ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಬಾಬ್ರಿ ಧ್ವಂಸದಲ್ಲಿ ಶಿವಸೇನೆ ಭಾಗಿಯಾಗಿಲ್ಲವೆಂಬ ಹೇಳಿಕೆ ಒಪ್ಪಿಕೊಳ್ಳುತ್ತೀರಾ: CM ಶಿಂಧೆಗೆ ಉದ್ಧವ್ ಠಾಕ್ರೆ ಪ್ರಶ್ನೆ
ಮುಂಬೈ: ಬಾಬರಿ ಮಸೀದಿ ಧ್ವಂಸದಲ್ಲಿ ಒಬ್ಬ ಶಿವಸೇನೆ ಕಾರ್ಯಕರ್ತನೂ ಭಾಗಿಯಾಗಿಲ್ಲ ಎಂದು ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶಿವಸೇನಾ(ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರು ತಮ್ಮ ಸಂಪುಟದ ಸಚಿವರ ಈ ಹೇಳಿಕೆಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ರಾಜೀನಾಮೆ ನೀಡಬೇಕು ಇಲ್ಲವೇ ಪಾಟೀಲ್ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಮಸೀದಿಯನ್ನು ಉರುಳಿಸುವಾಗ ಇಲಿಗಳು ತಮ್ಮ ಬಿಲಗಳಲ್ಲಿ ಅಡಗಿಕೊಂಡಿದ್ದವು ಎಂದು ಹೇಳುವ ಮೂಲಕ ಠಾಕ್ರೆ ಬಿಜೆಪಿಗೆ ಟಾಂಗ್ ನೀಡಿದೆ. ತಮ್ಮ ಪಕ್ಷದ ಹಿಂದುತ್ವವೇ ರಾಷ್ಟ್ರೀಯತೆ ಎಂದು ಭಾವಿಸುತ್ತದೆ. ಆದರೆ ಭಾರತೀಯ ಜನತಾ ಪಕ್ಷ(ಬಿಜೆಪಿ) ಅದರ ಹಿಂದುತ್ವ ಏನು ಎಂಬುದನ್ನು ವಿವರಿಸಬೇಕು ಎಂದು ಮಾಜಿ ಸಿಎಂ ಹೇಳಿದ್ದಾರೆ.
ಶಿವಸೇನೆ(ಯುಬಿಟಿ) ನಾಯಕ ಸಂಜಯ್ ರಾವುತ್ ಕೂಡ ಟ್ವೀಟ್ ಮಾಡಿದ್ದು, ಶಿಂಧೆ ಪಾಟೀಲ್ ಅವರ ಹೇಳಿಕೆಯನ್ನು ಒಪ್ಪಿಕೊಳ್ಳುತ್ತೀರಾ, ಅದನ್ನು ಒಪ್ಪಿಕೊಂಡರೇ ಸಿಎಂ ರಾಜೀನಾಮೆ ನೀಡಬೇಕು ಎಂದು ಕೇಳಿದ್ದಾರೆ. ಇನ್ನು ಪಾಟೀಲ್ ಹೇಳಿಕೆಗೆ ಯಾವ ಯಾವ ಸಚಿವರು ರಾಜೀನಾಮೆ ನೀಡುತ್ತಾರೆ?. ‘ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಅನುಯಾಯಿಗಳು ಎಂದು ಹೇಳಿಕೊಳ್ಳುವ 40 ಶಿವಸೇನೆ ಶಾಸಕರು (ಸಿಎಂ ಶಿಂಧೆ ನೇತೃತ್ವದ ಪಕ್ಷದ) ಈಗ ಏನು ಮಾಡುತ್ತಾರೆ?” ಎಂದು ಕೇಳಿದ್ದಾರೆ.
ಬಾಬರಿ ಕಟ್ಟಡವನ್ನು ಧ್ವಂಸಗೊಳಿಸಿದ ನಂತರ, ದಿವಂಗತ ಶಿವಸೇನಾ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಅವರು ಹೀಗೆ ಹೇಳಿದ್ದರು. “ಬಾಬ್ರಿ ಪಡ್ಲಿ, ತಿ ಪಡ್ನಾರ್ಯ ಶಿವ ಸೈನಿಕಾಂಚ ಮಾಲಾ ಅಭಿಮಾನ್ ಅಹೇ” (ಬಾಬರಿಯನ್ನು ಧ್ವಂಸ ಮಾಡಿದ ಶಿವಸೈನಿಕರ ಬಗ್ಗೆ ನನಗೆ ಹೆಮ್ಮೆ ಇದೆ) ಎಂದು ಪ್ರಶಂಸಿಸಿದ್ದರು.
1992ರ ಡಿಸೆಂಬರ್ 6ರಂದು ಅಯೋಧ್ಯೆಯ ಬಾಬರಿ ಮಸೀದಿಯನ್ನು ಬಜರಂಗದಳ ಮತ್ತು ದುರ್ಗಾ ವಾಹಿನಿ ಉರುಳಿಸಿದಾಗ ಶಿವಸೇನೆಯ ಒಬ್ಬ ಕಾರ್ಯಕರ್ತನೂ ಅದರ ಬಳಿ ಇರಲಿಲ್ಲ ಎಂದು ಏಕನಾಥ್ ಶಿಂಧೆ ಸರ್ಕಾರದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವರಾಗಿರುವ ಬಿಜೆಪಿಯ ಹಿರಿಯ ನಾಯಕ ಚಂದ್ರಕಾಂತ್ ಪಾಟೀಲ್ ಹೇಳಿಕೆ ನೀಡಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.