ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ನಾಳೆವಿಧಾನಸಭಾ ಕ್ಷೇತ್ರದ ಚುನಾವಣೆ-ಅಷ್ಟ ಮಠಾಧೀಶರಿ೦ದ ವಿವಿಧ ಮತಗಟ್ಟೆಯಲ್ಲಿ ಮತದಾನ

ಉಡುಪಿಯ ಶ್ರೀಕೃಷ್ಣಾಪುರ ಮಠ,ಅದಮಾರು ಮಠ,ಪುತ್ತಿಗೆ ಮಠ,ಪಲಿಮಾರು ಮಠ,ಪೇಜಾವರ ಮಠ,ಕಾಣಿಯೂರು ಮಠ,ಸೋದೆ ಮಠ,ಶಿರೂರು ಮಠದ ಮಠಾಧೀಶರು ನಗರದ ವಿವಿಧ ಮತಗಟ್ಟೆಯಲ್ಲಿ ಮತವನ್ನು ಚಲಾಯಿಸಲಿದ್ದಾರೆ.

ತಮ್ಮತಮ್ಮ ಸಮಯದ ಅನುಕೂಲಕ್ಕೆ ಸರಿಯಾಗಿ ಸ್ವಾಮಿಯವರು ಮತದಾನವನ್ನು ಚಲಾಯಿಸಲಿದ್ದಾರೆ.

ಶ್ರೀಕೃಷ್ಣಾಪುರ ಮಠ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು ,ಅದಮಾರು ಶ್ರೀವಿಶ್ವಪ್ರಿಯ ತೀರ್ಥಶ್ರೀಪಾದರು ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಹಾಗೂ ಅದಮಾರು ಮಠದ ಕಿರಿಯ ಯತಿಗಳಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರು,ಪಲಿಮಾರು ಮಠದ ಶ್ರೀವಿದ್ಯಾರಾಜೇಶ್ವರ ತೀರ್ಥಶ್ರೀಪಾದರು,ಶಿರೂರು ಮಠದ ಶ್ರೀವೇದವರ್ಧನ ತೀರ್ಥಶ್ರೀಪಾದರು ನಗರ ನೋರ್ತ್ ಶಾಲೆಯ ಮತಗಟ್ಟೆಯಲ್ಲಿ, ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಹಾಗೂ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರು, ಕಾಣಿಯೂರು ಶ್ರೀವಿದ್ಯಾವಲ್ಲ್ಲಭ ತೀರ್ಥಶ್ರೀಪಾದರು,ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥಶ್ರೀಪಾದರು ಶ್ರೀಅನ೦ತೇಶ್ವರ ಶಾಲೆಯ ವಾದಿರಾಜ ರಸ್ತೆಯಲ್ಲಿನ ಮತಗಟ್ಟೆ ತಮ್ಮ ಮತವನ್ನು ಚಲಾಯಿಸಲಿದ್ದಾರೆ.

No Comments

Leave A Comment