Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಉಡುಪಿ ; ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ದಲ್ಲಿ ವಸಂತೋತ್ಸವ ಸ೦ಪನ್ನ…

ಉಡುಪಿ:ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ದಲ್ಲಿ ಶುಕ್ರವಾರ ರಾತ್ರಿಯ೦ದು ವಸಂತ ಮಾಸದ ಕೊನೆಯ ದಿನ ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಅಲಂಕಾರ , ಭಜನಾ ಕಾರ್ಯಕ್ರಮ , ವಸಂತ ಪೂಜೆ , ಅಷ್ಟಾವಧಾನ ಸೇವೆ, ಲಾಲ್ಕಿ ಉತ್ಸವ, ಹಾಗೂ ಪಲ್ಲಕಿ ಉತ್ಸವದೊ೦ದಿಗೆ ಸ೦ಪನ್ನ ಗೊ೦ಡಿತು.

ಪ್ರತಿ ವರುಷದಂತೆ ಸ್ವಯಂಸೇವಕರು ಮತ್ತು ಜಿ.ಎಸ್.ಬಿ ಯುವಕ ಮಂಡಳಿಯ ವತಿಯಿಂದ ವಸಂತೋತ್ಸವವು ಶುಕ್ರವಾರದಂದು ಧಾರ್ಮಿಕ ಪೂಜಾ ವಿಧಾನಗಳನ್ನು ಅರ್ಚಕರಾದ ವಿನಾಯಕ ಭಟ್ ನೆರವೇರಿಸಿದರು.

ದೇವಳದ ಆಡಳಿತ ಮುಕ್ತೇಸರರಾದ ಪಿ ವಿ ಶೆಣೈ , ವಿಶ್ವನಾಥ ಭಟ್ , ಗಣೇಶ ಕಿಣೆ , ವಿಶಾಲ್ ಶೆಣೈ , ನರಹರಿ ಪೈ , ದೀಪಕ್ ಭಟ್ , ಪ್ರಕಾಶ ಶೆಣೈ , ಜಿ ಎಸ್ ಬಿ , ಯುವಕ ಮಂಡಳಿ ಅಧ್ಯಕ್ಷ ನಿತೇಶ್ ಶೆಣೈ , ಪ್ರದೀಪ್ ರಾವ್ , ಜಿ ಎಸ್ ಬಿ , ಯುವಕ ಮಂಡಳಿ ಸದಸ್ಯರು ಹಾಗೂ ಮಹಿಳಾ ಮಂಡಳಿಯ ಸದಸ್ಯರು ಸಮಾಜ ಭಾಂದವರು ಉಪಸ್ಥಿತರಿದ್ದರು.

No Comments

Leave A Comment