ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಪಂಜಾಬ್ ನ ಬಟಿಂಡಾ ಸೇನಾ ನೆಲೆ ಮೇಲೆ ಗುಂಡಿನ ದಾಳಿ: ನಾಲ್ವರ ಸಾವು, ಮುಂದುವರಿದ ಕಾರ್ಯಾಚರಣೆ; ಭಯೋತ್ಪಾದಕ ದಾಳಿಯಲ್ಲ- ಪೊಲೀಸರ ಸ್ಪಷ್ಟನೆ

ಬಟಿಂಡಾ: ಪಂಜಾಬ್ ನ  ಬಟಿಂಡಾ ಮಿಲಿಟರಿ ಸ್ಟೇಶನ್ ನಲ್ಲಿ ಬುಧವಾರ ಮುಂಜಾನೆ  ನಡೆದ ಗುಂಡಿನ ದಾಳಿಯ ಪ್ರಕರಣದಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಬಟಿಂಡಾ ಮಿಲಿಟರಿ ಠಾಣೆಯೊಳಗೆ ಮುಂಜಾನೆ 04:35 ರ ಸುಮಾರಿಗೆ ಗುಂಡಿನ ದಾಳಿಯ ಘಟನೆ ವರದಿಯಾಗಿದೆ.  ಘಟನಾ ಪ್ರದೇಶವನ್ನು ಸುತ್ತುವರಿಯಲಾಗಿದ್ದು, ಚಲನವಲನವನ್ನು ನಿರ್ಬಂಧಿಸಲಾಗಿದೆ.

ಎಸ್‌ಎಸ್‌ಪಿ ಬಟಿಂಡಾ ಪ್ರಕಾರ, “ಈ  ಘಟನೆಯು ಭಯೋತ್ಪಾದಕ ದಾಳಿಯಲ್ಲ”. ಇದು ಭಯೋತ್ಪಾದಕ ದಾಳಿಯಂತೆ ಕಾಣುತ್ತಿಲ್ಲ. ಇದು ವೈಯಕ್ತಿಕ ಹತ್ಯೆಯ ಪ್ರಕರಣದಂತೆ ಕಾಣುತ್ತಿದೆ” ಎಂದುಪಂಜಾಬ್ ಪೊಲೀಸ್ ಹಾಗೂ  ಗುಪ್ತಚರ ಮೂಲಗಳು ತಿಳಿಸಿವೆ.

ಬೆಳಗ್ಗೆ 4.35ರ ಹೊತ್ತಿಗೆ ಮಿಲಿಟರಿ ನೆಲೆಯ ಒಳಗೆ ಗುಂಡಿನ ದಾಳಿ ನಡೆದಿದೆ. ಪ್ರದೇಶದ ಒಳಗೆ ಯಾರೋ ಅಪರಿಚಿತರು ಪ್ರವೇಶ ಮಾಡಿದ್ದನ್ನು ಅರಿತ ಕೂಡಲೇ ತುರ್ತು ಪ್ರತಿರೋಧ ತಂಡಗಳು ಕಾರ್ಯಾಚರಣೆಗೆ ಇಳಿದವು. ಶೋಧ ಕಾರ್ಯಾಚರಣೆ ಈಗಲೂ ಮುಂದುವರಿಯುತ್ತಿವೆ ಎಂದು ಸೇನೆ ತಿಳಿಸಿದೆ.

No Comments

Leave A Comment