ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಕೈಗೊ೦ಡ ನಿರ್ಧಾರದಿ೦ದ ಹಿ೦ದೆ ಸರಿಯುವ ಪ್ರಶ್ನೆಯೇ ಇಲ್ಲ-17ಕ್ಕೆ ನಾಮಪತ್ರ ಸಲ್ಲಿಕೆ – ಗೆಲುವು ನನ್ನದೇ-ಕೃಷ್ಣಮೂರ್ತಿ ಆಚಾರ್ಯ

ಕಾ೦ಗ್ರೆಸ್ ಪಕ್ಷದಲ್ಲಿ  18 ವರುಷದಿ೦ದಲೂ ಸ೦ಘಟಿತ ಕಾರ್ಯಕರ್ತನಾಗಿ, ಸದಾ ಪಕ್ಷದ ಕಾರ್ಯಕರ್ತರೊ೦ದಿಗಿದ್ದು ಜಾತಿ,ಮತವನ್ನೆದೇ ಸರ್ವರಿಗೂ ನನ್ನಿ೦ದಾದ ಸಾಹಯವನ್ನು ಮಾಡಿ ಕಷ್ಟ-ಸುಖದಲ್ಲಿ ಭಾಗಿಯಾಗಿರುವ ಆತ್ಮವಿಶ್ವಾಸ ನನಗಿದೆ.ಕಾ೦ಗ್ರೆಸ್ ಪಕ್ಷದಲ್ಲಿ ಯಾವುದೇ ಹುದ್ದೆಗಾಗಿ ಲಾಬಿಯನ್ನು ನಡೆಸದೇ ಪಕ್ಷಸ೦ಘಟನೆಯನ್ನು ಮಾಡಿಕೊ೦ಡು ಬ೦ದ ನನಗೆ ಪಕ್ಷದ ಹೈಕಮಾ೦ಡ್ ಹಣವಿದ್ದವರಿಗೆ ಸೀಟು ಬಿಟ್ಟುಕೊಟ್ಟು ತ್ಯಾಗಮಾಡಿಎನ್ನುವುದು ಹೇಳಿದರೂ ನಾನು ಕೈಕೊ೦ಡ ನಿರ್ಧಾರದಿ೦ದ ಹಿ೦ದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ.ನನ್ನ ಹೆ೦ಡತಿಯನ್ನು ನಗರಸಭಾ ಸದಸ್ಯಸ್ಥಾನದಿ೦ದಲೂ ಕಾರ್ಯಕರ್ತರ ಹಾಗೂ ಮತದಾರರ ಆಶೀರ್ವಾದ ಗೆಲ್ಲಿಸಿಕೊಟ್ಟಿದ್ದೇನೆ.

ಮಾತ್ರವಲ್ಲದೇ ರಾಜಕೀಯದ ಹಿ೦ದೆ ಹೋಗಿ ನನ್ನ ಸ್ವ೦ತ ಮಗನನ್ನು ನಾನು ಕಳೆದುಕೊ೦ಡ ನೋವು ನನಗಿದೆ.ಅದರೆ ನನ್ನನ್ನು ಉಡುಪಿ ವಿಧಾನ ಸಭಾ ಕ್ಷೇತ್ರದ ಮತದಾರರು ಕೈಬಿಡಲಾರರು ಎ೦ಬ ಭರವಸೆ ನನಗಿದೆ ಎ೦ದು ಕೃಷ್ಣಮೂರ್ತಿ ಆಚಾರ್ಯರವರು ತಿಳಿಸಿದ್ದಾರೆ.

ನನಗೆ ಸೀಟು ನೀಡದ೦ತೆ ನೋಡಿಕೊಳ್ಳಲು ಬಿ ಎಲ್ ಸ೦ತೋಷ್ ರವರು ನನ್ನ ಪಕ್ಷದಿ೦ದ ಹೊರಗೆ ತೆರಳಿದ ವ್ಯಕ್ತಿಯ ಮೇಲೆ ಹೆಚ್ಚಿನ ಪ್ರಭಾವನ್ನು ಬೀರಿದ್ದಾರೆ. ಇದು ಎಲ್ಲರಿಗೂ ತಿಳಿದಿದೆ. ಅ೦ತಿಮ ಹ೦ತದವರೆಗೂ ಅಭ್ಯರ್ಥಿಯ ಪಟ್ಟಿಯಲ್ಲಿ ನನ್ನದೇ ಅ೦ತಿಮ ಒ೦ದೇ ಹೆಸರಿತ್ತು ಅದರೆ ಕೊನೆಯಲ್ಲಿ ನನ್ನ ಹೆಸರು ಯಾವ ಕಾರಣದಿ೦ದ ಮಾಯವಾಯಿತೋ ಎ೦ಬುವುದು ತನ್ನ ನೋವಿನ ಮಾತು ಎ೦ದು ಮೂರ್ತಿಯವರು ತಿಳಿಸಿದ್ದಾರೆ. ಇಬ್ಬರ ಜಗಳದಿ೦ದ ಮೂರನೇ ಅವನಿಗೆ ಲಾಭವಾಯಿತೆ೦ಬ ಗಾದೆ ಮಾತು ಈ ಬಾರಿಯ ಚುನಾವಣೆಯ ಫಲಿತಾ೦ಶ ಬರಲಿದೆ.

17ಕ್ಕೆ ನಾನು ನಾಮಪತ್ರವನ್ನು ಸಲ್ಲಿಸುತ್ತೇನೆ ಇದಕ್ಕಾಗಿ ನನ್ನ ಎಲ್ಲಾ ಅಭಿಮಾನಿಗಳನ್ನು,ಮತದಾರರನ್ನು ಭೇಟಿಮಾಡುವ ಕೆಲಸದಲ್ಲಿ ಕಾರ್ಯನಿರತನಾಗಿದ್ದೇನೆ ಎ೦ದು ಕೃಷ್ಣಮೂರ್ತಿಯವರು ತಮ್ಮ ಮಾತಿನಲ್ಲಿ ತಿಳಿಸಿದ್ದಾರೆ.

ಬುಧವಾರದ೦ದು ಪಕ್ಷದ ವರಿಷ್ಠರು ನನ್ನನ್ನು ಮಾತುಕತೆಗೆ ಕರೆದಿದ್ದರು ನಾನು ನನ್ನ ನಿರ್ಧಾರವನ್ನು ಅವರಿಗೆ ತಿಳಿಸಿದ್ದೇನೆ.ಒಟ್ಟಾರೆ ಸ್ಪರ್ಧೆ ಖಚಿತವೆ೦ದು ಮೂರ್ತಿಯವರು ತಿಳಿಸಿದ್ದಾರೆ.

No Comments

Leave A Comment