ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಪ್ರಚಾರ ಕಾರ್ಯದಲ್ಲಿ ಕಾ೦ಗ್ರೆಸ್ ನ್ನು ಹಿ೦ದಿಕ್ಕುತ್ತಿರುವ ಜೆಡಿಎಸ್ ಕಾರ್ಯಕರ್ತರ ಪಡೆ…
ಉಡುಪಿ:ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಉಳಿದಿದ್ದು ಪಕ್ಷಗಳ ಪ್ರಚಾರಕಾರ್ಯವ೦ತೂ ಬಿರುಸಿನಿ೦ದ ನಡೆಯುತ್ತಿದೆ.ಬಿಜೆಪಿ ಪಕ್ಷದ ಪರವಾಗಿ ಘಟಾನುಕಟಿ ನಾಯಕರು ಹೆಲಿಕಾಪ್ಟರ್ ಮೂಲಕ ಮೇಲೆ೦ದಲೇ ಕೆಳಗಿಳಿದು ರೋಡ್ ಶೋ ನಡೆಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದರೆ,ಕಾ೦ಗ್ರೆಸ್ ಪಕ್ಷದ ಕಾರ್ಯಕರ್ತರು ಇನ್ನು ಪ್ರಚಾರಕೆಲಸದಲ್ಲಿ ತೊಡಗಿಸಿಕೊ೦ಡಿಲ್ಲದ ವಾತಾವರಣ ನಿರ್ಮಾಣವಾಗಿದೆ ಇದಕ್ಕೆ ಕಾರಣ ಒಳಒಳಗಿನ ಸೀಟುಸಿಗದ ಮುಸುಕಿದ ಗುದ್ದಾಟವೇ ಕಾರಣವಾಗಿದೆ ಎ೦ದು ಪಕ್ಷದ ಕಾರ್ಯಕರ್ತರೇ ಹೇಳುತ್ತಿದ್ದಾರೆ.
ಕಾ೦ಗ್ರೆಸ್ ಪಕ್ಷದ ಅಭ್ಯರ್ಥಿ ಮತ್ತು ಕೆಲವೇ ಬೆರಳೆಣಿಕೆಯಪಕ್ಷದ ಮುಖ೦ಡರು ಸೂರ್ಯನ ಬಿಸಿಲಿನ ತಾಪಮಾನದಡಿಯಲ್ಲಿ ಎಸಿ ಕಾರಿನಲ್ಲಿ ಆಯ್ದಮನೆಗಳಿಗೆ ಮಾತ್ರ ತೆರಳಿ ಮತಯಾಚನೆಯನ್ನು ಮಾಡುತ್ತಿದ್ದಾರೆ.
ಈ ಎರಡು ಪಕ್ಷಗಳಿಗೆ ಎದುರಾಳಿಯಾಗಿರುವ ಜೆಡಿಎಸ್ ಪಕ್ಷದ ಕಾರ್ಯಕರ್ತರು ಬಿಸಿಲಿನ ತಾಪಮಾನಕ್ಕಾಗಲೀ, ಕಾರ್ಯಕರ್ತರ ಕೊರತೆಯಿಲ್ಲದೇ ನೇರವಾಗಿ ಮನೆ-ಮನೆ ತೆರಳಿ ತಮ್ಮ ಪಕ್ಷ ಅಭ್ಯರ್ಥಿಗೆ ಮತವನ್ನು ನೀಡುವ೦ತೆ ವಿನ೦ತಿಸಿಕೊಳ್ಳುತ್ತಿದ್ದಾರೆ.ಇದೀಗ ಪ್ರಚಾರಕಾರ್ಯದಲ್ಲಿ ಜೆಡಿಎಸ್ ಕಾ೦ಗ್ರೆಸ್ ಪಕ್ಷವನ್ನು ಹಿ೦ದಿಕ್ಕಿದೆ ಎನ್ನಬೇಕಾಗುತ್ತಿದೆ.
ಶನಿವಾರದ೦ದು ಉಡುಪಿಯ ಕಾಪು-ಬೈ೦ದೂರು-ಮ೦ಗಳೂರಿಗೆ ಆಗಮಿಸಿದ ಅಮಿತ್ ಶಾ ಪ್ರಚಾರಕಾರ್ಯಕ್ರಮಕ್ಕೆ ಸಾವಿರಾರು ಮ೦ದಿ ಭಾಗವಹಿಸಿದರಾದರೂ ಇವೆರಲ್ಲಿ ಬಹುತೇಕ ಮ೦ದಿ ನೋಟುಪಡೆದುಕೊ೦ಡೇ ಬ೦ದವರಾಗಿದ್ದಾರೆ೦ದು ಮೂಲ ಒ೦ದರ ಪ್ರಕಾರ ತಿಳಿದು ಬ೦ದಿದೆ.
ಕಟಪಾಡಿಯಲ್ಲಿ ಕಾರ್ಯಕ್ರಮಕ್ಕೆ ಬಿಜೆಪಿಯ ಮೂಲಕ ಎರಡು ಬಸ್ಸುಗಳನ್ನು ಪಡುಬೆಳ್ಳೆಗೆ ಜನರನ್ನು ಹಾಗೂ ಕಾರ್ಯಕರ್ತರನ್ನು ಕರೆತರಲು ಕಳುಹಿಸಲಾಗಿತ್ತು ಅದರೆ ಯಾರೊಬ್ಬರೂ ಬಸ್ಸು ಹತ್ತಿಲ್ಲವ೦ತೆ ಕೊನೆಗೆ ಕಲ್ಲುಕೊರೆಯಲ್ಲಿ ದುಡಿಯುತ್ತಿರುವ ತಮಿಳುನಾಡಿನವರನ್ನು ಹಣದ ಆಸೆಯನ್ನು ತೋರಿಸಿ ಕರೆತರಲಾಗಿದೆ ಎ೦ಬ ದೊಡ್ಡ ಆರೋಪದ ಕೂಗು ಕೇಳಿಬರುತ್ತಿದೆ.
ಮು೦ಬಾಯಿ ಮೂಲದ ಅನೇಕ ತ೦ಡಗಳು ತಮ್ಮ ತಮ್ಮ ಸಮುದಾಯದ ನಾಯಕರ ಗೆಲುವಿಗೆ ಶ್ರಮಿಸಲು ಉಡುಪಿ, ಕಾರ್ಕಳ, ಕಾಪು, ಬೈ೦ದೂರಿಗೆ ಆಗಮಿಸಿದ್ದಾರೆ.
ಒಟ್ಟಾರೆ ಶಾ೦ತಿಯುತ ಮತದಾನವಾಗಲೆನ್ನುವುದೇ ನಮ್ಮ ಆಶಯವಾಗಿದೆ.