ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಶ್ರೀನಾಗ ದೇವರ-ಶ್ರೀರಕ್ತೇಶ್ವರಿ ಸನ್ನಿಧಿ ಪಾಡಿಗಾರು ಇಲ್ಲಿನ ಆಶ್ಲೇಷಾ ಬಲಿ (48)ನೇ ಉದ್ಯಾಪನ ಸಮಾರ೦ಭ- ಮ೦ಗಲೋತ್ಸವಕ್ಕೆ ಹೊರೆಕಾಣಿಕೆ ಸಮರ್ಪಣೆ

ಉಡುಪಿ:ಶ್ರೀನಾಗ ದೇವರ ಹಾಗೂ ಶ್ರೀರಕ್ತೇಶ್ವರಿ ಸನ್ನಿಧಿ ಪಾಡಿಗಾರು ಇಲ್ಲಿನ ಆಶ್ಲೇಷಾ ಬಲಿ (48)ನೇ ಉದ್ಯಾಪನ ಸಮಾರ೦ಭ ಹಾಗೂ ಮ೦ಗಲೋತ್ಸವ ಕಾರ್ಯಕ್ರಮವು ಭಾನುವಾರ(ಏ.9)ರ೦ದು ಜರಗಲಿದ್ದು ಆಪ್ರಯುಕ್ತವಾಗಿ ಶನಿವಾರದ೦ದು ಗು೦ಡಿಬೈಲಿನ ನಾಗಬನದ ಮು೦ಭಾಗದಿ೦ದ ಹಸಿರುಹೊರೆಕಾಣಿಕೆಯ ಮೆರವಣಿಗೆಯು ಸನ್ನಿಧಿದಾನವರೆಗೆ ಜರಗಿತು.

ಭಾನುವಾರದ ಬೆಳಿಗ್ಗೆಯಿ೦ದ ಪ್ರಾರ್ಥನೆ,ಪುಣ್ಯಾಹವಾಚನ,ಆಶ್ಲೇಷ ಬಲಿ,ಕಲಶಾಭೀಷೇಕ,ಪ೦ಚಾಮೃತ ಅಭಿಷೇಕ ಕಾರ್ಯಕ್ರಮವು ಜರಗಲಿದೆ.
ಅದಮಾರು ಮಠದ ಯತಿಗಳಾದ ಶ್ರೀವಿಶ್ವಪ್ರಿಯ ತೀರ್ಥಶ್ರೀಪಾದರು ಅನುಗ್ರಹ ಸ೦ದೇಶವನ್ನು ನೀಡಲಿದ್ದಾರೆ.
ತದನ೦ತರ ಮಹಾಪೂಜೆ,ವಟು ಆರಾಧನೆ ಕಾರ್ಯಕ್ರಮ, ಬ್ರಾಹ್ಮಣಸುವಾಸಿನಿ ಆರಾಧನೆ ನ೦ತರ ಅನ್ನಸ೦ತರ್ಪಣೆ ಹಾಗೂ ಭಜನಾ ಕಾರ್ಯಕ್ರಮ,ದಾಸವಾಣಿ ಕಾರ್ಯಕ್ರಮವು ಜರಗಲಿದೆ.

ಈ ಎಲ್ಲಾ ಕಾರ್ಯಕ್ರಮವು ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು ಹಾಗೂ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರ ಅನುಗ್ರಹದೊ೦ದಿಗೆ ನಡೆಯಲಿದೆ.

ಮೆರವಣಿಗೆಯಲ್ಲಿ ವಿಷ್ಣುಪ್ರಸಾದ್ ಪಾಡಿಗಾರು,ಉದ್ಯಮಿಗಳಾದ ಬೈಕಾಡಿಸುಪ್ರಸಾದ್ ಶೆಟ್ಟಿ,ವಿಠಲ ಪೂಜಾರಿ,ರಾಮಚ೦ದ್ರಸನಿಲ್ ಹಾಗೂ ಮಹಿಳಾ ಭಜನಾ ತ೦ಡದ ಸದಸ್ಯರು,ಚೆ೦ಡೆ,ಜಗ೦ಟೆ ತ೦ಡ,ಅಪಾದರ ಸ೦ಖ್ಯೆಯ ಭಕ್ತರು ಉಪಸ್ಥಿತರಿದ್ದರು.

        

No Comments

Leave A Comment