Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಅಮೆರಿಕಾದಲ್ಲಿ ಶೂಟೌಟ್: ಹೈದ್ರಾಬಾದ್ ಮಹಿಳೆ ಸೇರಿದಂತೆ 9 ಮಂದಿಯ ಹತ್ಯೆ

ದಲ್ಲಾಸ್: ಅಮೆರಿಕಾದ ದಲ್ಲಾಸ್ ನಲ್ಲಿ ಶನಿವಾರ ನಡೆದ ಶೂಟೌಟ್ ನಲ್ಲಿ ಹೈದ್ರಾಬಾದ್ ಮೂಲದ ಮಹಿಳೆ ಸೇರಿದಂತೆ 9 ಮಂದಿ ಹತ್ಯೆಯಾಗಿದ್ದಾರೆ.

ದಲ್ಲಾಸ್ ನ ಮಾಲ್ ವೊಂದರ ಹೊರಗೆ ಬಂದೂಕು ದಾರಿ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ನಂತರ
ಹತ್ಯೆಗೀಡಾದ  ಒಂಬತ್ತು ಜನರ ಪೈಕಿ ಭಾರತೀಯ ಮೂಲದ ಇಂಜಿನಿಯರ್ ಐಶ್ವರ್ಯಾ ತಾಟಿಕೊಂಡ ಕೂಡ ಒಬ್ಬರಾಗಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಖಾಸಗಿ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ ತಾಟಿಕೊಂಡ ಹೈದರಾಬಾದ್‌ನ ಸರೂರ್‌ನಗರ ನಿವಾಸಿಯಾಗಿದ್ದು, ಭಾರತದಿಂದ ಅಮೆರಿಕಕ್ಕೆ ತೆರಳಿದ್ದರು. 27 ವರ್ಷದ ತಾಟಿಕೊಂಡ ದಲ್ಲಾಸ್ ಹೊರವಲಯ ಅಲ್ಲೆನ್ ಪ್ರೀಮಿಯಂನ ಮಳಿಗೆಯೊಂದರಲ್ಲಿ ಶಾಫಿಂಗ್ ಮಾಡುತ್ತಿದ್ದಾಗ ಬಂದೂಕುದಾರಿ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಹಂತಕನನ್ನು ಮಾರಿಸಿಯೊ ಗಾರ್ಸಿಯಾ ಎಂದು ಗುರುತಿಸಲಾಗಿದೆ. ನಂತರ ಪೊಲೀಸ್ ಅಧಿಕಾರಿಯೊಬ್ಬರು ಗುಂಡಿಕ್ಕಿ ಆತನನ್ನು ಕೊಂದಿದ್ದಾರೆ. ತಾಟಿಕೊಂಡ ಟೆಕ್ಸಾಸ್‌ನ ಮೆಕಿನ್ನಿಯಲ್ಲಿ ವಾಸಿಸುತ್ತಿದ್ದರು. ಆಕೆಯ  ಕುಟುಂಬ ಭಾರತದಲ್ಲಿತ್ತು ಎಂದು ವಾಹಿನಿಯೊಂದು ವರದಿ ಮಾಡಿದೆ.

ದಲ್ಲಾಸ್ ನಲ್ಲಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದ ತಾಟಿಕೊಂಡ ಮಾಲ್ ವೊಂದರಲ್ಲಿ ಆಕೆ ಶಾಫಿಂಗ್ ಮಾಡುತ್ತಿದ್ದಾಗ ಗುಂಡಿನ ದಾಳಿ ನಡೆದಿದೆ. ಆಕೆಯ ಸ್ನೇಹಿತೆ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಟಿಕೊಂಡ ಮೃತದೇಹವನ್ನು ಭಾರತಕ್ಕೆ ತರಲು ಆಕೆಯ ಕುಟುಂಬ ಯೋಜನೆ ಮಾಡುತ್ತಿದೆ ಎಂದು ಪ್ರತಿನಿಧಿಯೊಬ್ಬರು ಹೇಳಿದ್ದಾರೆ.

No Comments

Leave A Comment