Log In
BREAKING NEWS >
ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪರಮೇಶ್ವರ್ ಅನಂತ್ ಹೆಗ್ಡೆ ನೇಮಕ...

ದಾವಣಗೆರೆ ದಕ್ಷಿಣ ಗೆಲ್ಲಲು ಬಿಜೆಪಿ ತುಡಿತ: ವಯಸ್ಸು 92 ಆದರೂ ಕ್ಷೇತ್ರದ ಮೇಲೆ ತಗ್ಗಿಲ್ಲ ‘ಮುತ್ಸದ್ದಿ ಶಾಮನೂರು’ ಹಿಡಿತ!

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ. ರಾಜ್ಯದ ಅತ್ಯಂತ ಹಿರಿಯ ರಾಜಕಾರಣಿ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ 92 ವರ್ಷ ವಯಸ್ಸಾಗಿದ್ದು, ಕಳೆದ ಆರು ಚುನಾವಣೆಗಳಲ್ಲಿ ಸತತವಾಗಿ ಈ ಕ್ಷೇತ್ರದಲ್ಲಿ ಪ್ರಾಬಲ್ಯ ಸ್ಥಾಪಿಸಿದ್ದಾರೆ.

ಶಿವಶಂಕರಪ್ಪ ವಿರುದ್ಧ ಸತತವಾಗಿ ಯಶವಂತರಾವ್ ಜಾದವ್ ಅವರನ್ನು ಕಣಕ್ಕಿಳಿಸುತ್ತಾ ಬಂದಿದ್ದ ಬಿಜೆಪಿ ಈ ಬಾರಿ ತನ್ನ ಅಭ್ಯರ್ಥಿಯನ್ನು ಬದಲಿಸಿ ಮಾಜಿ ಮೇಯರ್ ಬಿ.ಜೆ.ಅಜಯಕುಮಾರ್ ಅವರಿಗೆ ಟಿಕೆಟ್ ನೀಡಿ ಕಾಂಗ್ರೆಸ್ ವಿರುದ್ಧ ತೀವ್ರ ಪೈಪೋಟಿ ಒಡ್ಡಿದೆ.

ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಅಜಯ್‌ಕುಮಾರ್‌ ಬೇಡಿಕೆ ಇಟ್ಟಿದ್ದರೂ, ದಕ್ಷಿಣ ಕ್ಷೇತ್ರದಿಂದ ಅನುಭವಿ ಶಿವಶಂಕರಪ್ಪ ವಿರುದ್ಧ ಸ್ಪರ್ಧಿಸುವಂತೆ ಮಾಡಿದ್ದಾರೆ. ಮೇಯರ್ ಆಗಿ ಜನರೊಂದಿಗೆ ಬೆರೆತು ಕೆಲಸ ಮಾಡಿದ್ದು, ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನವನ್ನು ಮಂಜೂರು ಮಾಡಿದ್ದಾರೆ.

ಆದರೆ ಶಿವಶಂಕರಪ್ಪ ಅವರ ಹೆಸರು ಮತ್ತು ಅವರ ಕುಟುಂಬ ಟ್ರಸ್ಟ್, ಬಾಪೂಜಿ ಸಮೂಹ ಸಂಸ್ಥೆಗಳ ಮೂಲಕ ಪ್ರಾರಂಭಿಸಿದ ಕಲ್ಯಾಣ ಕಾರ್ಯಕ್ರಮಗಳು ಜನರ ಮನಸ್ಸಿನಲ್ಲಿ ಉಳಿದಿವೆ. ಹೀಗಾಗಿ ಸುಲಭವಾಗಿ ತಲುಪುವ ವ್ಯಕ್ತಿಯಾಗಿರುವುದು ಶಿವಶಂಕರಪ್ಪ ಅವರಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಕಳೆದ ಚುನಾವಣೆಯಲ್ಲಿ ಅವರು 15,884 ಮತಗಳ ಅಂತರದಿಂದ ಗೆದ್ದಿದ್ದರು.

