ದೆಹಲಿ: ತಿಹಾರ್ ಜೈಲಿನಲ್ಲಿ ಮತ್ತೊಂದು ಗ್ಯಾಂಗ್ ವಾರ್, ರೌಡಿ ತಿಲ್ಲು ತಾಜ್ಪುರಿಯಾ ಹತ್ಯೆ
ನವದೆಹಲಿ: ದೇಶದ ರಾಜಧಾನಿ ದೆಹಲಿಯ ತಿಹಾರ್ ಜೈಲಿನಲ್ಲಿ ಮತ್ತೊಂದು ಗ್ಯಾಂಗ್ ವಾರ್ ನಡೆದಿದ್ದು, ಕುಖ್ಯಾತ ರೌಡಿ ತಿಲ್ಲು ತಾಜ್ಪುರಿಯಾನನ್ನು ಹತ್ಯೆ ಮಾಡಲಾಗಿದೆ.
ಹೌದು.. ತಿಹಾರ್ ಜೈಲಿನಲ್ಲಿ ಮತ್ತೊಮ್ಮೆ ಗ್ಯಾಂಗ್ವಾರ್ ನಡೆದ ವರದಿಯಾಗಿದ್ದು ರೌಡಿ ತಿಲ್ಲು ತಾಜ್ಪುರಿಯಾನನ್ನು ಹತ್ಯೆ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ನಾಲ್ವರು ಕೈದಿಗಳು ತಿಲ್ಲು ತಾಜ್‌ಪುರಿ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದು, ಇವರು ಗೋಗಿ ಗ್ಯಾಂಗ್‌ಗೆ ಸೇರಿದವರು ಎನ್ನಲಾಗಿದೆ.
ತಿಲ್ಲು ಮೇಲೆ ದಾಳಿ ಮಾಡಿದ ರೌಡಿಯನ್ನು ಯೋಗೇಶ್ ತುಂಡ ಎಂದು ಗುರುತಿಸಲಾಗಿದ್ದು, ತಿಲ್ಲು ತಾಜ್ಪುರಿಯ ವಿರುದ್ಧ ಕೊಲೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಕೆಲವು ತಿಂಗಳುಗಳ ಹಿಂದೆ ರೋಹಿಣಿ ನ್ಯಾಯಾಲಯದ ಕೋರ್ಟ್ ಕೊಠಡಿಯಲ್ಲಿ ಗ್ಯಾಂಗ್ಸ್ಟರ್ ಜಿತೇಂದ್ರ ಗೋಗಿಯನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ತಿಲ್ಲು ಕೈವಾಡ ಇತ್ತು ಎಂದು ಪೊಲೀಸರು ಹೇಳಿದ್ದಾರೆ.