದವರನ್ನು ಬಿಟ್ಟು ಅಗಲಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದರು. 1994 ರಲ್ಲಿ ಕೆಸಿಪಿ ಮತ್ತು 1999 ರಲ್ಲಿ ಕಾಂಗ್ರೆಸ್ ನಿಂದ ಶಾಸಕರಾಗಿದ್ದರು. ಯುಆರ್ ಸಭಾಪತಿ ಅವರು ಮಾಜಿ ಸಿಎಂ ಬಂಗಾರಪ್ಪ (Former CM Bangarappa) ಅವರ ಅನುಯಾಯಿ ಆಗಿದ್ದರು. ಆಸ್ಕರ್ ಫರ್ನಾಂಡಿಸ್ ರಾಜಕೀಯ ಪ್ರವೇಶಕ್ಕೂ ಸಭಾಪತಿ ಪ್ರೇರಣೆಯಾಗಿದ್ದರು. ಯುಆರ್ ಸಭಾಪತಿ ರಾಷ್ಟ್ರೀಯ ಜನತಾದಳ, ಜಾತ್ಯಾತೀತ ಜನತಾದಳದೊಂದಿಗೂ ಗುರುತಿಸಿಕೊಂಡಿದ್ದರು. 80 -90ರ ದಶಕದ ಕರಾವಳಿಯ ಪ್ರಭಾವಿ ನಾಯಕರಾಗಿದ್ದರು.ಸಭಾಪತಿ ಅವರು 1987 ರಲ್ಲಿ ದ.ಕ ಜಿಲ್ಲಾ ಪರಿಷತ್ತಿನ ಉದ್ಯಾವರ ಭಾಗದ ಸದಸ್ಯರಾಗಿ ಆಯ್ಕೆಯಾದರು ಮತ್ತು ಅವರು ಪರಿಷತ್ತಿನ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.
ದ.ಕ ಜಿಲ್ಲಾ ಕಾಂಗ್ರೆಸ್ ಉತ್ತರ ವಲಯದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 1989ರ ಉಡುಪಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗದ ಕಾರಣ ಕಾಂಗ್ರೆಸ್‌ನ ಮನೋರಮಾ ಮಧ್ವರಾಜ್ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಮನೋರಮಾ ಮಧ್ವರಾಜ್ ಅವರಿಂದ ಸೋಲು ಕಂಡಿದ್ದರು. ಅವರು 1994 ರ ಚುನಾವಣೆಯಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದರು. 1999ರಲ್ಲಿ ಕಾಂಗ್ರೆಸ್ ಯು ಆರ್ ಸಭಾಪತಿ ಅವರನ್ನು ಕಣಕ್ಕಿಳಿಸಿ ಗೆಲುವು ದಾಖಲಿಸಿತ್ತು. 2004 ರ ವಿಧಾನಸಭಾ ಚುನಾವಣೆಯಲ್ಲಿ ಅವರು ಬಿಜೆಪಿಯ ಕೆ ರಘುಪತಿ ಭಟ್ ಅವರಿಂದ ಸೋಲಿಸಲ್ಪಟ್ಟರು.
ಸಭಾಪತಿಯವರ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇ೦ದ್ರ ಹೆಗ್ಡೆ, ಉಡುಪಿಯ ಅಷ್ಟಮಠಾಧೀಶರು, ಕಾ೦ಗ್ರೆಸ್ ನ ಜಿಲ್ಲಾಧ್ಯಕ್ಷರು,ಬ್ಲಾಕ್ ಕಾ೦ಗ್ರೆಸ್ ಅಧ್ಯಕ್ಷರು,ಉಪಾಧ್ಯಕ್ಷರುಗಳು, ಜಿಲ್ಲಾ ಯುವಕಾ೦ಗ್ರೆಸ್ ಮುಖ೦ಡರು,ಕಾ೦ಗ್ರೆಸ್ ಪಕ್ಷದ ನಗರಸಭಾಸದಸ್ಯರು, ಮಾಜಿ ನಗರಸಭಾಸದಸ್ಯರು, ಯುವ ಕಾ೦ಗ್ರೆಸ್ ಮುಖ೦ಡ ಕೆ.ಕೃಷ್ಣಮೂರ್ತಿ ಆಚಾರ್ಯ,ಶ್ರೀ ಅಮೃತಕೃಷ್ಣಮೂರ್ತಿ ಆಚಾರ್ಯ,ಗಣೇಶ್ ರಾಜ್ ಸರಳಬೆಟ್ಟು,
ರಾಜ್ಯದ ಮುಖ್ಯಮ೦ತ್ರಿ ಸಿದ್ಧರಾಮಯ್ಯ, ಉಪಮುಖ್ಯಮ೦ತ್ರಿ ಡಿ.ಕೆ.ಶಿವಕುಮಾರ್, ಹಾಗೂ ಸಚಿವಸ೦ಪುಟದ ಎಲ್ಲಾ ಸಚಿವರು,ಮಾಜಿ ಶಾಸಕಿ ಮೋಟಮ್ಮ,ವಿನಯಕುಮಾರ್ ಸೊರಕೆ,ಗೋಪಾಲ ಪೂಜಾರಿ,ರಾಜುದೇವಾಡಿಗ, ಸುರೇಶ್ ಶೆಟ್ಟಿ ಬನ್ನ೦ಜೆ, ಮೀನಾಕ್ಷಿ ಮಾಧಮ ಬನ್ನ೦ಜೆ,ಮಹಾಬಲಕು೦ದರ್,ದಿನೇಶ್ ಪುತ್ರನ್,ವೆರೋನಿಕಾ ಕರ್ನೇಲಿಯೋ, ಉಡುಪಿಯ ರಥಬೀದಿಯ ಅನೇಕ ವ್ಯಾಪಾರಸ್ಥರು, ಎಸ್ ಎನ್ ನ್ಯೂಸ್ ಏಜೆನ್ಸಿ,ಎ೦.ರಾಜೇಶ್ ರಾವ್ ಕೊಳ೦ಬೆ(ಮ೦ಜುನಾಥ ಇಲೆಕ್ಟ್ರಿಕಲ್), ಕರಾವಳಿಕಿರಣ ಡಾಟ್ ಕಾ೦ ಬಳಗದವರು ಸ೦ತಾಪವನ್ನು ಸೂಚಿಸಿದ್ದಾರೆ.
ತಮ್ಮ ಜೀವನದಲ್ಲಿ ಈ ಬಾರಿಯ ಚುನಾವಣೆಯ ಸ೦ದರ್ಭದಲ್ಲಿ ಒಬ್ಬರೇ ನೇರವಾಗಿ ಮತದಾನ ಕೇ೦ದ್ರಕ್ಕೆ ತೆರಳಿ ಮತದಾನವನ್ನು ಮಾಡಿ ರಥಬೀದಿಯಲ್ಲಿ ಬರುತ್ತಿರುವಾಗ ಕರಾವಳಿಕಿರಣ ಡಾಟ್ ಕಾ೦ ನ ಮಾಲಿಕರಾದ ಜಯಪ್ರಕಾಶ್ ಕಿಣಿಯವರ ಕ್ಯಾಮರಾಕಣ್ಣಿನಿ೦ದ ಸೆರೆಹಿಡಿಯಲ್ಪಟ್ಟ ಕೊನೆಯ ಛಾಯಾಚಿತ್ರವಿದು.