ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.
ಮೋದಿಯವರು ದೇಶದ ಪ್ರಧಾನಮ೦ತ್ರಿ-ಅವರು ಬಿಜೆಪಿ ಪಾರ್ಟಿಗಲ್ಲ-ಬಿಜೆಪಿ ಟೋಪಿ ಧರಿಸಿರುವುದು ಸರಿಯೇ?
ರಾಷ್ಟ್ರದಲ್ಲಿ ಅದೆಷ್ಟೋ ಮ೦ದಿ ಪ್ರಧಾನ ಮ೦ತ್ರಿಗಳಾಗಿ ದೇಶ ಸೇವೆಯನ್ನು ಮಾಡಿದ್ದಾರೆ. ಅದರೆ ಈಗೀನ ಪ್ರಧಾನ ಮ೦ದಿಯವರಾದ ನರೇ೦ದ್ರ ಮೋದಿಯವರು ನಮ್ಮ ದೇಶದ ಪ್ರಧಾನ ಮ೦ತ್ರಿ ಅವರು ಎಲ್ಲರಿಗೂ ಪ್ರಧಾನಮ೦ತ್ರಿಯಾಗಿದ್ದಾರೆ.
ಈ ನಡುವೆ ಕರ್ನಾಟಕ ರಾಜ್ಯದಲ್ಲಿ ನಡೆದ ೧೬ನೇ ಬಾರಿಯ ವಿಧಾನ ಸಭಾ ಕ್ಷೇತ್ರದ ಚುನಾವಣೆಯ ಸ೦ದರ್ಭದಲ್ಲಿ ರಾಜ್ಯಕ್ಕೆ ಒಟ್ಟು ೩೦ ಬಾರಿ ಚುನಾವಣಾ ಪ್ರಚಾರಕ್ಕೆ ಬ೦ದಿದ್ದಾರೆ.ಇವರು ಬಿಜೆಪಿ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ.
ಅದರೆ ರಾಜ್ಯದಲ್ಲಿನ ಚುನಾವಣೆಯ ಪ್ರಚಾರಕ್ಕೆ ಬ೦ದಾಗ ಇವರು ದೇಶದ ಪ್ರಧಾನ ಮ೦ತಿಯೆ೦ಬುವುದನ್ನೇ ಮರೆತ ಹಾಗಿತ್ತು ಇವರ ಪ್ರಚಾರದ ಕಾರ್ಯಕ್ರಮ.ನಿಜವಾಗಿಯೂ ಇವರು ಪ್ರಧಾನ ಮ೦ತ್ರಿಯಾಗಿ ತಲೆಯ ಮೇಲೆ ಕೇಸರಿಬಣ್ಣದ ತಾವರೆಯ ಟೋಪಿಯನ್ನು ಧರಿಸಿಕೊ೦ಡು ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಕ್ಕಾಗಿ ಪ್ರಚಾರಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಏಷ್ಟು ಸರಿ ಎ೦ಬುವುದನ್ನು ದೇಶದ ಪ್ರಜೆಯೊಬ್ಬನು ಇವರನ್ನು ನೇರವಾಗಿ ಪ್ರಶ್ನಿಸಿದ್ದಾನೆ.
ಒಬ್ಬ ಪ್ರಧಾನ ಮ೦ತ್ರಿಯಾಗಿ ತನ್ನ ಕರ್ತವ್ಯವನ್ನೇ ಮರೆತ ಹಾಗಿದೆ. ಇದೀಗ ನರೇ೦ದ್ರಮೋದಿಯವರು ನಡೆದಿರುವ ರೀತಿ ಏಷ್ಟರ ಮಟ್ಟಿಗೆ ಎ೦ಬುವುದನ್ನು ಪ್ರತಿಯೊಬ್ಬ ನಾಗರಿಕನೂ ಚಿ೦ತನೆ ನಡೆಸಬೇಕಾದ ವಿಷಯವಾಗಿದೆ.
ಮೋದಿಯ ಹಾಗೆ ಈ ಹಿ೦ದಿನ ಪ್ರಧಾನಮ೦ತ್ರಿಗಳು ಚುನಾವಣಾ ಪ್ರಚಾರಕ್ಕೆ ಬ೦ದಿದ್ದರೂ ಅದ್ರೆ ಪಕ್ಷದ ಚಿಹ್ನೆಯಿರುವ ಶಾಲು ಆಗಲೀ,ಟೋಪಿಯನ್ನು ಧರಿಸಿಲ್ಲವೆ೦ಬುವುದನ್ನು ತಿಳಿದ ಹಿರಿಯ ಭಾರತೀಯ ನಾಗರಿಕರು ಬಿಜೆಪಿಯನ್ನು ಹಾಗೂ ಮೋದಿಯವರನ್ನು ಪ್ರಶ್ನಿಸುತ್ತಿದ್ದಾರೆ.