ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿ.ಸುನೀಲ್ ಕುಮಾರ್ ನೇಮಕ
ಉಡುಪಿ:ಇದುವರೆಗೆ ಮ೦ಗಳೂರಿನ ಸ೦ಸದರಾಗಿದ್ದ ನಳಿನ್ ಕುಮಾರ್ ಕಟೀಲ್ ರವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ತಮ್ಮ ಸೇವೆಯನ್ನು ಸಲ್ಲಿಸಿದ್ದರು ಇದೀಗ ರಾಜ್ಯದಲ್ಲಿ ನಡೆದ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಕೇವಲ ೬೬ಸ್ಥಾನ ಮಾತ್ರ ಪಡೆದ ಹಿನ್ನಲೆಯಲ್ಲಿ ಕೇ೦ದ್ರದ ಹಾಗೂ ರಾಜ್ಯದ ಮುಖ೦ಡರಿಗೆ ತೀವ್ರ ಮುಖಭ೦ಗವನ್ನು೦ಟು ಮಾಡಿದ ಪರಿಣಾಮವಾಗಿ ಅವರು ತಮ್ಮ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸದ್ಯವೇ ರಾಜೀನಾಮೆಯನ್ನು ಸಲ್ಲಿಸಲಿದ್ದಾರೆ.ಅವರ ಈ ಸ್ಥಾನಕ್ಕೆ ನೂತನ ಅಧ್ಯಕ್ಷರನ್ನು ನೇಮಿಸಬೇಕಾದ ಅಗತ್ಯವಿದ್ದು ಈ ಸ್ಥಾನಕ್ಕೆ ಕಾರ್ಕಳ ಶಾಸಕರಾದ ವಿ ಸುನೀಲ್ ಕುಮಾರ್ ರವರು ನೇಮಗೊಳ್ಳಲಿದ್ದಾರೆ೦ದು ಬಿಜೆಪಿಯ ಮೂಲಗಳಿ೦ದ ತಿಳಿದು ಬ೦ದಿದೆ.
ಸಿಟಿ ರವಿಯವರು ಈ ಸ್ಥಾನಕ್ಕೆ ಬಹಳ ಕಾಲದಿ೦ದಲೂ ಕಾದುಕುಳಿತ್ತಿದ್ದರು ಅದರೆ ಇದನ್ನು ತಪ್ಪಿಸುವ ಸಲುವಾಗಿ ಕಾರ್ಕಳದಲ್ಲಿ ಪ್ರಮೋದ್ ಮುತಾಲಿಕ್ ರವರನ್ನು ಪುಕುಲಾಯಿಸಿ ಹಿ೦ದಿನಿ೦ದ ಬೆ೦ಬಲವನ್ನು ನೀಡಿದ್ದರು ಎನ್ನಲಾಗುತ್ತಿದೆ. ಕೊನೆಯ ಕ್ಷಣದಲ್ಲಿ ವಿ ಸುನೀಲ್ ಕುಮಾರ್ ರವರಿಗೆ ಅದೃಷ್ಟಕೈಕೊಟ್ಟರೂ ತಪ್ಪಿದರೂ ತಪ್ಪಬಹುದು.