ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಜಾರ್ಖಾಂಡ್’ನಲ್ಲಿ ಎನ್ಕೌಂಟರ್: ಐವರು ನಕ್ಸಲರ ಹೊಡೆದುರುಳಿಸಿದ ಭದ್ರತಾ ಪಡೆ
ರಾಂಚಿ (ಜಾರ್ಖಂಡ್): ಜಾರ್ಖಂಡ್ ರಾಜ್ಯದ ಛತ್ರದಲ್ಲಿ ಭದ್ರತಾ ಪಡೆಗಳು ಎನ್ಕೌಂಟರ್ ನಡೆಸಿದ್ದು, ಐವರು ನಕ್ಸಲರನ್ನು ಹೊಡೆದುರುಳಿಸಿದ್ದಾರೆ.
ಹತ್ಯೆಗೀಡಾದ ಐವರ ಪೈಕಿ ಇಬ್ಬರಿಗೆ ತಲಾ 25 ಲಕ್ಷ ರೂ ಹಾಗೂ ಮೂವರ ಪತ್ತೆಗೆ ತಲಾ 5 ಲಕ್ಷ ರೂ ಇನಾಮು ಘೋಷಣೆ ಮಾಡಲಾಗಿತ್ತು.
ಸಿಆರ್‌ಪಿಎಫ್ ಕೋಬ್ರಾ ಬೆಟಾಲಿಯನ್, ಜೆಎಪಿ ಮತ್ತು ಐಆರ್‌ಬಿ ಜೊತೆಗೆ ಪಲಾಮು ಮತ್ತು ಚತ್ರಾ ಜಿಲ್ಲೆಗಳ ಪೊಲೀಸ್ ಪಡೆಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು ಎಂದು ತಿಳಿದುಬಂದಿದೆ.
ಗೌತಮ್ ಪಾಸ್ವಾನ್ ಮತ್ತು ಚಾರ್ಲಿ ಇಬ್ಬರೂ ವಿಶೇಷ ಪ್ರದೇಶ ಸಮಿತಿಯ ಸದಸ್ಯರಾಗಿದ್ದು, ಇವರ ಬಂಧನಕ್ಕೆ ಈ ಹಿಂದೆ ಪೊಲೀಸರು ತಲಾ 25 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದ್ದರು. ನಂದು, ಅಮರ್ ಗಂಜು ಮತ್ತು ಸಂಜೀವ್ ಭುಯಾನ್ ಉಪ ವಲಯ ಕಮಾಂಡರ್‌ಗಳಾಗಿದ್ದು, ಇವರಿಗೆ ತಲಾ 5 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಲಾಗಿತ್ತು.
ಪಲಾಮು ಗಡಿಯಲ್ಲಿರುವ ಛಾತಾರಾದಲ್ಲಿನ ಲಾವಾಲಾಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಡಿನಲ್ಲಿ ಕೆಲವು ಮಾವೋವಾದಿ ಕಮಾಂಡರ್‌ಗಳಿರುವ ಕುರಿತು ಮಾಹಿತಿ ತಿಳಿದುಬಂದಿತ್ತು. ಮಾಹಿತಿ ಹಿನ್ನೆಲೆಯಲ್ಲಿ ಸಿಆರ್‌ಪಿಎಫ್ ಕೋಬ್ರಾ ಬೆಟಾಲಿಯನ್, ಜೆಎಪಿ ಮತ್ತು ಐಆರ್‌ಬಿ ಜೊತೆಗೆ ಪಲಾಮು ಮತ್ತು ಚತ್ರಾ ಜಿಲ್ಲೆಗಳ ಪೊಲೀಸ್ ಪಡೆಗಳುಕಾರ್ಯಾಚಣೆ ಆರಂಭಿಸಿತ್ತು.
ಬೆಳಗ್ಗೆ 9 ಗಂಟೆ ಸುಮಾರಿಗೆ ಕಾರ್ಯಾಚರಣೆ ಆರಂಭವಾಗಿತ್ತು. ಈ ವೇಳೆ ಭದ್ರತಾ ಪಡೆಗಳನ್ನು ಕಂಡ ಮಾವೋವಾದಿಗಳು ಗುಂಡಿನ ದಾಳಿ ನಡೆಸಲು ಆರಂಭಿಸಿದರು. ಇದಕ್ಕೆ ಭದ್ರತಾ ಪಡೆಗಳು ದಿಟ್ಟ ಉತ್ತರ ನೀಡಿ, ಐವರು ನಕ್ಸಲರನ್ನು ಹತ್ಯೆ ಮಾಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹತ್ಯೆಯಾದ ನಕ್ಸಲರಿಂದ ಇದೀಗ ಎಕೆ 47, ಇನ್ಸಾಸ್ ರೈಫಲ್ಸ್ ವಶಪಡಿಸಿಕೊಳ್ಳಲಾಗಿದ್ದು, ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದುಬಂದಿದೆ.