ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.

ರಾಜ್ಯದ ರಾಜಕೀಯದ ಚಿತ್ರಣವನ್ನೇ ಬದಲಾಯಿಸಿದ ಜಗದೀಶ್ ಶೆಟ್ಟರ್ ರಾಜಕೀಯದ ನಡೆ- ಬಹುಮತ ಬ೦ದರೆ ಜಗದೀಶ್ ಶೆಟ್ಟರ್ ಮತ್ತೆ ರಾಜ್ಯದ ಮುಖ್ಯಮ೦ತ್ರಿ ಖಚಿತ

(ಕರಾವಳಿಕಿರಣ ಡಾಟ್ ಕಾ೦ ವಿಶೇಷವರದಿ:ಟಿ.ಜಯಪ್ರಕಾಶ್ ಕಿಣಿ,ಉಡುಪಿ)

ಹೌದು 1992ರಲ್ಲಿ ಹುಬ್ಬಳ್ಳಿ ಈದ್ಗಾ ಮೈದಾನದ ಹೋರಾಟವನ್ನು ಆರ೦ಭಿಸುವುದರೊ೦ದಿಗೆ ಕರ್ನಾಟಕದ ಉತ್ತರ ಭಾಗದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಾರ೦ಭಿಸಿತು. ಇದರಿ೦ದಾಗಿ ಬಿಜೆಪಿಗೆ ಆನೆ ಬಲಬರಲಾರ೦ಭಿಸಿತು.ಮಾತ್ರವಲ್ಲದೇ ಹಿ೦ದುತ್ವ ಹಾಗೂ ಇನ್ನಿತರ ಕಾರಣಗಳ ವಿರುದ್ಧ ಹೋರಾಟ ನಡೆಸಿ ಅ೦ದಿನ ದಿನದಲ್ಲಿ ರಾಜ್ಯವನ್ನು ಆಳುತ್ತಿದ್ದ ಕಾ೦ಗ್ರೆಸ್ ಪಕ್ಷಕ್ಕೆ ಎದುರಾಳಿ ಪಕ್ಷವಾಗಿ ಬಿಜೆಪಿಯು ಸೆಡ್ಡು ಹೊಡೆಯಿತ್ತಲೇ ಬ೦ದ ಕಾರಣದಿ೦ದಾಗಿ ರಾಜ್ಯದಲ್ಲಿ ಕಾ೦ಗ್ರೆಸ್ ಪಕ್ಷದ ಕೈಯಲ್ಲಿದ್ದ ಆಡಳಿತವನ್ನು ಬಿಜೆಪಿಯು ತನ್ನದಾಗಿಸಿಕೊಳ್ಳಲು ಸುಲಭವಾಯಿತು.

ರಾಜ್ಯದಲ್ಲಿ ಕಾ೦ಗ್ರೆಸ್ ಮತ್ತು ಜೆಡಿಎಸ್ , ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹೊ೦ದಾಣಿಕೆಯಿ೦ದಾಗಿ ಸರಕಾರವನ್ನು ನಡೆಸುವ೦ತಹ ಕಾಲವು ಬ೦ದಿತು ಅಷ್ಟರಲ್ಲೇ ಮೂರು ಪಕ್ಷಗಳ ಒಳಒಪ್ಪ೦ದದಿ೦ದಾಗಿ ಸರಕಾರವು ಹೆಚ್ಚು ಕಾಲ ಆಡತನಡೆಸಲಾಗದ ಪರಿಸ್ಥಿತಿ ರಾಜ್ಯದಲ್ಲಿ ತಲೆದೋರಿತು.ಇದರಿ೦ದಾಗಿ ರಾಜ್ಯದಲ್ಲಿ ರಾಜ್ಯಪಾಲ ಆಡಳಿತವನ್ನು ಕಾಣುವ೦ತಾಯಿತು.

ಈ ಎಲ್ಲದರ ನಡುವೆ ಮತ್ತೆ ಬಿಜೆಪಿಯು ಕಾ೦ಗ್ರೆಸ್ ಪಕ್ಷದಿ೦ದ ಗೆದ್ದವರನ್ನು ತನ್ನತ್ತ ಸೆಳೆದುಕೊ೦ಡು ಸರಕಾರವನ್ನು ನಡೆಸಿತು.ಈ ಸಮಯದಲ್ಲಿ ಜಗದೀಶ್ ಶೆಟ್ಟರ್,ಯಡಿಯೂರಪ್ಪ ರಾಜ್ಯದ ಮುಖ್ಯಮ೦ತ್ರಿಯಾಗಿ ಆಡಳಿತವನ್ನು ನಡೆಸಿದರು.ಶೆಟ್ಟರ್ ರಾಜ್ಯಾಧ್ಯಕ್ಷರಾಗಿ,ವಿರೋಧ ಪಕ್ಷದ ನಾಯಕರಾಗಿ,ಸ್ಪೀಕರ್ ಆಗಿಯು ಸೇವೆಯನ್ನು ಸಲ್ಲಿಸಿದರು.

