Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಏ.19ಕ್ಕೆ ಜೆಡಿಎಸ್ ಪಕ್ಷದಿ೦ದ ಉಡುಪಿ ಅಭ್ಯರ್ಥಿಯಾಗಿ ದಕ್ಷತ್ ಆರ್ ಶೆಟ್ಟಿ ನಾಮಪತ್ರ ಸಲ್ಲಿಕೆ

ದಕ್ಷತ್ ಆರ್ ಶೆಟ್ಟಿ ಯವರು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಏ.19ರ ಬುಧವಾರದ೦ದು ಮಧ್ಯಾಹ್ನ 1ಗ೦ಟೆಗೆ ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ.

ಇವರು ಮಣಿಪಾಲ ಎಂ ಜೆ ಸಿ ಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ, ಯಲ್ಲಾಪುರ ವೈ ಟಿ ಎಸ್ ಎಸ್ ನಲ್ಲಿ ಪದವಿ ಶಿಕ್ಷಣ ಪಡೆದಿರುತ್ತಾರೆ.
ಯತ್ತಾಡಿ ಕೂಡಾಲು ಮನೆ ರಘುರಾಮ್ ಎಸ್ ಶೆಟ್ಟಿ ಮತ್ತು ಇಂದ್ರಾಳಿ ಕಲ್ಲಡ್ಕ ಮನೆ ವಿಮಲಾ ಆರ್ ಶೆಟ್ಟಿಯ ಮೂರು ಮಕ್ಕಳಲ್ಲಿ ದ್ವಿತೀಯ ಪುತ್ರ ಒಂದು ಸಹೋದರಿ ಹಾಗೂ ಒಂದು ಸಹೋದರ ,ತಂದೆ ರಘುರಾಮ ಶೆಟ್ಟಿ ವೃತ್ತಿಯಲ್ಲಿ ವಕೀಲರು ಹಾಗೂ ಸಹಕಾರ ಸಂಘಗಳ ಸಹಕಾರ ಅಭಿವೃದ್ಧಿ ಅಧಿಕಾರಿ, ತಾಯಿ , ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್, ಅಕ್ಕ ವಿನಯ (ವೈದ್ಯೆ) ತಮ್ಮ ಉಜ್ವಲ ಶೆಟ್ಟಿ ಇಂಜಿನಿಯರ್ , ಇವರು ವಿವಾಹಿತರಾ ಗಿದ್ದು ಪತ್ನಿ ಹಾಗೂ ಪುತ್ರ ರೊಂದಿಗೆ ಕಡಿಯಾಳಿ ಯಲ್ಲಿ ನೆಲೆಸಿದ್ದಾರೆ ಸ್ವಂತ ಉದ್ಯಮ ಹೊಂದಿದ್ದು FCI ಕಾಂಟ್ರಾಕ್ಟರ್ railway ಕ್ಲಿಯರೆನ್ಸ್ ಉದ್ಯಮಿ ಆಗಿರುತ್ತಾರೆ.

1 985 ರಲ್ಲಿ ರಾಜಕೀಯ ಪ್ರವೇಶ ದಿವಂಗತ ಸತೀಶ್ ಹೆಗ್ಡೆ ಯವರೊಂದಿಗೆ ಜನತಾ ಪಕ್ಷ ಈಗಿನ ಜೆಡಿಎಸ್ ನೊಂದಿಗೆ ನಂಟು ಅಲ್ಲಿಂದ ಸುಮಾರು 38 ವರ್ಷದಲ್ಲಿ ವಿವಿಧ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ .ಸಂಘಟನಾ ಕಾರ್ಯದರ್ಶಿ, ಉಡುಪಿ ನಗರ ಅಧ್ಯಕ್ಷ, ಉಡುಪಿ ಕ್ಷೇತ್ರಾ ಧ್ಯಕ್ಷ 2015 ರಲ್ಲಿ ಉಡುಪಿ ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ ಪ್ರಸ್ತುತ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

No Comments

Leave A Comment