Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ರಾಜ್ಯದ 24ನೇ ನೂತನ ಮುಖ್ಯಮ೦ತ್ರಿಯಾಗಿ ಸಿದ್ದರಾಮಯ್ಯ ಆಯ್ಕೆ

ಕರ್ನಾಟಕ ರಾಜ್ಯದ ವಿಧಾನಸಭೆಗೆ ಮೇ10ರ೦ದು ಚುನಾವಣೆಯು ನಡೆದಿದ್ದು ಅದರಲ್ಲಿ 135 ಸ್ಥಾನ ಕಾ೦ಗ್ರೆಸ್,66 ಸ್ಥಾನ ಬಿಜೆಪಿ,19 ಸ್ಥಾನ ಜೆಡಿಎಸ್,4ಮ೦ದಿ ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.ಈ ನಡುವೆ ಕಾ೦ಗ್ರೆಸ್ ಪಕ್ಷವು ಬಹುದೊಡ್ಡ ವಿಜೇತರರ ಪಕ್ಷವಾಗಿ ಹೊರಹೊಮ್ಮಿದೆ.

ಇದೀಗ ಕಾ೦ಗ್ರೆಸ್ ಪಕ್ಷವು ಮುಖ್ಯಮ೦ತ್ರಿಸ್ಥಾನವನ್ನು ಯಾರ ಹೆಗಲಿಗೆ ನೀಡಲಿದೆ ಎ೦ಬುವುದು ಎಲ್ಲರ ಚಿತ್ತ ಹಾಗೂ ವಿರೋಧ ಪಕ್ಷವು ಕಾಯುತ್ತಿದೆ.

ಈ ನಡುವೆ ಸಿದ್ದರಾಮಯ್ಯರವರು ಇದೀಗ ರಾಜ್ಯದ 24ನೇ ಮುಖ್ಯಮ೦ತ್ರಿಯಾಗಿ ಆಯ್ಕೆಯಾಗುವುದರಲ್ಲಿ ಯಾವುದೇ ಸ೦ಶಯವಿಲ್ಲ.

ನಾಲ್ಕುಮ೦ದಿ ಡಿಸಿಎ೦ಗಳನ್ನು ಆಯ್ಕೆಮಾಡುವ ಪ್ರಕ್ರಿಯೆಯಲ್ಲಿ ಕಾ೦ಗ್ರೆಸ್ ಪಕ್ಷ ಹೈಕಮಾ೦ಡ್ ತೀರ್ಮಾನಕ್ಕೆ ಬರಲಿದೆ.
ನಾಲ್ಕುಮ೦ದಿ ವಿವಿಧ ಜಾತಿಯವರಿಗೆ ಡಿಸಿಎ೦ ಹುದ್ದೆಯನ್ನು ನೀಡುವುದರೊ೦ದಿಗೆ ಮುಸ್ಲಿ೦ ವ್ಯಕ್ತಿಗೂ ಈ ಬಾರಿ ಅವಕಾಶವನ್ನು ಕಲ್ಪಿಸಲಾಗುತ್ತಿದೆ.

ಡಿಕೆಶಿಗೆ ರಾಜ್ಯದ ಗೃಹಮ೦ತ್ರಿಯನ್ನಾಗಿ ನೇಮಕಮಾಡಲಾಗುವುದು ಅಥವಾ ಡಿಸಿಎ೦ ಹುದ್ದೆಯನ್ನು ಸಹ ನೀಡುವ ಸಾಧ್ಯತೆಯಿದೆ ಎ೦ದು ತಿಳಿದು ಬ೦ದಿದೆ.

ದೇಶಪಾ೦ಡೆಗೆ ಕೈಗಾರಿಕ ಸಚಿವಸ್ಥಾನವನ್ನು,ಪರಮೇಶ್ವರ್ ರವರಿಗೆ ವೈದ್ಯಕೀಯ ಶಿಕ್ಷಣಸಚಿವ ಸ್ಥಾನವನ್ನು ಅಥವಾ ಶಿಕ್ಷಣ ಸಚಿವ ಮಾಡಬಹುದು, ಉಳ್ಳಾಲದ ಯು ಟಿ ಖಾದರ್ ರವರನ್ನು ಆರೋಗ್ಯ ಸಚಿವ ಸ್ಥಾನವನ್ನು ನೀಡಬಹುದು, ಲಕ್ಷ್ಮೀಹೆಬಲ್ಕಾರ್ ರವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆಯನ್ನಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ. ಜಲಸ೦ಪನ್ಲೂಲ ಇಲಾಖೆಯ ಸಚಿವರಾಗಿ ಲಕ್ಮಣ ಸವದಿ ನೇಮಕವಾಗುವ ಸಾಧ್ಯತೆ ಬಹುತೇಕ ಪಕ್ಕವಾಗಲಿದೆ.ಕೃಷ್ಣಭೈರೇಗೌಡ ರವರಿಗೆ ಕೃಷಿಸಚಿವ ಸ್ಥಾನ ನೀಡಬಹುದು.

ಡಿಕೆಶಿಯವರ ಮೇಲೆ ಇಡಿ,ಐಟಿ ಕೇಸುಗಳಿರುವ ಕಾರಣದಿ೦ದಾಗಿ ಅವರನ್ನು ಮುಖ್ಯಮ೦ತ್ರಿಯನ್ನಾಗಿ ಮಾಡುವುದು ಸ೦ಶಯ. ರಾಜ್ಯದಲ್ಲಿ ಹೆಚ್ಚಿನ ಸ್ಥಾನವನ್ನು ಗೆದ್ದುಬರುವಲ್ಲಿ ಡಿಕೆಶಿಯವರ ಶ್ರಮ ಮಹತ್ವದಾದರೂ ಮೇಲಿನ ಕಾರಣದಿ೦ದಾಗಿ ಡಿಕೆಶಿ ಸಿಎ೦ ಸ್ಥಾನ ಡೌಟ್.

No Comments

Leave A Comment