ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಸುಳ್ಯ: ಕೆದಂಬಾಡಿ ರಾಮಯ್ಯ ಗೌಡ ವಂಶಸ್ಥೆ ಪಿಯು ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ
ಸುಳ್ಯ:ಏ, 21. 2022–23ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಲಾ ವಿಭಾಗದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಅವರ ವಂಶಸ್ಥರಾದ ಮಂಜುಶ್ರೀ ಕೆದಂಬಾಡಿ ಅವರು ಪಿಯು ಪರೀಕ್ಷೆಯಲ್ಲಿ 591 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ಕೆದಂಬಾಡಿ ರಾಮಯ್ಯಗೌಡರ ಐದನೇ ತಲೆಮಾರಿನ ಮಂಜುಶ್ರೀ ಆಗಿದ್ದು, ರಾಮಯ್ಯಗೌಡರು ಬ್ರಿಟಿಷರ ವಿರುದ್ಧ ನಾನಾ ತಂತ್ರಗಾರಿಕೆಯಿಂದ ಹೋರಾಡಿದ್ದರು.
ಮಂಜುಶ್ರೀ ಸುಳ್ಯದ ಕೆವಿಜಿ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದಾರೆ. ದಾಯ್ಜಿವಲ್ಡ್ ಜತೆ ಮಾತನಾಡಿದ ಮಂಜುಶ್ರೀ ತಂದೆ ತೀರ್ಥರಾಮ್, ” ಮಗಳು ಮಂಜುಶ್ರಿಗೆ ಐಎಎಸ್ ಅಧಿಕಾರಿಯಾಗುವ ಕನಸು ಇದೆ. ಐಎಎಸ್ ಇಲ್ಲದಿದ್ದರೆ, ಕಾನೂನು ವ್ಯಾಸಂಗ ಮಾಡಲು ಬಯಸಿದ್ದಾಳೆ ಎಂದು ಹೇಳಿದ್ದಾರೆ.
ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲು ನಡೆದ ಅಮರ ಸುಳ್ಯ ದಂಗೆಯ ರೂವಾರಿ ಕೆದಂಬಾಡಿ ರಾಮಯ್ಯ ಆಘಿದ್ದರು. ಅವರೊಬ್ಬ ಹೋರಾಟಗಾರ ಮತ್ತು ಕ್ರಾಂತಿಕಾರಿಯಾಗಿದ್ದು ಬ್ರಿಟಿಷರ ವಿರುದ್ದ ಸುಳ್ಯದಿಂದ ರೈತರನ್ನು ಒಗ್ಗೂಡಿಸಿ1837 ರಲ್ಲಿ ಅಮರ ಸುಳ್ಯ ದಂಗೆಯನ್ನು ಮುನ್ನಡೆಸಿದರು.