ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಉ.ಪ್ರ.ದಲ್ಲಿ ಮತ್ತೊಂದು ಎನ್‌ಕೌಂಟರ್-ಪೊಲೀಸರ ಗುಂಡೇಟಿಗೆ ಕುಖ್ಯಾತ ಗ್ಯಾಂಗ್‌ಸ್ಟರ್ ಬಲಿ

ಲಕ್ನೋ:ಮೇ 04 . ಉತ್ತರ ಪ್ರದೇಶದ ಪೊಲೀಸರು ಮತ್ತೊಬ್ಬ ಗ್ಯಾಂಗ್‌ಸ್ಟರ್‌ನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ.

ಗ್ಯಾಂಗ್​ಸ್ಟರ್​ ಎನ್ನಿಸಿಕೊಂಡಿದ್ದ ಅನಿಲ್ ದುಜಾನಾನನ್ನು ಇಂದು ಮೀರತ್​​ನಲ್ಲಿ ಉತ್ತರ ಪ್ರದೇಶ ಸ್ಪೆಶಲ್ ಟಾಸ್ಕ್​ ಫೋರ್ಸ್​ (STF) ಎನ್‌ಕೌಂಟರ್‌ ಮಾಡಿದೆ. ಗ್ಯಾಗ್‌ಸ್ಟರ್ ಅತೀಕ್ ಅಹ್ಮದ್‌ನ ಮಗ ಅಸಾದ್ ಅಹ್ಮದ್ ಹಾಗೂ ಆತನ ಸಹಚರ ಗುಲಾಂ ಮೊಹಮ್ಮದ್‌ ಎನ್‌ಕೌಂಟರ್‌ ನಡೆದ ಕೆಲವೇ ದಿನಗಳಲ್ಲಿ ಅನಿಲ್ ದುಜಾನಾನನ್ನು ಹತ್ಯೆ ಮಾಡಲಾಗಿದೆ

ಅನಿಲ್ ದುಜಾನಾ ಮೂಲತಃ ಗೌತಮ ಬುದ್ಧ ನಗರ ಜಿಲ್ಲೆಯ ದುಜಾನಾ ಗ್ರಾಮದವನು. ಈತ ನೈಜ ಹೆಸರು ಅನಿಲ್ ನಗರ್. ಉತ್ತರ ಪ್ರದೇಶದ ಪಶ್ಚಿಮ ಭಾಗಗಳಲ್ಲಿ ತನ್ನ ಹವಾ ಇಟ್ಟುಕೊಂಡಿದ್ದ ಅನಿಲ್, ಜನರಲ್ಲಿ ಭೀತಿ ಮೂಡಿಸಿದ್ದ. ಗ್ಯಾಂಗ್​ಸ್ಟರ್​ ಅನಿಲ್ ವಿರುದ್ಧ 18 ಕೊಲೆ ಕೇಸ್​ಗಳು, ಸುಲಿಗೆ, ದರೋಡೆ, ಭೂ ಕಬಳಿಕೆ, ಒತ್ತುವರಿ ಸೇರಿ ಒಟ್ಟು 62 ಕ್ರಿಮಿನಲ್ ಕೇಸ್​ಗಳು ಇದ್ದವು.

No Comments

Leave A Comment