Log In
BREAKING NEWS >
ಉಡುಪಿಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ 4ನೇ ಪರ್ಯಾಯಕ್ಕೆ ಗುರುವಾರದ೦ದು ಅದ್ದೂರಿಯ ಅಕ್ಕಿಮುಹೂರ್ತ ಕಾರ್ಯಕ್ರಮ ಸ೦ಪನ್ನ.....

ಆನೇಕಲ್: ಆನೆ ಮೇಲೆ ಬಂದು ನಾಮಿನೇಷನ್.!

ಆನೇಕಲ್:ಏ, 17. ನಾಮಿನೇಷನ್ ಭರಾಟೆಯೂ ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಣವನ್ನು ಮತ್ತಷ್ಟು ರಂಗೇರಿಸಿದೆ. ಅಭ್ಯರ್ಥಿಗಳೆಲ್ಲಾ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ದೊಡ್ಡ ಮಟ್ಟದಲ್ಲೇ ರ್‍ಯಾಲಿ ನಡೆಸಿ, ನಾಮಪತ್ರ ಸಲ್ಲಿಸುತ್ತಿದ್ದಾರೆ.

ಆನೇಕಲ್ ಕ್ಷೇತ್ರದ ಬಿಎಸ್​ಪಿ ಅಭ್ಯರ್ಥಿ ಡಾ.ವೈ.ಚಿನ್ನಪ್ಪ ಚಿಕ್ಕಹಾಗಡೆ ಅವರು ವಿಭಿನ್ನವಾಗಿ ಬಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಹೆಚ್ಚಿನ ಅಭ್ಯರ್ಥಿಗಳು ತೆರೆದ ವಾಹನ, ನಡಿಗೆಯ ಮೂಲಕ ಬಂದು ನಾಮಪತ್ರ ಸಲ್ಲಿಸುತ್ತಿದ್ದರೆ, ಡಾ.ವೈ.ಚಿನ್ನಪ್ಪ ಅವರು ಆನೆ ಮೇಲೆ ಕುಳಿತು ಬಂದು ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದಾರೆ.

ಆದರೆ ಆದರೆ ಅವರು ತೆರಳಿದ್ದು ಕೃತಕ ಆನೆಯ ಮೇಲೆ. ಹೌದು, ಪಟ್ಟಣದ ಎಎಸ್‌ಬಿ ಮೈದಾನದಿಂದ ತಾಲೂಕು ಕಚೇರಿಯವರೆಗೆ ಕೃತಕ ಆನೆಯ ಮೇಲೆ ಚಿನ್ನಪ್ಪ ಬೃಹತ್‌ ಮೆರವಣಿಗೆ ನಡೆಸಿದ್ದು, ಇದೇ ವೇಳೆ ಅನೇಕ ಜಾನಪದ ತಂಡಗಳೂ ಭಾಗಿಯಾಗಿದ್ದವು. ನಂತರ ತಾಲೂಕು ಕಚೇರಿಗೆ ಆಗಮಿಸಿ, ನಾಮಪತ್ರ ಸಲ್ಲಿಸಿದ್ದಾರೆ.

No Comments

Leave A Comment