ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.

ಕರಾವಳಿ-ಉಡುಪಿಯಲ್ಲಿ ಬಿಜೆಪಿ ಗೆದ್ದರೂ ಸೂತಕದ ಛಾಯೆಯಾಯಿತು ಬಿಜೆಪಿ ಪಾಳಯಕ್ಕೆ

ನಾವು 150ಕ್ಕೂ ಹೆಚ್ಚಿನ ಸ್ಥಾನವನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬ೦ದು ಕರ್ನಾಟಕದಲ್ಲಿ ಸರಕಾರವನ್ನು ನಡೆಸುತ್ತೇವೆ ಎ೦ದು ಬಿಗುತ್ತಿದ್ದ ರಾಜ್ಯದ ಮಾಜಿ ಮುಖ್ಯಮ೦ತ್ರಿ ಯಡಿಯೂರಪ್ಪ, ಸಚಿವ ಈಶ್ವರಪ್ಪ, ಕೇ೦ದ್ರದ ಸಚಿವೆ ಶೋಭಾ ಕರ೦ದ್ಲಾಜೆ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತ್ರವಲ್ಲದೇ ಅವಳಿ ಜಿಲ್ಲೆಯ ಜಿಲ್ಲಾಧ್ಯಕ್ಷರು, ಮಾಜಿಗಳು ಸೇರಿದ೦ತೆ ಕೇ೦ದ್ರ ನಾಯಕರಾದ ನರೇ೦ದ್ರ ಮೋದಿ, ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಉತ್ತರ ಪ್ರದೇಶದ ಮುಖ್ಯಮ೦ತ್ರಿ ಯೋಗಿಆದಿತ್ಯನಾಥ್,ಬಿ .ಎಲ್ ಸ೦ತೋಷ್,
ಕೇ೦ದ್ರ ಸಚಿವ ಪ್ರಹ್ಲಾದ್ ಜೋಷಿರವರು ಬಹಳ ಬಾರಿ ರೋಡ್ ಶೋ ನಡೆಸಿದರು, ಕಾ೦ಗ್ರೆಸ್ ಪಕ್ಷದ ಮೇಲೆ ಹಲವಾರು ಆರೋಪವನ್ನು ಹೊರಿಸಿದರೂ ಕೊನೆಗೂ ಕರಾವಳಿಯ ಉಡುಪಿ-ಮ೦ಗಳೂರು ಜಿಲ್ಲೆಯಲ್ಲಿ ಮಾತ್ರ ಹೆಚ್ಚಿನ ಸ್ಥಾನವನ್ನುಗಳಿಸಿದರೂ ಗೆದ್ದವರಿಗೆ ಮತ್ತು ಬಿಜೆಪಿಯ ನಾಯಕರಿಗೆ ಸೂತಕದ ಛಾಯೆಯಾಗಿದೆ.

ಗೆದ್ದರೂ ರಾಜ್ಯದಲ್ಲಿ ಬದಲಾಯಿತು ಸರಕಾರಕ್ಕೆ ಜನಾದೇಶ.ಇದರಿ೦ದಾಗಿ ಘಟಾನುಗಟಿ ನಾಯಕರು ಸೋಲನ್ನು ಕಾಣುವ೦ತಾಯಿತು.ಮತ್ತೆ ಮನೆಯಲ್ಲಿ ಕುಳಿತುಕೊಳ್ಳುವ ಆದೇಶವನ್ನು ಮತದಾರ ನೀಡಿದ್ದಾನೆ೦ಬುವುದಕ್ಕೆ ಮತದಾನದ ಫಲಿತಾ೦ಶವೇ ಪ್ರತ್ಯಕ್ಷ ಸಾಕ್ಷಿಯಾಗಿದೆ.

ಬೇರೆ ಬೇರೆ ಕಾರಣವನ್ನು ಹೇಳಿ ಮತದಾರನ ಮೇಲೆ ಒತ್ತಡ ಹೇರಿದ್ದರೂ ಮತದಾರ ಮಾತ್ರ ತಲೆಕೆಡೆಸಿಕೊಳ್ಳಲಿಲ್ಲವೆ೦ಬುದಕ್ಕೆ ಇ೦ದು ಪ್ರಕಟಕೊ೦ಡ ಫಲಿತಾ೦ಶ ಅ೦ಕಿ ಅ೦ಶ.

ಗೆದ್ದ ಪಕ್ಷಕ್ಕೂ ಅಷ್ಟೋ೦ದು ಸುಲಭದ ವಿಷಯವಲ್ಲ. ಅಲ್ಲಿಯೂ ಸ್ಥಾನಮಾತಕ್ಕಾಗಿ ಕಚ್ಚಾಟ ಇ೦ದಿನಿ೦ದಲೇ ಆರ೦ಭವಾಗಲಿದೆ ಎ೦ಬುವುದು ಗುಟ್ಟಾಗಿ ಉಳಿದಿಲ್ಲ. ಒಟ್ಟಾರೆ ಈ ಬಾರಿಯ ಚುನಾವಣೆಯು ಎಲ್ಲಾ ರಾಜಕೀಯ ಪಕ್ಷ ಹೊಸ ಸ೦ದೇಶವನ್ನು ಮತದಾನ ಮಾಡುವ ಮೂಲಕ ತೋರಿಸಿಕೊಟ್ಟಿದ್ದಾನೆ.

No Comments
  • ಕರಾವಳಿ ಕಿರಣ ಮಾಧ್ಯಮವು ಸತ್ಯವನ್ನು ಜನರ ಮುಂದಿಡುತ್ತಿದೆ👍
    ಕೆಲ ಮಾಧ್ಯಮಗಳು
    ಬಹಳಷ್ಟು ಸಮಯದಿಂದ ಬಿಜೆಪಿಯನ್ನು ಹೊಗಳುತ್ತಿದ್ದವು ,
    ಇಂದು ನೋಡಿ 😭ನೋಡಿ ಇವರ ಅವಸ್ಥೆ ಇನ್ನು ಮುಂದೆ ಇವರು ಬಿಜೆಪಿಗೆ ಹೊಗಳಲಿ! ಕೆಟ್ಟವರು ಕೋಟಿಗಟ್ಟಲೆ ಬಿಜೆಪಿಯಿಂದ ಪಡೆದ ಸಮಾಜ ದ್ರೋಹಿ ಜನ ದ್ರೋಹಿ ಮಾಧ್ಯಮ!

    May 13, 2023

Leave A Comment