Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಕಥೊಲಿಕ್ ಸಭಾ ಉಡುಪಿ ಪ್ರದೇಶ್ ನೂತನ ಅಧ್ಯಕ್ಷರಾಗಿ ಸಂತೋಷ್ ಕರ್ನೆಲಿಯೋ ಆಯ್ಕೆ

ಉಡುಪಿ:ಏ 16 ಕ್ರೈಸ್ತ ಸಮುದಾಯದ ಅತೀ ಪ್ರಭಾವಿ ಸಂಘಟನೆಯಾದ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ 2023-24 ರ ಸಾಲಿನ ನೂತನ ಅಧ್ಯಕ್ಷರಾಗಿ ಸಂತೋಷ್ ಕರ್ನೆಲಿಯೋ ಸಂತೆಕಟ್ಟೆ ಕಲ್ಯಾಣಪುರ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಕಚೇರಿಯಲ್ಲಿ ಭಾನುವಾರ ಜರುಗಿದ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್ ಅವರು ಚುನಾವಣಾಧಿಕಾರಿಯಾಗಿ ಪದಾಧಿಕಾರಿಗಳ ಆಯ್ಕೆಯನ್ನು ನೆರವೇರಿಸಿದರು.

ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್(ಆಧ್ಯಾತ್ಮಿಕ ನಿರ್ದೇಶಕರು, ಮೇರಿ ಡಿ’ಸೋಜಾ ಉದ್ಯವಾರ (ನಿಕಟಪೂರ್ವ ಅಧ್ಯಕ್ಷರು), ಒಲಿವಿಯಾ ಡಿಮೆಲ್ಲೊ ಕಾರ್ಕಳ (ಕಾರ್ಯದರ್ಶಿ), ಜೆರಾಲ್ಡ್ ರೊಡ್ರಿಗಸ್ ಶಿರ್ವ (ಕೋಶಾಧಿಕಾರಿ)ಗಳಾಗಿ ಆಯ್ಕೆಯಾದರು.

ಇತರ ಪದಾಧಿಕಾರಿಗಳು: ರೊನಾಲ್ಡ್ ಡಿ’ಆಲ್ಮೇಡಾ ಉದ್ಯಾವರ (ನಿಯೋಜಿತ ಅಧ್ಯಕ್ಷರು), ಸೊಲೊಮನ್ ಆಲ್ವಾರಿಸ್ ಕಾರ್ಕಳ (ಉಪಾಧ್ಯಕ್ಷರು), ಸೆವ್ರಿನ್ ಡಿ’ಸೋಜಾ ಶಿರ್ವ(ಸಹಕಾರ್ಯದರ್ಶಿ), ಲೆಸ್ಲಿ ಕರ್ನೆಲಿಯೋ ಉಡುಪ (ಸಹ ಕೋಶಾಧಿಕಾರಿ), ಗ್ರೇವಿನ್ ಪಾಸನ್ನ ಕುಂದಾಪುರ (ಆಂತರಿಕ ಲೆಕ್ಕ ಪರಿಶೋಧಕರು). ಚುನಾವಣೆಯ ಬಳಿಕ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ ಜರುಗಿತು.

No Comments

Leave A Comment