Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ತೀವ್ರ ಜ್ವರ, ನಿಶ್ಯಕ್ತಿಯಿಂದ ಬಳಲುತ್ತಿರುವ ನಟಿ ಖುಷ್ಬೂ ಸುಂದರ್, ಹೈದರಾಬಾದಿನ ಆಸ್ಪತ್ರೆಗೆ ದಾಖಲು

ಹೈದರಾಬಾದ್: ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್‌ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಶುಕ್ರವಾರ ತಿಳಿಸಿದ್ದಾರೆ.

ರಜನಿಕಾಂತ್ ಮತ್ತು ಪವನ್ ಕಲ್ಯಾಣ ಅವರಂತಹ ಟಾಪ್ ನಟರ ಜೊತೆ ನಟಿಸಿದ್ದ ಖುಷ್ಬೂ ಸುಂದರ್ ಚಿತ್ರರಂಗದಲ್ಲಿ ಭಾರಿ ಹೆಸರು ಮಾಡಿದ್ದಾರೆ. ಅವರ ಆಕರ್ಷಕ ನೋಟ ಮತ್ತು ಪ್ರಾಮಾಣಿಕ ಅಭಿನಯದಿಂದಾಗಿ ಅನೇಕರು ಅವರನ್ನು ಪ್ರೀತಿಸುತ್ತಾರೆ. ನಟನೆಯಿಂದ ರಾಜಕೀಯಕ್ಕೆ ಪ್ರವೇಶಿಸಿರುವ ಖುಷ್ಬೂ ಅವರು ಅಲ್ಲೂ ಯಶಸ್ಸನ್ನು ಕಂಡವರು ಎಂದರೆ ತಪ್ಪಾಗಲಾರದು.

ಜ್ವರ, ದೇಹದ ನೋವು ಮತ್ತು ನಿಶ್ಯಕ್ತಿಯಿಂದ ಆಸ್ಪತ್ರೆಗೆ ದಾಖಲಾಗಿರುವುದಾಗಿ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ. ಖುಷ್ಬೂ ಅವರು ಆಸ್ಪತ್ರೆಯ ಫೋಟೊಗಳನ್ನು ಸಹ ಹಂಚಿಕೊಂಡಿದ್ದಾರೆ ಮತ್ತು ಆರೋಗ್ಯದ ಬಗ್ಗೆ ಯಾವುದೇ ಎಚ್ಚರಿಕೆ ಚಿಹ್ನೆಗಳನ್ನು ನಿರ್ಲಕ್ಷ್ಯಿಸದಂತೆ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.

‘ಜ್ವರ ತುಂಬಾ ಕೆಟ್ಟದಾಗಿದೆ. ಅದು ನನ್ನ ಮೇಲೆ ಪರಿಣಾಮ ಬೀರಿದೆ. ಅತಿ ಹೆಚ್ಚು ಜ್ವರ, ಕೊಲ್ಲುವಂತ ದೇಹದ ನೋವು ಮತ್ತು ನಿಶ್ಯಕ್ತಿಯಿಂದಾಗಿ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ಅದೃಷ್ಟವಶಾತ್, ಹೈದರಾಬಾದಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು, ಇಲ್ಲಿ ಉತ್ತಮ ಆರೈಕೆ ಸಿಗುತ್ತಿದೆ. ಆರೋಗ್ಯದ ಕುರಿತಾಗಿ ನಿಮ್ಮ ದೇಹವು ನೀಡುವ ಯಾವುದೇ ಚಿಹ್ನೆಗಳನ್ನು ನಿರ್ಲಕ್ಷಿಸಬೇಡಿ. ಚೇತರಿಕೆಯ ಹಾದಿಯಲ್ಲಿದ್ದೇನೆ. ಆದರೆ, ಬಹಳ ದೂರ ಹೋಗಬೇಕಾಗಿದೆ’ ಎಂದು ಖುಷ್ಬೂ ಬರೆದುಕೊಂಡಿದ್ದಾರೆ.

No Comments

Leave A Comment