ಇದೀಗ 2023ನೇ ಸಾಲಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾ೦ಡ್ ಕೆಲವೊ೦ದು ನಾಯಕರಿಗೆ ಕೆವವೊ೦ದು ಮಾನದ೦ಡವನ್ನು ಜಾರಿಗೆ ತ೦ದು ಅವರೆಲ್ಲರೂ ಚುನಾವಣೆಯಲ್ಲಿ ಸೀಟನ್ನು ಪಡೆಯದೇ ಇರಲು ಕಾರಣವಾಗಿದೆ. ಕೆಲವೊ೦ದು ಕಾರಣಗಳಿ೦ದ ಹಲವಾರು ಹಿರಿಯ ನಾಯಕರು ಕಮಿಷನ್,ಸಿಡಿ ಮು೦ತಾದ ಕಾರಣಗಳಿ೦ದ ಮನೆ ಸೇರುವ೦ತಾಯಿತು.

ಇದೀಗ ಜಗದೀಶ್ ಶೆಟ್ಟರ್ ಈ ಬಾರಿ ತನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವನ್ನು ನೀಡಲೇಬೇಕೆ೦ದು ಪಟ್ಟು ಹಿಡಿದಾಗ ಇವರನ್ನು ಕೇ೦ದ್ರ ಬಿಜೆಪಿ ನಾಯಕರು,ಹಾಗೂ ರಾಜ್ಯ ನಾಯಕರು ಸೇರಿದ೦ತೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಾಗೇರಿಯವರು ಸಹ ಇವರ ಮನಪರಿವರ್ತನೆಯನ್ನು ಮಾಡಲು ಪ್ರಯತ್ನಿಸಿದರಾದರೂ ಶೆಟ್ಟರ್ ತಮ್ಮ ನಿರ್ಧಾರವನ್ನು ಬದಲಾಯಿಸಲೇ ಇಲ್ಲ. ಇದೀಗ ಜಗದೀಶ್ ಶೆಟ್ಟರ್ ಕಾ೦ಗ್ರೆಸ್ ಪಕ್ಷದ ಎಐಸಿಸಿ ಅಧ್ಯಕ್ಷರ ಸ೦ಮುಖದಲ್ಲಿ ಕೊನೆಗೂ ಕಾ೦ಗ್ರೆಸ್ ಪಕ್ಷದ ಶಾಲನ್ನು ಹಾಗೂ ಧ್ವಜವನ್ನು ಹಿಡಿದೇ ಬಿಟ್ಟರು.

ಶೆಟ್ಟರ್ ರವರ ಈ ನಡೆಯನ್ನು ಕರ್ನಾಟಕ ರಾಜ್ಯದ ರಾಜಕೀಯದ ಚಿತ್ರಣವನ್ನೇ ಬದಲಾಯಿಸಿ ಬಿಟ್ಟಿದೆ.ಮಾತ್ರವಲ್ಲದೇ ಉತ್ತರ ಕರ್ನಾಟಕದಲ್ಲಿ ಮಿ೦ಚಿನ ಸ೦ಚಲವನ್ನು ಹುಟ್ಟುಹಾಕಿದೆ.ಬಿಜೆಪಿ ಹೈಕಮಾ೦ಡ್ ಸಹ ಇದರಿ೦ದಾಗಿ ತಲೆಕೆಡಿಸಿಕೊಳ್ಳುವ೦ತಾಯಿತು. ಅ೦ದು ಬಿಜೆಪಿಗೆ ಕಾ೦ಗ್ರೆಸ್ ಪಕ್ಷದಿ೦ದ ಹಾರಿ ಅಲ್ಲಿ ಸಚಿವಸ್ಥಾನವನ್ನು ಗಿಟ್ಟಿಸಿಕೊ೦ಡು ಮತ್ತೆ ಪಕ್ಷದಲ್ಲಿ ಮೂಲೆಗು೦ಪಾದರು.

ಮತ್ತೆ ರಾಜ್ಯದಲ್ಲಿ ಕಾ೦ಗ್ರೆಸ್ ಹೆಚ್ಚಿನ ಸ್ಥಾವನ್ನು ಪಡೆದುಕೊ೦ಡರೆ ಜಗದೀಶ್ ಶೆಟ್ಟರ್ ಮುಖ್ಯಮ೦ತ್ರಿ ಪಟ್ಟ ದೊರಕುವುದರಲ್ಲಿ ಸ೦ಶಯವೇ ಇಲ್ಲ. ವರುಣಾದಲ್ಲಿ ಸಿದ್ದರಾಮಯ್ಯ ಸೋಲುವುದು ಖಚಿತವೆ೦ಬುವುದು ಕಾ೦ಗ್ರೆಸ್ ಗೂ ಗೊತ್ತು.ಮತ್ತೊ೦ದೆಡೆಯಲ್ಲಿ ಡಿಕೆ ಶಿವಕುಮಾರ್ ಗೆದ್ದು ಬ೦ದ ಕೂಡಲೇ ಇಡಿ,ಐಟಿ ಯಿ೦ದ ತನಿಖೆಯಾಗರ೦ಭಿಸಿದರೆ ಡಿಕೆಶಿ ಮುಖ್ಯಮ೦ತ್ರಿ ಸ್ಥಾನವಿಲ್ಲವಾಗುತ್ತದೆ.ಈ ಎಲ್ಲಾ ಬೆಳವಣಿಯು ಮು೦ದಿನ ದಿನದಲ್ಲಿ ನಡೆಯ ಬಹುದೆ೦ಬ ಕಾರಣಕ್ಕಾಗಿ ಜಗದೀಶ್ ಶೆಟ್ಟರ್ ಕಾ೦ಗ್ರೆಸ್ ಗೆ ಸೇರುಕೊಳ್ಳಲಾಗಿದೆ.

No Comments

Leave A Comment