Log In
BREAKING NEWS >
Nandini Milk: ಕೆಎಂಎಫ್ ನಂದಿನಿ ಮಿಲ್ಕ್ ಹೊಸ ದಾಖಲೆ​​: ಒಂದೇ ದಿನ 51 ಲಕ್ಷ ಲೀಟರ್ ಹಾಲು ಮಾರಾಟ....

2023-24ರ ಭಾರತದ ದೇಶೀಯ ಕ್ರಿಕೆಟ್ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

ಮುಂಬೈ: 2023-24ರ ಭಾರತದ ದೇಶೀಯ ಋತುವಿನ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸೋಮವಾರ ಪ್ರಕಟಿಸಿದೆ. ಜೂನ್ 28 ರಂದು ದುಲೀಪ್ ಟ್ರೋಫಿ ಪಂದ್ಯಾವಳಿಯೊಂದಿಗೆ ದೇಶಿಯ ಕ್ರಿಕೆಟ್ ಪ್ರಾರಂಭವಾಗಲಿದ್ದು, ಮುಂದಿನ ವರ್ಷ ಜನವರಿ 5 ರಿಂದ ಪ್ರಮುಖ ರಣಜಿ ಟ್ರೋಫಿ ಪ್ರಾರಂಭವಾಗಲಿದೆ.

ಆರು ವಲಯ ತಂಡಗಳ ನಡುವೆ ಆಡಲಾಗುವ ದುಲೀಪ್ ಟ್ರೋಫಿ ನಂತರ ದೇವಧರ್ ಟ್ರೋಫಿ (ಪಟ್ಟಿ ಎ) (ಜುಲೈ 24 ರಿಂದ ಆಗಸ್ಟ್ 3), ಇರಾನಿ ಕಪ್ (ಅಕ್ಟೋಬರ್ 1-5), ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪುರುಷರ ಟಿ20 ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳು (ಅಕ್ಟೋಬರ್. 16-ನವೆಂಬರ್ 6) ಮತ್ತು ವಿಜಯ್ ಹಜಾರೆ ಟ್ರೋಫಿ (ನವೆಂಬರ್ 23-ಡಿಸೆಂಬರ್ 15) ಪಂದ್ಯಾವಳಿ ನಡೆಯಲಿದೆ.

ರಣಜಿ ಟ್ರೋಫಿ ಹಿರಿಯ ಆಟಗಾರರ ವೇಳಾಪಟ್ಟಿಯ ಕೊನೆಯ ಪಂದ್ಯಾವಳಿಯಾಗಿದ್ದು, ಜನವರಿ 5 ರಿಂದ ಫೆಬ್ರವರಿ 19 ರವರೆಗೆ ಎಲೈಟ್ ಗ್ರೂಪ್ ಲೀಗ್ ಪಂದ್ಯಗಳನ್ನು ಆಡಲಾಗುತ್ತದೆ, ಆದರೆ ನಾಕ್-ಔಟ್ ಸುತ್ತು ಫೆಬ್ರವರಿ 23 ರಿಂದ ಮಾರ್ಚ್ 14 ರವರೆಗೆ ಇರುತ್ತದೆ. ಟೂರ್ನಿಯ ಅವಧಿಯು 70 ದಿನ ಆಗಿದೆ.  ಪ್ಲೇಟ್ ಗುಂಪಿನ ಲೀಗ್ ಪಂದ್ಯಗಳು ಜನವರಿ 5 ಮತ್ತು ಫೆಬ್ರವರಿ 5 ರ ನಡುವೆ ನಡೆಯಲಿದ್ದು, ನಾಕ್-ಔಟ್ ಸುತ್ತು ಫೆಬ್ರವರಿ 9-22 ರವರೆಗೆ ನಡೆಯಲಿದೆ.

No Comments

Leave A Comment