Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಶ್ರದ್ಧಾವಾಕರ್ ಹತ್ಯೆ ಕೇಸ್: ನ್ಯಾಯಾಲಯ ಇಂದು ಆದೇಶ ಪ್ರಕಟಿಸುವ ಸಾಧ್ಯತೆ

ನವದೆಹಲಿ: ಏ 29. ದೇಶವನ್ನೇ ಬೆಚ್ಚಿಬೀಳಿಸಿದ್ದ ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ತೀರ್ಪನ್ನು ಇಂದು ಸಾಕೇತ್ ನ್ಯಾಯಾಲಯ ತನ್ನ ಆದೇಶವನ್ನುಪ್ರಕಟಿಸುವ ಸಾಧ್ಯತೆಯಿದೆ.

ಏ.15ರಂದು ಪ್ರಮುಖ ಆರೋಪಿ ಅಫ್ತಾಬ್ ಪೂನಾವಾಲಾ ವಿರುದ್ಧ ಆರೋಪಗಳ ಕುರಿತು ನ್ಯಾಯಾಲಯ ಆದೇಶ ಕಾಯ್ದಿರಿಸಿತ್ತು. ಈ ನಡುವೆ ಮಗಳ ಮೃತದೇಹ ಅವಶೇಷವನ್ನು ಶ್ರದ್ಧಾ ತಂದೆ ವಿಕಾಸ್‌ಗೆ ಹಸ್ತಾಂತರಿಸುವ ಕುರಿತು ದಿಲ್ಲಿ ಪೊಲೀಸರು ಕೋರ್ಟ್‌ಗೆ ಉತ್ತರ ಸಲ್ಲಿಸಲಿದ್ದಾರೆ. ಇದಕ್ಕೂ ಮುನ್ನ ಶ್ರದ್ಧಾ ಅವರ ತಂದೆ, ಮಗಳ ಅಂತಿಮ ಸಂಸ್ಕಾರಕ್ಕಾಗಿ ಶವ ನೀಡುವಂತೆ ಮನವಿ ಮಾಡಿದ್ದರು.

ಕಳೆದ ವರ್ಷ ಮೇ 18 ರಂದು ಶ್ರದ್ಧಾ ವಾಕರ್ ನ್ನು ಆಕೆಯ ಸಹಜೀವನ ಸಂಗತಿಯೇ ಕತ್ತು ಹಿಸುಕಿ ಹತ್ಯೆಗೈದರು, ನಂತರ ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ಆತನ ನಿವಾಸದಲ್ಲಿ ಸುಮಾರು ಮೂರು ವಾರಗಳ ಕಾಲ ಫ್ರಿಡ್ಜ್‌ನಲ್ಲಿ ಇರಿಸಿ ದೇಹದ ತುಂಡುಗಳನ್ನು ದೆಹಲಿಯ ಬೇರೆ ಬೇರೆ ಭಾಗದಲ್ಲಿ ಎಸೆದುಬಂದಿದ್ದ. ಘಟನೆ ಬೆಳಕಿಗೆ ಬಂದ ಬಳಿಕ ದೆಹಲಿ ಪೊಲೀಸರು ಜನವರಿ 24 ರಂದು ಪ್ರಕರಣದಲ್ಲಿ 6,629 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು. ಇದರಲ್ಲಿ ಆರೋಪಿ ಆಫ್ತಾಬ್ ಅಮೀನ್ ಪೂನಾವಾಲಾ ಮೃತ ಶ್ರದ್ಧಾಳ ತಲೆ ಮತ್ತು ಮುಂಡವನ್ನು ಬ್ಲೋ ಟಾರ್ಚ್ ಬಳಸಿ ಸುಟ್ಟು ವಿರೂಪಗೊಳಿಸಿದ್ದು ಮಾತ್ರವಲ್ಲದೇ, ಮಾರ್ಬಲ್ ಗ್ರೈಂಡರ್ ಬಳಸಿ ಆಕೆಯ ದೇಹದ ಮೂಳೆಗಳನ್ನು ಪುಡಿಪುಡಿ ಮಾಡಿದ್ದಾನೆ ಎಂಬ ಆಘಾತಕಾರಿ ಅಂಶಗಳನ್ನೂ ದಾಖಲಿಸಿದ್ದರು.

No Comments

Leave A Comment