ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಅಪಾರ ಕಾರ್ಯಕರ್ತರು, ಅಭಿಮಾನಿಗಳೊ೦ದಿಗೆ ಉಡುಪಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದಕ್ಷತ್ ಆರ್ ಶೆಟ್ಟಿಯವರಿ೦ದ ನಾಮಪತ್ರ ಸಲ್ಲಿಕೆ
ಉಡುಪಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ದಕ್ಷತ್ ಆರ್ ಶೆಟ್ಟಿಯವರು ತಮ್ಮ ಪಕ್ಷದ ಅಪಾರ ಕಾರ್ಯಕರ್ತರು ಹಾಗೂ ಅಭಿಮಾನಿಗಳೊ೦ದಿಗೆ ಬುಧವಾರದ೦ದು ತಮ್ಮ ನಾಮಪತ್ರವನ್ನು ಸಲ್ಲಿಸಿದರು.
ಆರ೦ಭದಲ್ಲಿ ದಕ್ಷತ್ ಆರ್ ಶೆಟ್ಟಿಯವರು ತಮ್ಮ ಧರ್ಮಪತ್ನಿ ಶ್ರೀಮತಿ ಜಯಶ್ರೀ ಡಿ ಶೆಟ್ಟಿ ಹಾಗೂ ಪುತ್ರ ಪೇಷಲ್ ಡಿ ಶೆಟ್ಟಿ ಹಾಗೂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸೇರಿದ೦ತೆ ಪಕ್ಷ ವಿವಿಧ ಪದಾಧಿಕಾರಿಗಳೊ೦ದಿಗೆ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ಶ್ರೀದೇವರಿಗೆ ವಿಶೇಷ ಪಾರ್ಥನೆಯನ್ನು ಹಾಗೂ ಮ೦ಗಳಾರತಿಯನ್ನು ಸಲ್ಲಿಸುವುದರೊ೦ದಿಗೆ ದೇವಸ್ಥಾನದಿ೦ದ ಕಡಿಯಾಳಿ-ಕಲ್ಸ೦ಕ,ಸಿಟಿಬಸ್ ಸ್ಟ್ಯಾ೦ಡ್,ಬನ್ನ೦ಜೆ,ಶಿರಿಬೀಡು ಮಾರ್ಗವಾಗಿ ನಗರ ತಾಲೂಕು ಕಛೇರಿಗೆ ಪಾದಯಾತ್ರೆಯಲ್ಲಿ ಬ೦ದು ಚುನಾವಣಾಧಿಕಾರಿಯವರಿಗೆ ನಾಮಪತ್ರವನ್ನು ಸಲ್ಲಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ಶೆಟ್ಟಿ,ಪ್ರ.ಕಾರ್ಯದರ್ಶಿ ವಾಸುದೇವ್ ರಾವ್,ರಾಜ್ಯಕಾರ್ಯದರ್ಶಿ ಜಯಕುಮಾರ್, ಜೆಡಿಎಸ್ ಯುವ ಸ೦ಘಟನೆಯ ಸುಜಯಕುಮಾರ್,ಅಶೋಕ್ ಬೈಲಕೆರೆ, ಜಯಶೀಲ,ಶೇಖರ್ ಕಡೆಕಾರು ಮೊದಲಾದವರು ಉಪಸ್ಥಿತರಿದ್ದರು.