ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.

ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ 4ನೇ ಪರ್ಯಾಯಕ್ಕೆ ಮೇ25ರ೦ದು ಅಕ್ಕಿ ಮುಹೂರ್ತ:

ಉಡುಪಿ:ಉಡುಪಿ ಶ್ರೀಕೃಷ್ಣ-ಮುಖ್ಯಪ್ರಾಣದೇವರಿಗೆ 2024-26ರ ಸಮಯದಲ್ಲಿ ನಾಲ್ಕನೇ ಬಾರಿ ತಮ್ಮ ಪರ್ಯಾಯ ಪೂಜೆಯನ್ನು ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಹಾಗೂ ಅವರ ಶಿಷ್ಯರಾದ ಶ್ರೀಸುಶೀ೦ದ್ರ ತೀರ್ಥಶ್ರೀಪಾದರು ನೆರವೇರಿಸಲಿದ್ದಾರೆ.ಈ ಪ್ರಯುಕ್ತವಾಗಿ ಮೇ 25ರ ಗುರುವಾರದ೦ದು ಅಕ್ಕಿಮುಹೂರ್ತ ಕಾರ್ಯಕ್ರಮವು ಅದ್ದೂರಿಯಿ೦ದ ನೆರವೇರಲಿದೆ.

 

ಈ ಕಾರ್ಯಕ್ರಮದ ಬಗ್ಗೆ ಈ ಕೆಳಗಿನ ನಿರ್ಣಯವನ್ನು ಹಮ್ಮಿಕೊಳ್ಳಲಾಗಿದೆ:-

* ಪ್ರತಿ ಸಂಘಟನೆಗಳು, ಸಂಸ್ಥೆಗಳು, (ಅಥವಾ ವೈಯಕ್ತಿಕವಾಗಿ) ಒಂದು ಮುಡಿ ಅಕ್ಕಿಯನ್ನು ಅಕ್ಕಿ ಸಂಗ್ರಹ ಸಂಕಲ್ಪ ಮೂಲಕ ಶ್ರೀ ಕೃಷ್ಣನಿಗೆ ಶ್ರೀಗಳವರ ಮೂಲಕ ಅರ್ಪಿಸಿ ಶ್ರೀಗಳವರ ಪರ್ಯಾಯಾವಧಿಯಲ್ಲಿ ತಮ್ಮ ಸೇವಾ ಮೂಲಕ ತೊಡಗಿಸಿಕೊಳ್ಳುವ ಚಿಂತನೆ.

* ಅಕ್ಕಿ ಮುಡಿ ಒಂದರ ಬೆಲೆ ರೂ. 1250. ಇದನ್ನು ಮುಂಗಡ ಪಾವತಿಸಿ, ರಸೀದಿ ಪಡೆಯಬೇಕು.

* ಅಕ್ಕಿ ಮುಹೂರ್ತದಂದು, 25.5.23, ಗುರುವಾರ ಬೆಳಿಗ್ಗೆ, 7.00 ಗಂಟೆಗೆ ನಾವೆಲ್ಲ ರಥಬೀದಿ ಪುತ್ತಿಗೆ ಮಠದಲ್ಲಿ ಸೇರಿ, ಅವರ ರಸೀದಿ ಪ್ರಕಾರ ಒಂದೊಂದು ಮುಡಿಯನ್ನು ಅವರ ಜನರೊಂದಿಗೆ ತಲೆಯಲ್ಲಿ ಹೊತ್ತು ಕೊಳ್ಳುವುದು (ಹೊರಲು ಚಿಕ್ಕ ಮುಡಿ ಮಾಡಿರುತ್ತೇವೆ).

* ಮೆರವಣಿಗೆ ಮೂಲಕ ರಥಬೀದಿ ಪ್ರದಕ್ಷಿಣೆ ಮಾಡಿ ಶ್ರೀ ಪುತ್ತಿಗೆಮಠದಲ್ಲೇ ಶ್ರೀಗಳವರಿಗೆ ಅರ್ಪಿಸಿ ಪ್ರಸಾದ ಮಂತ್ರಾಕ್ಷತೆ ಪಡಕೊಳ್ಳುವುದು.

* ಬೇಗನೆ ನೋಂದಾಯಿಸಿಕೊಂಡಲ್ಲಿ ಪ್ರತಿ ಮುಡಿಗೂ ಆಯಾ ಸಂಘಟನೆ, ಸಂಸ್ಥೆ, ಯಾ ವ್ಯಕ್ತಿಯ ಹೆಸರಿನ ಸ್ಟಿಕರ್ ಗಳನ್ನು ಸಿದ್ದ ಮಾಡಲು ಅನುಕೂಲವಾಗುವುದು.

ಅಕ್ಕಿ ಮುಡಿ ಬಾಬ್ತು ರೂ.1250 ನ್ನು ಪಾವತಿಸಿ ನಿಮ್ಮ ಸಂಘಟನೆಯ ಹೆಸರನ್ನು ಕೂಡಲೇ ದಯವಿಟ್ಟು ನೊಂದಾವಣೆ ಮಾಡಿಕೊಳ್ಳಿ. ಇದರಿಂದ ಮುಂದೆ ಎಲ್ಲ ಮುಡಿಗೂ ಹೆಸರನ್ನು ಬರೆಯಿಸಲು ಅನುಕೂಲವಾಗುವುದು.

ಬಹಳ ಜನರು ಸಂಕಲ್ಪ ಕಾಣಿಕೆ ನೀಡಲು ಬರುತ್ತಿದ್ದರೂ ಮೊದಲ ಆದ್ಯತೆ ಸಂಘಟನೆ, ಸಂಸ್ಥೆಗಳಿಗೆ. ಆದುದರಿಂದ ನಿಮ್ಮ ಗೂಗಲ್ ಪೇ ಯಾ ಫೋನ್ ಪೇ ಈ ಕೆಳಗಿನ ನಂಬರ್ ಗೆ ಮಾಡಿ:
9880846892 ಸುರೇಶ್ ಕಾರಂತ್.

ಹಣ ಪಾವತಿಸಿದ ರಸೀದಿ ಯೊಂದಿಗೆ ನಿಮ್ಮ ಸಂಘಟನೆ ಯಾ ಸಂಸ್ಥೆಯ ಹೆಸರು, ಮೊಬೈಲ್ ನಂಬರನ್ನು ನಮೂದಿಸಿ, ಮೇಲೆ ತಿಳಿಸಿರುವ ನಂಬರಿಗೆ ವಾಟ್ಸಪ್ ಮಾಡಿ. ಆಗ ನಿಮ್ಮ ‌ಹೆಸರಿನಲ್ಲಿ ಸಂಬಂಧಿಸಿದ ರಸೀದಿ ಹಾಗೂ ಸ್ಟಿಕರ್ ರೆಡಿ ಆಗಲಿದೆ.

ಅಕ್ಕಿ ಮುಹೂರ್ತಕ್ಕೆ ದಿನಗಳು ಕಡಿಮೆ ಇರುವುದರಿಂದಲೇ ಕೂಡಲೇ ಹೆಸರನ್ನು ನೊಂದಾಯಿಸಿಕೊಳ್ಳಬೇಕಾಗಿ ವಿನಂತಿ.

No Comments

Leave A Comment