ಪೂರ್ವ ಭಾರತದಲ್ಲಿ ಮೇ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ: ಐಎಂಡಿ
ನವದೆಹಲಿ: ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮೊದಲ ಶಾಖ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ. ದೇಶದ ದಕ್ಷಿಣ ಪ್ರದೇಶದಲ್ಲಿ 46-55 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಆದಾಗ್ಯೂ, ಈ ಶಾಖ ಸೂಚ್ಯಂಕವು ಅಮೆರಿಕ ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲದ ಆಡಳಿತ ಸೂತ್ರವನ್ನು ಆಧರಿಸಿದೆ. ಭಾರತದ ಮೇಲಿನ ತಾಪಮಾನವನ್ನು ಮೌಲ್ಯೀಕರಿಸಿಲ್ಲ.
ಶಾಖ ಸೂಚ್ಯಂಕವು ಸಾಪೇಕ್ಷ ಆರ್ದ್ರತೆ ಮತ್ತು ಗಾಳಿಯ ಉಷ್ಣತೆಯೊಂದಿಗೆ ಸಂಯೋಜಿಸಿದಾಗ ಮಾನವ ದೇಹ ಅನುಭವಿಸುವ ತಾಪಮಾನವನ್ನು ಅಳೆಯುವ ಸೂಚ್ಯಂಕವಾಗಿದೆ. “ಈ ಸೂಚ್ಯಂಕವು ಅಮೆರಿಕ ಹವಾಮಾನ ಸಂಸ್ಥೆಯ ಸಾಗರ ಮತ್ತು ವಾಯುಮಂಡಲದ ಆಡಳಿತ ಸೂತ್ರವನ್ನು ಆಧರಿಸಿದೆ. ಇದು ಭಾರತದ ಮೇಲಿನ ತಾಪಮಾನವನ್ನು ಮೌಲ್ಯೀಕರಿಸಿಲ್ಲ” ಎಂದು ಐಎಂಡಿ ಡೈರೆಕ್ಟರ್ ಜನರಲ್ ಮೃತ್ಯುಂಜಯ್ ಮೊಹಾಪಾತ್ರ ಅವರು ಹೇಳಿದ್ದಾರೆ.