Log In
BREAKING NEWS >
ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪರಮೇಶ್ವರ್ ಅನಂತ್ ಹೆಗ್ಡೆ ನೇಮಕ...

ಚತ್ತಿಸ್ ಗಢದ ದಾಂತೇವಾಡದಲ್ಲಿ ನಕ್ಸಲ್ ಅಟ್ಟಹಾಸ: 10 ಪೊಲೀಸ್ ಸಿಬ್ಬಂದಿ, ಚಾಲಕನ ಹತ್ಯೆ

ನವದೆಹಲಿ: ಚತ್ತೀಸ್ ಗಢದಲ್ಲಿ ನಕ್ಸಲರು ನಡೆಸಿದ ಬಾಂಬ್ ಸ್ಫೋಟದಲ್ಲಿ 10 ಮಂದಿ ಪೊಲೀಸ್ ಸಿಬ್ಬಂದಿಗಳು, ಓರ್ವ ಚಾಲಕ ಮೃತಪಟ್ಟಿರುವ ಘಟನೆ ಏ.26 ರಂದು ವರದಿಯಾಗಿದೆ.

ಅರನ್ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದ್ದು,   ಪೊಲೀಸ್ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್ ಜಿ) ಗಳ ತಂಡ ನಕ್ಸಲ್ ವಿರೋಧಿ ಕಾರ್ಯಾಚರಣೆ ಮುಕ್ತಾಯಗೊಳಿಸಿ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

No Comments

Leave A Comment