2,04,442 ಮತಗಳನ್ನು ಹೊಂದಿರುವ ಕ್ಷೇತ್ರವು 1994 ರಿಂದ ಕಾಂಗ್ರೆಸ್‌ನ ಸಾಂಪ್ರದಾಯಿಕ ಭದ್ರಕೋಟೆಯಾಗಿದೆ. ಅಲ್ಪಸಂಖ್ಯಾತರ ಜೊತೆಗೆ ಲಿಂಗಾಯತ, ಮರಾಠ, ಬಂಜಾರ, ಆದಿ ಕರ್ನಾಟಕ ಮತ್ತು ಕುರುಬ ಸಮುದಾಯಗಳು ಕ್ಷೇತ್ರದಲ್ಲಿ ಉತ್ತಮ ಅಸ್ತಿತ್ವವನ್ನು ಹೊಂದಿವೆ. ರಾಜ್ಯದೆಲ್ಲೆಡೆ ಇರುವ ಬಹುತೇಕ ಕ್ಷೇತ್ರಗಳಂತೆಯೇ ಇಲ್ಲಿಯೂ ಕೂಡ ಜಾತಿ ಸಮೀಕರಣವೇ ಗೆಲುವನ್ನು ನಿರ್ಧರಿಸಲಿದೆ.

ಅಲ್ಪಸಂಖ್ಯಾತರು ತಮ್ಮ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದರೂ, ಶಿವಶಂಕರಪ್ಪ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆಗಿನ ತಮ್ಮ ಬಾಂಧವ್ಯ ಬಳಸಿಕೊಂಡು ಟಿಕೆಟ್ ಪಡೆದಿದ್ದಾರೆ. ಹೀಗಾಗನ ಸಮುದಾಯದ ನಿರಾಶೆ ಅವರ ಕೆಲವು ಮತಗಳು ಚದುರಿಹೋಗಲು ಕಾರಣವಾಗಬಹುದು. ಅಲ್ಪಸಂಖ್ಯಾತರ ಕೇಂದ್ರಿತ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್ ಡಿ ಪಿಐ) ಕೂಡ ತನ್ನ ಅಭ್ಯರ್ಥಿ ಕಣಕ್ಕಿಳಿಸಿದ್ದು ಪಕ್ಷವು ನೇರವಾಗಿ ಕಾಂಗ್ರೆಸ್  ಮತವನ್ನು ತಿಂದು ಹಾಕಲಿದೆ.

ಅಜಯ್‌ಕುಮಾರ್ ಅವರು ಬಿಜೆಪಿ ಪ್ರತಿನಿಧಿಸುತ್ತಿದ್ದರೂ, ಅವರು ಹಿಂದುತ್ವವಾದಿ ಸಿದ್ಧಾಂತವಾದಿಯಲ್ಲ ಆದರೆ ಅಲ್ಪಸಂಖ್ಯಾತ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದು ಕೂಡ ಚುನಾವಣೆಯಲ್ಲಿ ಅವರಿಗೆ ಸಹಾಯ ಮಾಡಬಹುದು. ಅವರ ಹೆಸರು ಅಂತಿಮವಾದಾಗಿನಿಂದಲೂ ಅವರು ಕ್ಷೇತ್ರದಾದ್ಯಂತ ವ್ಯಾಪಕವಾಗಿ  ಪ್ರಚಾರ ನಡೆಸುತ್ತಿದ್ದಾರೆ, ಆದರೆ  ಎಷ್ಟೇ ಪ್ರಯತ್ನ ಮಾಡಿದರೂ ಇಡೀ ಕ್ಷೇತ್ರದಲ್ಲಿ ಪ್ರವಾಸ ಮಾಡಿರುವ  ಶಾಮನೂರು ಶಿವಶಂಕರಪ್ಪ ಅವರ ಮೇಲುಗೈ ಸಾಧಿಸಬಹುದು ಎಂದು ಹೇಳಲಾಗುತ್ತಿದೆ.

No Comments

Leave A Comment