ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಮಧ್ಯ ಪ್ರದೇಶ: ರೂ. 50,000ಕ್ಕೆ ಅಪ್ರಾಪ್ತ ಬಾಲಕಿ ಮಾರಾಟ: ನಾಲ್ವರ ಬಂಧನ
ಮಧ್ಯ ಪ್ರದೇಶ: ವ್ಯಕ್ತಿಯೊಬ್ಬರಿಗೆ 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು 50,000 ರೂ.ಗೆ ಮಾರಾಟ ಮಾಡಿದ ಆರೋಪದ ಮೇಲೆ ಮೂವರು ಪುರುಷರು ಮತ್ತು ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಮಂಡ್ಲಾ ಜಿಲ್ಲೆಯ ಘುಘ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾಗಿರುವ ಬಾಲಕಿ, ಜಬಲ್‌ಪುರದ ಡೈರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರು ಆರೋಪಿಗಳಾದ ಪಹಲ್ವತಿ ಬಾಯಿ ಮತ್ತು ಸುನಿಲ್ ಕುಶ್ವಾಹ ಭೇಟಿಯಾಗಿರುವುದಾಗಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮೃತ್ ಮೀನಾ ತಿಳಿಸಿದ್ದಾರೆ. ಮುಂಬೈನಲ್ಲಿ ಅದಕ್ಕಿಂತ ಉತ್ತಮ ಕೆಲಸ ಕೊಡಿಸುವ ನೆಪದಲ್ಲಿ ಆರೋಪಿಗಳು ಆಕೆಗೆ ಆಮಿಷವೊಡ್ಡಿದ್ದರು.
ನಂತರ ಆರೋಪಿಗಳು ರೈಸನ್‌ನ ಪಟಾಯ್ ಗ್ರಾಮಕ್ಕೆ ತಲುಪಿದ್ದು, ರೂ. 50,000 ರೂ.ಗೆ ವಿಷ್ಣು ಕುಶ್ವಾಹ ಎಂಬ ವ್ಯಕ್ತಿಗೆ ಮದುವೆಯಾಗಲು ಬಾಲಕಿಯ್ನು ಮಾರಾಟ ಮಾಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಮಧ್ಯೆ, ಬಾಲಕಿಯ ಪೋಷಕರು ಮಾಂಡ್ಲಾ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.