Log In
BREAKING NEWS >
ಉಡುಪಿಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ 4ನೇ ಪರ್ಯಾಯಕ್ಕೆ ಗುರುವಾರದ೦ದು ಅದ್ದೂರಿಯ ಅಕ್ಕಿಮುಹೂರ್ತ ಕಾರ್ಯಕ್ರಮ ಸ೦ಪನ್ನ.....

ಟೇಕ್ವಾಂಡೋ ಆಟಗಾರ್ತಿ ಕಾಶಿಶ್ ಮಲಿಕ್ ಗೆ 2 ವರ್ಷ ನಿಷೇಧ

ನವದೆಹಲಿ:ಏ ,19. 2018 ರಲ್ಲಿ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 57 ಕೆಜಿ ವಿಭಾಗದಲ್ಲಿ ಐದನೇ ಸ್ಥಾನ ಪಡೆದಿದ್ದ ಭಾರತದ ಪ್ರಮುಖ ಮಹಿಳಾ ಟೇಕ್ವಾಂಡೋ ಆಟಗಾರ್ತಿ ಕಾಶಿಶ್ ಮಲಿಕ್ ಅವರನ್ನು “ನಾಡಾ” ಡೋಪಿಂಗ್ ವಿರೋಧಿ ಶಿಸ್ತು ಸಮಿತಿ (ಎಡಿಡಿಪಿ) ಎರಡು ವರ್ಷಗಳ ಕಾಲ ನಿಷೇಧಿಸಿದೆ.

ಏಷ್ಯನ್ ಕ್ರೀಡಾಕೂಟದ ತಯಾರಿಗಾಗಿ ಲಕ್ನೋದದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಶಿಬಿರದಲ್ಲಿ ಕಾಶಿಶ್ ಭಾಗವಹಿಸಿದ್ದು, ಅಲ್ಲಿ ಅವರ ಮಾದರಿಯನ್ನು ನಾಡಾ ತೆಗೆದುಕೊಂಡಿತ್ತು. ಈ ಮಾದರಿಯಲ್ಲಿ ಫ್ಯೂರೋಸೆಮೈಡ್ ಎಂಬ ಉದ್ದೀಪನ ಅಂಶ ಕಂಡುಬಂದಿದೆ. ಇದರ ನಂತರ ಅವರನ್ನು ೨ ವರ್ಷಗಳ ಕಾಲ ನಿಷೇಧಿಸಿದೆ.

ಕಾಶಿಶ್ ಪ್ರಸ್ತುತ ಪೀಸ್ ಟೇಕ್ವಾಂಡೋ ಅಕಾಡೆಮಿಯಲ್ಲಿ ಮಾಜಿ ವಿಶ್ವ ಚಾಂಪಿಯನ್ ಸಯದ್ ಹಸನ್ ರೆಜಾಯ್ ಅವರ ಅಡಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

2018 ರಲ್ಲಿ ಕೌಲಾಲಂಪುರದಲ್ಲಿ ನಡೆದ ಮಲೇಷ್ಯಾ ಓಪನ್ ಮತ್ತು ಸೌತ್ ಏಷ್ಯನ್ ಗೇಮ್ಸ್ (SAG) ನಲ್ಲಿ ಚಿನ್ನ ಸೇರಿದಂತೆ ಭಾರತಕ್ಕೆ ಹಲವಾರು ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ.

No Comments

Leave A Comment