ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಕೊವಿಡ್ ನಿರ್ವಹಣೆ ವೇಳೆ ಕೋಟ್ಯಂತರ ರೂ. ಅವ್ಯವಹಾರ ಆರೋಪ: ಯಡಿಯೂರಪ್ಪ ಸೇರಿದಂತೆ 28 ಜನರ ವಿರುದ್ಧ ಲೋಕಾಯುಕ್ತಗೆ ದೂರು
ಬೆಂಗಳೂರು: ಬರೋಬ್ಬರಿ 821.22 ಕೋಟಿ ಬೃಹತ್ ಮೊತ್ತದ ಹಗರಣ ನಡೆಸಿದ ಆರೋಪ ಹಿನ್ನೆಲೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa), ಸಚಿವರು ಮತ್ತು ಐಎಎಸ್ ಅಧಿಕಾರಿಗಳು ಸೇರಿದಂತೆ ಒಟ್ಟು 28 ಜನರ ವಿರುದ್ಧ ಲೋಕಾಯುಕ್ತಗೆ ದೂರು ನೀಡಲಾಗಿದೆ. ದಾಖಲೆ ಸಮೇತ ಆರ್ಟಿಐ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಎನ್ನುವವರಿಂದ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಕೊವಿಡ್ ನಿರ್ವಹಣೆ ವೇಳೆ ಬಿಬಿಎಂಪಿಯಿಂದ ಕೋಟ್ಯಂತರ ಅವ್ಯವಹಾರ, ಆಂಬ್ಯುಲೆನ್ಸ್ ಖರೀದಿ ನೆಪದಲ್ಲಿ ಹೆಚ್ಚಿನ ವಾಹನಗಳ ಸಂಖ್ಯೆ ತೋರಿಸಿದ್ದಾರೆ.
ಆ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಕೊವಿಡ್ ವಲಯವಾರು ಉಸ್ತುವಾರಿಯಾಗಿದ್ದರು. ಸಚಿವರಾದ ವಿ.ಸೋಮಣ್ಣ ಅಶ್ವತ್ಥ್ ನಾರಾಯಣ, ಸುರೇಶ್ ಕುಮಾರ್, ಎಸ್.ಟಿ.ಸೋಮಶೇಖರ್, ಗೋಪಾಲಯ್ಯ ಜೋನಲ್ ಮ್ಯಾನೇಜ್ಮೆಂಟ್ ನಿರ್ವಹಿಸಿದ್ದರು ಎಂದಿದ್ದಾರೆ.
ಆ್ಯಂಬುಲೆನ್ಸ್ಗಳ ಖರೀದಿಗೆ ನಕಲಿ ದಾಖಲೆ ಸೃಷ್ಟಿ
IAS ಅಧಿಕಾರಿಗಳಾದ ಗೌರವ್ ಗುಪ್ತಾ, ಪಿ.ಸಿ.ಜಾಫರ್, ಮನೋಜ್ ಕುಮಾರ್ ಮೀನಾ, ರವಿಕುಮಾರ್, ವಿ.ಅನ್ಬುಕುಮಾರ್, ಉಜ್ವಲ್ ಕುಮಾರ್, ಪಂಕಜ್ ಕುಮಾರ್ ಕೋಆರ್ಡಿನೇಟ್ ಮಾಡುತ್ತಿದ್ದರು. 821 ಕೋಟಿಗೂ ಹೆಚ್ಚು ಅವ್ಯವಹಾರದಲ್ಲಿ 28 ಜನರು ಭಾಗಿಯಾಗಿದ್ದಾರೆ. ಕೊವಿಡ್ ವೇಳೆ ಬೆಂಗಳೂರನ್ನು 8 ವಲಯಗಳಾಗಿ ವಿಂಗಡಿಸಿದ್ದರು. ಸಾವಿರಾರು ಆ್ಯಂಬುಲೆನ್ಸ್ಗಳನ್ನು ಖರೀದಿಸುವುದಾಗಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ.
ಹಗರಣದಲ್ಲಿ ಬಹುಪಾಲು ಸರ್ಕಾರಿ ಅಧಿಕಾರಿಗಳು ಭಾಗಿ ಆರೋಪ
ಆ್ಯಂಬುಲೆನ್ಸ್ ಹೊರತಾದ ವಾಹನಗಳ ನೋಂದಣಿ ಸಂಖ್ಯೆಗಳಿವೆ. ಬಿಎಸ್ವೈ ಪುತ್ರ ಬಿ.ವೈ.ವಿಜಯೇಂದ್ರ ಆಪ್ತ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಹಗರಣದಲ್ಲಿ ಬಹುಪಾಲು ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ. ಕೊವಿಡ್ ವೇಳೆ ಜನರ ಹೆಣ ಮಾರಿ ಹಣ ಮಾಡಿದ್ದಾರೆ. ಟ್ರಾವೆಲ್ಸ್ನಲ್ಲಿ ಖರೀದಿ ಮಾಡಿರುವುದಾಗಿ ದಾಖಲೆ ಸೃಷ್ಟಿಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು FIR ದಾಖಲಿಸಿ ತನಿಖೆ ಮಾಡಬೇಕಿದೆ. ಒಂದು ವೇಳೆ ದಾಖಲಿಸದಿದ್ದರೆ ಮುಂದೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಲಾಗಿದೆ.